ಮಧುಮೇಹ ಕಾಯಿಲೆ ಒಮ್ಮೆ ಕಾಣಿಸಿಕೊಂಡರೆ, ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಇದಕ್ಕಾಗಿ ಸರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯ ಕಾರಿ ಜೀವನಶೈಲಿಯನ್ನು ಅನುಸರಿಸಿಕೊಂಡು.
ಇತ್ತೀಚಿನ ದಿನಗಳಲ್ಲಿ ಹೇಗೆ ಆಗಿಬಿಟ್ಟಿದೆ ಎಂದರೆ, ದಿನೇ ದಿನೇ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ವಯಸ್ಸಿನ್ನೂ ಮೂವತ್ತು-ಮೂವತ್ತೈದು ದಾಟಿರುವುದಿಲ್ಲ, ದೀರ್ಘಕಾಲದ ಹಾಗೂ ನಿರ್ಲಕ್ಷ್ಯ ಮಾಡಿದರೆ ಆರೋಗ್ಯಕ್ಕೆ ಮಾರಕವಾಗುವ ಕಾಯಿಲೆ ಎಂದೇ ಕರೆಯಲಾಗುವ, ಮಧುಮೇಹ ರೋಗ ಕಾಣಿಸಿಕೊಳ್ಳುತ್ತಿರುವು ನಿಜಕ್ಕೂ ಆತಂಕ ಕಾರಿ ವಿಷ್ಯವಾಗಿದೆ.
ಹಿಂದಿನ ಕಾಲದಲ್ಲಿ ಒಂದು ಮಾತಿತ್ತು, ಹಣ-ಆಸ್ತಿ ಸಂಪತ್ತು ಹೆಚ್ಚಾಗಿ ಇರುವವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆಯನ್ನು ಶ್ರೀಮಂತರ ಕಾಯಿಲೆ ಎಂದೇ ಕರೆಯಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಈ ಕಾಯಿಲೆಗೆ ಬಡವ-ಶ್ರೀಮಂತ ಎನ್ನುವ ಯಾವುದೇ ಬೇದಭಾವ ಇಲ್ಲದೆ ಎಲ್ಲರಲ್ಲಿಯೂ ಕೂಡ ಈ ಕಾಯಿಲೆ ಕಣಿಸುತ್ತಿದೆ. ಇದಕ್ಕೆಲ್ಲಾ ಕಾರಣಗಳನ್ನು ನೋಡುವುದಾದರೆ, ಒತ್ತಡದ ಜೀವನ, ಅನಾರೋಗ್ಯಕಾರಿ ಜೀವನಶೈಲಿ, ಸರಿಯಾದ ಆಹಾರ ಪದ್ಧತಿಗಳನ್ನು ಅನುಸರಿಸದೇ ಇರುವುದು, ಜೊತೆಗೆ ದೈನಂದಿನ ಯೋಗಾಭ್ಯಾಸ, ವ್ಯಾಯಾಮಗಳನ್ನು ಸರಿಯಾಗಿ ಅನುಸರಿಸದೇ ಇರುವುದು, ಮುಖ್ಯವಾಗಿ ಕೆಟ್ಟ ಅಭ್ಯಾಸಗಳು ಅಂದರೆ ಡ್ರಿಂಕ್ಸ್, ಪಾರ್ಟಿ, ಮೋಜು ಮಸ್ತಿ, ಇವೆಲ್ಲಾ ಅಭ್ಯಾಸಗಳಿಂದಾಗಿ, ಸಕ್ಕರೆಕಾಯಿಲೆ ಎನ್ನುವ ಮಾರಕ ಕಾಯಿಲೆ ನಮ್ಮನ್ನು ಆವರಿಸಿಬಿಡುತ್ತವೆ.
ಮಧುಮೇಹ ಒಮ್ಮೆ ಕಾಣಿಸಿಕೊಂಡರೆ, ಆಮೇಲೆ ನಮ್ಮನ್ನು ಬಿಟ್ಟು ಹೋಗುವುದಿಲ್ಲ!
ಹೌದು! ಒಮ್ಮೆ ಮನುಷ್ಯನಿಗೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಕಾಣಿಸಿಕೊಂಡರೆ ಅದು ಸಂಪೂರ್ಣ ವಾಗಿ ವಾಸಿಯಾಗುವ ಕಾಯಿಲೆ ಅಲ್ಲ! ಈ ಸಮಯದಲ್ಲಿ ಸರಿಯಾದ ಆಹಾರ ಪದ್ಧತಿ ಹಾಗೂ ವೈದ್ಯರು ನೀಡಿರುವ ಚಿಕಿತ್ಸೆಯನ್ನು ಸರಿಯಾಗಿ ಅನುಸರಿಸಿದರೆ, ಮಾತ್ರ ಈ ಕಾಯಿಲೆಯನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಬಹುದು. ಒಟ್ಟಾರೆಯಾಗಿ ಹೇಳುವುದಾದರೆ, ಈ ಕಾಯಿಲೆಯ ಸಮಸ್ಯೆ ಹೆಚ್ಚಾಗದಂತೆ ಒಂದು ಪ್ರಮಾಣದಲ್ಲಿ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಆಹಾರಪಥ್ಯ ಹಾಗೂ ವೈದ್ಯರು ನೀಡುವ ಔಷಧಿ
- ಕೆಲವರು ಮಧುಮೇಹ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿ, ತಮ್ಮಪಾಡಿಗೆ ತಾವಿರುತ್ತಾರೆ! ಆದರೆ ಇದು ನಿಜಕ್ಕೂ ಆತಂಕಕಾರಿ ವಿಷ್ಯ! ಒಂದು ವೇಳೆ ರಕ್ತದಲ್ಲಿ ಸಕ್ಕರೆ ಪ್ರಾಮಾಣ ಹೆಚ್ಚಾಗುತ್ತಾ, ಹೋದರೆ, ಕೊನೆಗೆ ಮಧುಮೇಹ ನಿಯಂತ್ರಣಕ್ಕೆ ಸಿಗದೇ, ಕೊನೆಗೆ ಪ್ರಾಣಕ್ಕೆ ಕುತ್ತು ಬರುವ ಅಪಾಯ ಹೆಚ್ಚಿರುತ್ತದೆ.
- ಹೀಗಾಗಿ ಪ್ರತಿಯೊಬ್ಬರೂ ಕೂಡ ತನ್ನ ಜೀವನ ಶೈಲಿಯಲ್ಲಿ ಮತ್ತು ಆಹಾರ ಪದ್ಧತಿಯಲ್ಲಿ, ವೈದ್ಯರ ಸೂಚನೆ ಮೇರೆಗೆ ಕೆಲವೊಂದು ಬದಲಾವಣೆ ತಂದು ಹಾಗೂ ಅವರು ನೀಡುವ ಔಷಧಿಗಳನ್ನು ಸೇವಿಸುತ್ತಾ ಬಂದರೆ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು
ಸಕ್ಕರೆಕಾಯಿಲೆ ಇದ್ದವರು ಬೆಂಡೆಕಾಯಿ ಸೇವಿಸಬೇಕು
- ಒಂದು ವೇಳೆ ನಿಮಗೂ ಕೂಡ ಈ ಮಧುಮೇಹ ಕಾಯಿಲೆ ಇದ್ದರೆ ನಾರಿನಾಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬೇಕು. ಕೆಲವೊಂದು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾ ಣದಲ್ಲಿ ನಾರಿನಾಂಶಗಳು ಕಂಡು ಬರುತ್ತದೆ, ಅದರಲ್ಲಿ ಬೆಂಡೆಕಾಯಿ ಕೂಡ ಒಂದು!
- ಹೌದು ಈ ತರಕಾರಿ ಯಲ್ಲಿ ಸಿಗುವ ನಾರಿನಾಂಶವು, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ನೋಡಿ ಕೊಂಡು, ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ.
- ಬೆಂಡೆಕಾಯಿಯಲ್ಲಿ ಅಪಾರಪ್ರಮಾಣದಲ್ಲಿ ನಾರಿನಾಂಶ, ವಿಟಮಿನ್ ಬಿ6 ಹಾಗೂ ಫೋಲೆಟ್ ಅಂಶ ಗಳು ಕಂಡುಬರುವುದರಿಂದ, ಈ ತರಕಾರಿ ಮಧುಮೇಹಿ ರೋಗಿಗಳ ಸ್ನೇಹಿ ಎಂದರೆ ತಪ್ಪಾಗಲಾರದು! ತಮ್ಮ ದೈನಂದಿನ ಆಹಾರದಲ್ಲಿ ಇದರ ಪಲ್ಯ ಅಥವಾ ಸಾಂಬರ್ ಮಾಡಿ, ಸೇವನೆ ಮಾಡುವುದರಿಂದ, ಈ ಕಾಯಿಲೆಯನ್ನು ಕಂಟ್ರೋಲ್‌ನಲ್ಲಿಡಲು ಸಹಾಯವಾಗುತ್ತದೆ.
ತೊಂಡೆಕಾಯಿ
- ಮನುಷ್ಯನ ಬ್ಬೆರಳಿನ ಗಾತ್ರದ ಬೆಳವಣಿಗೆ ಹೊಂದಿರುವ ಇನ್ನೊಂದು ತರಕಾರಿ ಇದೆ ಎಂದರೆ ಅದು ತೊಂಡೆಕಾಯಿ! ತುಂಬಾನೇ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಈ ತರಕಾರಿಯನ್ನು ಜನರು ತಿನ್ನಲು ಇಷ್ಟ ಪಡುವುದಿಲ್ಲ! ಇದಕ್ಕೆ ಮುಖ್ಯ ಕಾರಣ, ಬಳ್ಳಿಯಲ್ಲಿ ಬೆಳೆಯುವ ಈ ತರಕಾರಿ ಯ ಒಳಗಿನ ಅಂಟಾದ ದ್ರವ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ!
- ಆದರೆ ನಿಜ ಹೇಳಬೇಕೆಂದರೆ ತನ್ನಲ್ಲಿ ಅಪಾರ ಪ್ರಮಾಣದ ನೀರಿನಾಂಶ ಮತ್ತು ನಾರಿನಾಂಶದ ಕಾರಣ ದಿಂದಾಗಿ, ದೀರ್ಘಕಾಲದವರೆಗೆ ಕಾಡುವ ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತವೆ. ಅದರ ಲ್ಲೂ ಸಕ್ಕರೆ ಕಾಯಿಲೆ ಇರುವವರು, ದೇಹದಲ್ಲಿ ದೇಹದಲ್ಲಿ ಏರುಪೇರಾಗುವ ಸಕ್ಕರೆ ಅಂಶದ ಪ್ರಮಾ ಣವನ್ನು ನಿಯಂತ್ರಣಕ್ಕೆ ಬರುವಂತೆ ಮಾಡಲು ತೊಂಡೆಕಾಯಿಯ ಪಲ್ಯ ಸೇವಿಸಲು, ಹಿಂದಿನ ಕಾಲ ದಿಂದಲೂ ಕೂಡ, ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ.
- ಇನ್ನು 2009ರಲ್ಲಿ ನಡೆದ ಒಂದು ಸಂಶೋಧನೆಯಲ್ಲಿ ಕೂಡ ಮಧುಮೇಹಿ ರೋಗಿಗಳ, ದೇಹದ ರಕ್ತ ದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುವಂತಹ ಎಲ್ಲಾ ಆರೋಗ್ಯಕಾರಿ ಗುಣಲಕ್ಷಣಗಳು, ಈ ತರಕಾರಿಯಲ್ಲಿ ಕಂಡು ಬರುತ್ತದೆ ಎಂದು ಸಾಬೀತಾಯಿತು. ಅಷ್ಟೇ ಅಲ್ಲದೆ, ಇದರ ಎಲೆಗಳಿಂದ ಮಾಡಿದ ಜ್ಯೂಸ್ ನ್ನು, ದಿನಾ ಅರ್ಧ ಲೋಟ ಕುಡಿಯುತ್ತಾ ಬರುವುದರಿಂದ ಮಧುಮೇಹ ಕಾಯಿಲೆ ಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಂತೆ.
ಸಂಗ್ರಹ : ಶ್ರೀಪಾಲ್ ಭಂಡಾರಿ ನೆಲ್ಯಾಡಿ
ಮೂಲ: ವಿ ಕೆ