January 18, 2025
2

ಹೆರಿಗೆಯ ಬಳಿಕ ಆರೋಗ್ಯವಾಗಿರಲು ಈ ಆಸನಗಳು ಸಹಕಾರಿ

ಮಗುವಿನ ಜನನದ ಬಳಿಕ ತಾಯಿಯ ದೇಹದ ಆರೈಕೆ ಜೊತೆಗೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದ. ಈ ಆಸನಗಳು ಪ್ರಸವಾನಂತರದ ಆರೋಗ್ಯಕ್ಕೆ.

ಒಂದು ಜೀವಕ್ಕೆ ಜೀವ ನೀಡಿ ಮತ್ತೆ ಮೊದಲಿನಂತಾಗುವ ವಿಶೇಷ ಶಕ್ತಿ ಇರುವುದು ತಾಯಿಗೆ ಮಾತ್ರ. ಗರ್ಭಾವಸ್ಥೆಯ ಬಳಿಕ ಮಾನಸಿಕ, ದೈಹಿಕ ಎಲ್ಲಾ ರೀತಿಯ ಬದಲಾವಣೆಗಳಿಗೆ ಒಳಗಾಗಿ ಅವುಗಳನ್ನು ಎದುರಿಸುವ ಶಕ್ತಿ ಆಕೆಗೆ ಮಾತ್ರ ಇರಲು ಸಾಧ್ಯ.

ಪ್ರಸವದ ಬಳಿಕ ಕಾಡುವ ಖಿನ್ನತೆ, ಮಾನಸಿಕ ತುಮಲಗಳಿಗೆ ಯೋಗ, ಪ್ರಾಣಾಯಾಮಗಳು ಸಹಾಯ ಮಾಡುತ್ತವೆ. ಅದೇ ರೀತಿ ಹೆರಿಗೆಯ ಬಳಿಕ ದೇಹದ ತೂಕ ಇಳಿಕೆ ಕೂಡ ಹೆಚ್ಚಾಗಬಹುದು. ಹೀಗಾಗಿ ಯೋಗಾಸನಗಳು ಅತ್ಯುತ್ತಮ ಮಾರ್ಗವಾಗಿದೆ.

ಹಾಗಾದರೆ ಯಾವೆಲ್ಲಾ ಆಸನಗಳು ಹೆರಿಗೆಯ ಬಳಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ ಎನ್ನುವ ಬಗ್ಗೆ ಶ್ವೇತಾ ಗು ಅವರು ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಆದರೆ ನೆನಪಿಡಿ ಸಿಸೆರಿಯನ್‌ ಹೆರಿಗೆಗೆ ಒಳಗಾಗಿದ್ದರೆ 8 ರಿಂದ 10 ವಾರಗಳ ನಂತರ ಪ್ರಾಣಾಯಾಮ ಮತ್ತು ಯೋಗ ವ್ಯಾಯಾಮಗಳೊಂದಿಗೆ ಪ್ರಾರಂಭಿಸಲು ಸಲಹೆ ನೀಡಲಾಗುತ್ತದೆ.

ತ್ರಿಕೋನಾಸನ

ತ್ರಿಕೋನಾಸನವು ಮಂಡಿರಜ್ಜುಗಳನ್ನು ಬಲಪಡಿಸುವ ಯೋಗಾಸನವಾಗಿದೆ. ಈ ಆಸನವನ್ನು ಬೆನ್ನುನೋವು ಇರುವ ತಾಯಂದಿರು ಮಾಡಬಾರದು. ಈ ಆಸನದಿಂದ ಮೊಣಕಾಲುಗಳು, ಬೆನ್ನುಮೂಳೆ, ಭುಜಗಳು ಮತ್ತು ಮಂಡಿರಜ್ಜುಗಳಿಗೆ ಆರಮದಾಯಕ ಅನುಭವ ಸಿಗುತ್ತದೆ. ಅಲ್ಲದೆ ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ ಮತ್ತು ಬೆನ್ನು ನೋವು, ಅಸ್ಥಿ ರಂಧ್ರತೆಯನ್ನು ಗುಣಪಡಿಸುತ್ತದೆ.

ಮಾಡುವ ವಿಧಾನ

  • ನಿಮ್ಮ ಪಾದಗಳಲ್ಲಿ ಆರಾಮವಾಗಿ ನಿಂತುಕೊಳ್ಳಿ. ಹಿಮ್ಮಡಿಯನ್ನು ಒಳಮುಖವಾಗಿ ಇಟ್ಟುಕೊಂಡು ನಿಮ್ಮ ಬಲ ಪಾದವನ್ನು ಹೊರಗೆ ಮುಖಕ್ಕೆ ತಿರುಗಿಸಿ.
  • ಎರಡೂ ಹಿಮ್ಮಡಿಗಳು ನೇರ ರೇಖೆಯಲ್ಲಿರಬೇಕು.
  • ನಂತರ ಬಲಭಾಗಕ್ಕೆ ಬಗ್ಗಿ ಹಸ್ತವನ್ನು ಬಲಗಾಲಿನ ಹತ್ತಿರವಿಡಿ. ಎಡಗೈ ಮೇಲ್ಪುಖವಾಗಿರಲಿ. ನಿಮ್ಮ ಮುಖ ಕೂಡ ಮೇಲ್ಮುಖವಾಗಿರವ ಕೈಗಳನ್ನು ನೋಡುತ್ತಿರಲಿ.

​ಭುಜಂಗಾಸನ

ತಾಯಂದಿರಿಗೆ ಈ ಆಸನವು ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಿ, ಬಾಣಂತಿ ಮಹಿಳೆಯರಲ್ಲಿ ಬೆನ್ನು ನೋವು ಮತ್ತು ಕುತ್ತಿಗೆ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಡೀ ದೇಹಕ್ಕೆ ರಕ್ತ ಪರಿಚಲನೆ ಸುಧಾರಿಸುತ್ತದೆ.

ಮಾಡುವ ವಿಧಾನ

  • ನೆಲದ ಮೇಲೆ ಮಲಗಿ, ಮುಖವನ್ನು ಮುಖವನ್ನು ಮಾಡಿ.
  • ನಿಮ್ಮ ಭುಜಗಳ ಪಕ್ಕದಲ್ಲಿ ನೆಲದ ಮೇಲೆ ನಿಮ್ಮ ಹಸ್ತಗಳನ್ನು ಇಟ್ಟುಕೊಳ್ಳಿ
  • ಪಾದಗಳ ಮೇಲ್ಭಾಗವು ನೆಲಕ್ಕೆ ತಾಗುವಂತೆ ನಿಮ್ಮ ಕಾಲುಗಳನ್ನು ಹಿಂದಕ್ಕೆ ಚಾಚಿ, ನಿಧಾನವಾಗಿ ಉಸಿರಾಡಿ ಮತ್ತು ನಿಮ್ಮ ಮೇಲಿನ ದೇಹವನ್ನು ಮೇಲಕ್ಕೆತ್ತಿ..
  • 25-30 ಸೆಕೆಂಡುಗಳ ಕಾಲ ಈ ಸ್ಥಾನವನ್ನು ಹಿಡಿದುಕೊಳ್ಳಿ. ಬಿಡುಗಡೆ ಮಾಡಿ ಮತ್ತು ನಿಶ್ವಾಸದ ಮೇಲೆ ಮಲಗಿರುವ ಸ್ಥಾನಕ್ಕೆ ಹಿಂತಿರುಗಿ.

ಕುಂಭಕಾಸನ

ಈ ಆಸನವು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಬೆನ್ನು, ತೋಳು ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಈ ಭಂಗಿಯು ಮಣಿಪುರ ಚಕ್ರವನ್ನು ಸಕ್ರಿಯಗೊಳಿಸುವ ಶಕ್ತಿವರ್ಧಕವಾಗಿದ್ದು ವ್ಯಕ್ತಿಗೆ ಭಾವನಾತ್ಮಕ ಸಮತೋಲನ ಮತ್ತು ಸ್ಥಿರತೆಯನ್ನು ತರುತ್ತದೆ.

  • ಈ ಆಸನ ಮಾಡಲು ಮೊದಲು ಹೊಟ್ಟೆಯ ಮೇಲೆ ಮಲಗಿ. ನಂತರ ನಿಧಾನವಾಗಿ ಕೈಗಳ ಸಹಾಯದಿಂದ ದೇಹವನ್ನು ಮೇಲಕ್ಕೆ ಎತ್ತಿ. ಕಾಲಿನ ಬೆರಳನ್ನು ನೆಲಕ್ಕೆ ತಾಗಿಸಿ, ಬಿಗಿಯಾಗಿ ಹಿಡಿದುಕೊಳ್ಳಿ.
  • ನಂತರ ಮುಖವನ್ನು ಕೆಳಕ್ಕೆ ಬಿಡಿ. ನಿಧಾನವಾಗಿ ಉಸಿರಾಟ ನಡೆಸಿ. ನಂತರ ನಿಧಾನವಾಗಿ ಸಹಜ ಸ್ಥಿತಿಗೆ ಬನ್ನಿ

​ವಸಿಷ್ಟಾಸನ

ದೇಹದಲ್ಲಿನ ಕೊಬ್ಬನ್ನು ಕರಗಿಸಲು ಈ ಆಸನ ಸಹಾಯ ಮಾಡುತ್ತದೆ. ಅಲ್ಲದೆ ಪ್ರಸವದ ಬಳಿಕ ಕಾಡುವ ಮಾನಸಿಕ ಖಿನ್ನತೆಯನ್ನು ಸುಧಾರಿಸುತ್ತದೆ. ಇದರ ಜೊತೆಗೆ ಭುಜಗಳು ಮತ್ತು ಮಣಿಕಟ್ಟುಗಳನ್ನು ಬಲಪಡಿಸುತ್ತದೆ. ದೇಹದ ಸಮತೋಲನ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಾಡುವ ವಿಧಾನ

  • ಈ ಆಸನವನ್ನು ಮಾಡಲು ಮೊದಲ ನೇರವಾಗಿ ಮಲಗಿ ನಂತರ ಮೊದಲು ಬಲಭಾಗಕ್ಕೆ ಬಾಗಿ ಕಾಲುಗಳನ್ನು ನೇರವಾಗಿರಿಸಿ. ಬಲಗೈಯನ್ನು ನೇರವಾಗಿ ನೆಲದ ಮೇಲಿರಿಸಿ ದೇಹವನ್ನು ಮೇಲಕ್ಕೆ ಎತ್ತಿ.
  • ನಿಮ್ಮ ದೇಹದ ಸಂಪೂರ್ಣ ಭಾರ ಬಲಗೈ ಮತ್ತು ಬಲಗಾಲಿನ ಮೇಲಿರಲಿ. ಚಿತ್ರದಲ್ಲಿ ತೋರಿಸಿದಂತೆ ನಿಮ್ಮ ದೇಹದ ಆಕೃತಿಯಿರಲಿ. ಅದೇ ಭಂಗಿಯನ್ನು ಇನ್ನೊಂದು ಭಾಗದಲ್ಲಿ ಮಾಡಿ.

​ಪ್ರಾಣಾಯಮದ ಅಭ್ಯಾಸ

ಪ್ರಸವದ ಬಳಿಕ ಆರೋಗ್ಯಕ್ಕೆ ಪ್ರಾಣಾಯಾಮದ ಅಗತ್ಯ ಹೆಚ್ಚಾಗಿರುತ್ತದೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡನ್ನೂ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅನುಲೋಮ್ ವಿಲೋಮ್ ಎನ್ನುವುದು ಯೋಗದಲ್ಲಿ ಒಂದು ನಿರ್ದಿಷ್ಟ ರೀತಿಯ ಪ್ರಾಣಾಯಾಮ ಅಥವಾ ನಿಯಂತ್ರಿತ ಉಸಿರಾಟವಾಗಿದೆ. ಇದು ಉಸಿರಾಡುವಾಗ ಒಂದು ಮೂಗಿನ ಹೊಳ್ಳೆಯನ್ನು ಹಿಡಿದಿಟ್ಟುಕೊಳ್ಳಬೇಕು, ನಂತರ ಉಸಿರಾಡುವಾಗ ಇನ್ನೊಂದು ಮೂಗಿನ ಹೊಳ್ಳೆಯನ್ನು ಹಿಡಿದಿಟ್ಟುಕೊಳ್ಳಬೇಕು.

ಪ್ರಾಣಾಯಾದ ಅಭ್ಯಾಸದಿಂದ ಏಕಾಗ್ರತೆ ಮತ್ತು ಸಹನೆ ಸುಧಾರಿಸುತ್ತದೆ. ಆತಂಕವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಭಾವನಾತ್ಮಕವಾಗಿ ಸ್ವಯಂ-ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ವಿಶ್ರಾಂತಿ ಮತ್ತು ಒಟ್ಟಾರೆ ಸ್ವಾಸ್ಥ್ಯವನ್ನು ಕಾಪಾಡುತ್ತದೆ.

ಮಾಡುವ ವಿಧಾನ

  • ಧ್ಯಾನ ಮಾಡುವ ಭಂಗಿಯಲ್ಲಿ ಕುಳಿತುಕೊಳ್ಳಿ. ಬೆನ್ನುಮೂಳೆ ಮತ್ತು ಕುತ್ತಿಗೆಯನ್ನು ನೇರವಾಗಿ ಇರಿಸಿ ಮತ್ತು ನಿಮ್ಮ ಕಣ್ಣುಗಳನ್ನು ಮುಚ್ಚಿ.
  • ಕೈಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ ಒಂದೆಡು ಸೆಕೆಂಡುಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಿ.
  • ನಂತರ ನಿಮ್ಮ ಬಲಗೈಯ ಮಧ್ಯ ಮತ್ತು ತೋರು ಬೆರಳುಗಳನ್ನು ನಿಮ್ಮ ಅಂಗೈ ಕಡೆಗೆ ಮಡಿಸಿ.
  • ನಿಮ್ಮ ಹೆಬ್ಬೆರಳನ್ನು ನಿಮ್ಮ ಬಲ ಮೂಗಿನ ಹೊಳ್ಳೆಯ ಮೇಲೆ ಮತ್ತು ನಿಮ್ಮ ಉಂಗುರದ ಬೆರಳನ್ನು ನಿಮ್ಮ ಎಡ ಮೂಗಿನ ಹೊಳ್ಳೆಯ ಮೇಲೆ ಇರಿಸಿ.
  • ನಿಮ್ಮ ಬಲ ಮೂಗಿನ ಹೊಳ್ಳೆಯನ್ನು ನಿಮ್ಮ ಹೆಬ್ಬೆರಳಿನಿಂದ ಮುಚ್ಚಿ ಮತ್ತು ನಿಮ್ಮ ಶ್ವಾಸಕೋಶಗಳು ತುಂಬುವವರೆಗೆ ನಿಧಾನವಾಗಿ ಮತ್ತು ದೀರ್ಘವಾಗಿ ನಿಮ್ಮ ಎಡ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಿ. ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ.
  • ಮುಂದೆ, ನಿಮ್ಮ ಹೆಬ್ಬೆರಳನ್ನು ಬಿಡಿ ಮತ್ತು ನಿಮ್ಮ ಉಂಗುರದ ಬೆರಳಿನಿಂದ ನಿಮ್ಮ ಎಡ ಮೂಗಿನ ಹೊಳ್ಳೆಯನ್ನು ಮುಚ್ಚಿ.
  • ಬಲ ಮೂಗಿನ ಹೊಳ್ಳೆಯ ಮೂಲಕ ನಿಧಾನವಾಗಿ ಉಸಿರನ್ನು ಬಿಡಿ.
  • ಇದನ್ನು ಹಿಮ್ಮುಖವಾಗಿ ಅಭ್ಯಾಸ ಮಾಡಿ, ಈ ಸಮಯದಲ್ಲಿ ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಿ ಮತ್ತು ಎಡಭಾಗದಿಂದ ನಿಧಾನವಾಗಿ ಹೊರಗೆ ಬಿಡಿ.

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *