ಮರಳು ಗಾಡಿನ ನೆರಳು
ಕಂಡ ಕನಸೆಲ್ಲ ಕನಸಾಗಿಯೇ ಉಳಿಯಿತು
ಅದೆಂತು ನನಸಾಗುವುದೊ
ಮರೀಚಿಕೆಯಂತೆ ನನ್ನೀ ಬಾಳು…
ಲಗಾಮು ಇಲ್ಲದ ಕುದುರೆಯಂತೆ ಓಡುತ್ತಿದ್ದ ಮನಕೆ
ಹಾಕಿದೆ ನಾ ಕಡಿವಾಣ
ಅದೇಕೋ ತಿಳಿಯೆನು ನಾನ್ಯಾಕೆ ಹೀಗೆ
ಬಣ್ಣ ಬಣ್ಣದ ಕನಸು ಕಂಡವಳು ನಾನು
ಬಣ್ಣದ ಲೋಕದಲ್ಲೇ ಮಿಂದವಳು ನಾನು ಬಣ್ಣವೇ ಇಲ್ಲದೆ ಬದಕುತಿಹೆನು ಇಂದು…
ನೂರೆಂಟು ಆಸೆಗಳು ಅಂದು ಆ ಖುಷಿಯಲ್ಲಿ
ನೂರೆಂಟು ಆಲೋಚನೆಗಳು ಸದಾ ಮನದಲ್ಲಿಂದು
ಭಾವನೆಗೆ ಬೆಲೆಯಇಲ್ಲದಂತಾಯಿತು
ಇಡುವ ಪ್ರತಿ ಹೆಜ್ಜೆಯು ಭಾರವೆನಿಸಿತು
ಮೂಕಳಾದೆ ಮಾತೇ ಹೊರಡದಂತಾಯಿತು
ಹುಡುಕಾಟದ ಪ್ರತಿ ಹಾದಿಯು ಶೂನ್ಯ…
ಅದೇಕೋ ಬಡಿದೆಚ್ಚರಿಸಿತು ಆ ಧ್ವನಿ
ಬದುಕಬೇಕೆಂಬ ಛಲ ಮೂಡಿಸಿತು
ನನ್ನ ನೋವಿನ ಮುಗ್ಧ ನಗು……
–
✍️ವೈಶಾಲಿ ಭಂಡಾರಿ, ಬೆಳ್ಳಿಪ್ಪಾಡಿ