ತೆಂಗಿನ ಎಣ್ಣೆ ಉತ್ತಮವಾದ ಕೊಬ್ಬನ್ನು ಹೊಂದಿದೆ. ಇದು ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹಾಗೂ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಇದು ಅದ್ಭುತವಾದ ಪರಿಮಳವನ್ನು ನೀಡುತ್ತದೆ..!!
ಆದರೆ ಚರ್ಮಕ್ಕೂ ತೆಂಗಿನ ಎಣ್ಣೆ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ ?? ಖಂಡಿತವಾಗಿಯೂ ಪ್ರಯೋಜನಕಾರಿ ಹಾಗೂ ಅತ್ಯುತ್ತಮವಾದದ್ದು.
ನನ್ನ ಅನಿಸಿಕೆ ನಿಮಗೂ ಕೂಡ ಆಶ್ಚರ್ಯವಾಗಬಹುದು ತೆಂಗಿನ ಎಣ್ಣೆಯ ಪ್ರಯೋಜನಗಳನ್ನು ತಿಳಿದುಕೊಂಡ ನಂತರ..!!
ತೆಂಗಿನ ಎಣ್ಣೆಯನ್ನು ಬಳಸುವ ಈ ವಿಧಾನವನ್ನು ಅನುಸರಿಸಿ ಆರೋಗ್ಯಕರ ಹಾಗೂ ಆಕರ್ಷಕರವಾದ ಚರ್ಮವನ್ನು ಹೊಂದಿರಿ.
1. ಚರ್ಮ ಸುಕ್ಕುಗಟ್ಟದೇ ಇರಲು ತೆಂಗಿನ ಎಣ್ಣೆಯನ್ನು ಮಾಶ್ಚರೈಸರ್ ರೀತಿ ಬಳಸಿ.
2. ಸೂರ್ಯನ ಕಿರಣದಿಂದ ಕಪ್ಪಾಗಿರುವ ಚರ್ಮದಿಂದ ತ್ವರಿತವಾಗಿ ಮುಕ್ತಿ ಪಡೆಯಲು ತೆಂಗಿನೆಣ್ಣೆಯನ್ನು ಹಚ್ಚಿ.
3. ಉಗುರಿನ ಮೇಲ್ಭಾಗಕ್ಕೆ ಹಚ್ಚಿ ಇದು ಉಗುರು ಬೆಳೆಯಲು ಸಹಾಯ ಮಾಡುತ್ತದೆ.
4. ಆ್ಯಂಟಿ ಫ್ರೀಜ್ ಟ್ರೀಟ್ ಮೆಂಟ್ ಗಾಗಿ ತೆಂಗಿನೆಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿ.
5. ಚಳಿಯಿಂದ ತುಟಿಯ ಚರ್ಮ ಒಡೆಯುವ ರಿಂದ ಮುಕ್ತಿ ಪಡೆಯಲು ತೆಂಗಿನ ಎಣ್ಣೆಯನ್ನು ಹಚ್ಚಿ.
6. ತಲೆ ಕೂದಲ ಬೆಳವಣಿಗೆಯನ್ನು ಉತ್ತೇಜಿಸಲು ತೆಂಗಿನೆಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ.
7. ಸೊಳ್ಳೆ ಕಡಿತದಿಂದ ಗಾಯ ಅಥವಾ ಗುಳ್ಳೆ ಯಾಗಿದ್ದರೆ ತೆಂಗಿನ ಎಣ್ಣೆಯನ್ನು ಬಳಸಿ.
8. ಕಣ್ಣಿಗೆ ಹಚ್ಚಿರುವ ಕಾಡಿಗೆಯನ್ನು ತೆಂಗಿನ ಎಣ್ಣೆಯಿಂದ ಸುಲಭವಾಗಿ ತೆಗೆಯಬಹುದು.
9. ಚಳಿಯಿಂದ ಚರ್ಮ ಒಡೆದಿದ್ದರೆ ತೆಂಗಿನ ಎಣ್ಣೆಯನ್ನು ಬಳಸಿ
10. ಅಂಗಾಲಿನ ಒಡಕಿಗೂ ಬಳಸಬಹುದು.
11. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಮಲಗುವುದರಿಂದ ಚರ್ಮ ಮೃದುವಾಗುತ್ತದೆ ಹಾಗೂ ಒಳ್ಳೆಯ ಪೋಷಣೆ ದೊರಕುತ್ತದೆ.
12. ವೇರಿಕೋಸ್ ವೈನ್ಸ್ ತೊಂದರೆಯಿಂದ ಬಳಲುತ್ತಿದ್ದರೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ ಇದೊಂದು ಅತ್ಯುತ್ತಮವಾದ ವಿಧಾನ.
✍: ವಿದ್ಯಾ ಪ್ರಕಾಶ್ ಭಂಡಾರಿ
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.
ತೆಂಗಿನೆಣ್ಣೆಯ ಮಹತ್ವವನ್ನು ಓದಿದೆ…. ನಾಡಿದ್ದು ದೀಪಾವಳಿಯ ದಿವಸ ಮ್ಯೆಗೆ ತೆಂಗಿನಣ್ಣೆ ಹಚ್ಚಿ ಸ್ನಾನ ಮಾಡುವ ಮನಸ್ಸಾಗಿದೆ….😀😊