January 19, 2025
bhandary-youth-warriors

 

ವರ್ಷಂಪ್ರತಿ ನಡೆಯುವ ಭಂಡಾರಿ ಸ್ವಯಂ ಸೇವಕ ಸಂಘದ ಕ್ರೀಡಾಕೂಟ ಈ ಬಾರಿ ಡಿಸೆಂಬರ್ 31 ರ ಭಾನುವಾರ ಮಂಗಳೂರಿನ ಬಾವುಟಗುಡ್ಡೆಯ ಸಂತ ಅಲೋಷಿಯಸ್ ಕಾಲೇಜ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಭಂಡಾರಿ ಕುಟುಂಬದ ನೂರಾರು ಕ್ರೀಡಾಪಟುಗಳು, ಪೋಷಕರು, ಭಂಡಾರಿ ಕುಟುಂಬಸ್ಥರು ಮತ್ತು ಹಲವಾರು ಭಂಡಾರಿ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಇದೇ ಮೊದಲ ಬಾರಿಗೆ ಭ‌ಂಡಾರಿವಾರ್ತೆ ಮತ್ತು ಭಂಡಾರಿ ಯೂತ್ ವಾರಿಯರ್ಸ್ ನವರು ಜಂಟಿ ಪ್ರಾಯೋಜಕತ್ವದಲ್ಲಿ ಕ್ರೀಡಾಕೂಟಕ್ಕೆ ಹೆಚ್ಚಿನ ಪ್ರೋತ್ಸಾಹ ಮತ್ತು ಕಾರ್ಯಕ್ರಮವನ್ನು ಇನ್ನಷ್ಟು ಆಕರ್ಷಕಗೊಳಿಸುವ  ನಿಟ್ಟಿನಲ್ಲಿ ಕ್ರೀಡಾಂಗಣದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಕ್ರೀಡಾಕೂಟಕ್ಕೆ  ಆಗಮಿಸುವ ಎಲ್ಲ ಬಂಧುಗಳ ಬಾಯಾರಿಕೆ ತಣಿಸಲು ಉಚಿತವಾಗಿ ಸೋಡಾ ಶರಬತ್ ವಿತರಣೆ, ನೀರು, ಚಹಾದ ವ್ಯವಸ್ಥೆ , ಮಕ್ಕಳಿಗಾಗಿ  ಐಸ್ ಕ್ಯಾಂಡಿ ಮತ್ತು ಚಾಕಲೇಟ್ ವಿತರಣೆ ಮುಂತಾದುವುಗಳನ್ನು ಹಮ್ಮಿಕೊಳ್ಳಲಾಯಿತು.

 

ಭಂಡಾರಿವಾರ್ತೆಯ ಮತ್ತು ಭಂಡಾರಿ ಯೂತ್ ವಾರಿಯರ್ಸ್ ನ  ಈ ಕಾರ್ಯವನ್ನು  ಕಚ್ಚೂರುವಾಣಿ ಮಾಸ ಪತ್ರಿಕೆಯ ಮಾಜಿ ಸಂಪಾದಕ ಶ್ರೀ ಎ.ಕೆ.ಭಂಡಾರಿ , ಭಂಡಾರಿ ಸ್ವಯಂ ಸೇವಕ ಸಂಘದ ಅಧ್ಯಕ್ಷೆ ಶ್ರೀಮತಿ ವಾಣಿ ಎಸ್ ಭಂಡಾರಿ, ಕಚ್ಚೂರು ಶ್ರೀ  ನಾಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಶ್ರೀ ದಿನೇಶ್ ಹಳೆಯಂಗಡಿ , ಭಂಡಾರಿ ಸ್ವಯಂ ಸೇವಕ ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ವಿದ್ಯಾ ಉಳ್ಳಾಲ , ಕ್ರೀಡಾಕೂಟದ ಮುಖ್ಯ ಅತಿಥಿಗಳಾದ ಕದ್ರಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಶ್ರೀ ಸುನೀಲ್ ಕುಮಾರ್ ಮೂಲ್ಕಿ ವಿಜಯ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ವಿಜಯ ಕುಮಾರಿ , ಮತ್ತು  ಯೆನಪೋಯ ಕಾಲೇಜಿನ ಉಪನ್ಯಾಸಕ ಡಾ॥ ಯಶೋಧರ ಕದ್ರಿ ಅಲ್ಲದೆ ನೂರಾರು ಬಂಧುಗಳು ಮನಸಾರೆ ಶ್ಲಾಘಿಸಿದರು. ಅಲ್ಲದೆ ಕ್ರೀಡಾಳುಗಳಿಗೆ ಹೆಚ್ಚಿನ ಪ್ರೋತ್ಸಾಹ  ನೀಡಿದಂತೆ ಆಗಿದೆ. ಕ್ರೀಡಾಳುಗಳಿಗೆ ಬಿಸಿಲಿನಲ್ಲಿ  ಸ್ಪರ್ಧಿಸಿದಾಗ ಸೋಡಾಶರಬತ್ ದೇಹಕ್ಕೆ ಮತ್ತಷ್ಟು ಉಲ್ಲಾಸವನ್ನು  ನೀಡುತ್ತದೆ. ಭಂಡಾರಿವಾರ್ತೆ ಮತ್ತು ಭಂಡಾರಿ ಯೂತ್ ವಾರಿಯರ್ಸ್ ಈ ಕಾರ್ಯವನ್ನು  ಪ್ರಥಮ ಬಾರಿ  ನಡೆಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ .ಮುಂದಿನ ದಿನಗಳಲ್ಲಿ ಇಂಥ ಸಮಾಜಮುಖಿ ಕೆಲಸಗಳು ನಿರಂತರವಾಗಿ  ನಡೆಯಬೇಕು  ಆಗ ಪ್ರೇಕ್ಷಕರು ಹಾಗೂ ಕ್ರೀಡಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯ ಎಂದು ಮುಕ್ತ ಕಂಠದಿಂದ ಶ್ಲಾಘನೆ  ಮಾಡಿದರು.

Thirst Quenchers BhandaryVaarthe Bhandary YouthWarriors

ಭಂಡಾರಿ ಯೂತ್ ವಾರಿಯರ್ಸ್ ಸ್ಟಾಲ್

BhandaryVaarthe promoted Bhandary YouthWarriors team organized thirst quenching drive at Mangaluru Bhandary Swayamsevaka Sangha organized Bhandary Sports meet at St Aloysius ground on 31st December 2017.
Free unlimited fresh lime soda ( Soda Sharbath ) unlimited ice candy (Ideal ice cream ) was supplied to all the participants and audience at the venue ground.

Children enjoyed variety of flavoured chocolates

Evening time Tea / Coffee & freshly made hot Snacks were supplied.

Thirst quenching drive throughout the day was appreciated by the Bhandary families members and the volunteers were blessed by the elders.

BhandaryVaarthe & Bhandary YouthWarriors will continue to serve the Bhandary families members with the help support and financial contributions by the patrons.

ಬೆಳಗ್ಗೆ ಕ್ರೀಡಾಕೂಟ ಆರಂಭವಾದ ಕ್ಷಣದಿಂದ ಭಂಡಾರಿವಾರ್ತೆ ಮತ್ತು ಭಂಡಾರಿ ಯೂತ್ ವಾರಿಯರ್ಸ್ ನ ಸ್ವಯಂ ಸೇವಕರು ತಮ್ಮ ಸ್ಟಾಲ್ ನಲ್ಲಿ ತಂಪಾದ ಸೋಡಾಶರಬತ್ ವಿತರಿಸಲು ಆರಂಭಿಸಿದರು. ಬಿಸಿಲಿನ ಧಗೆಯಿಂದ ಬಸವಳಿದವರಿಗೆ ಹತ್ತಕ್ಕೂ ಹೆಚ್ಚು ಫ್ಲೇವರ್ ಗಳ ಸೋಡಾಶರಬತ್ ಗಳು ನೆರೆದಿದ್ದವರ ದಾಹ ನೀಗಿಸಿತು. ಮದ್ಯಾಹ್ನದವರೆಗೂ ಅನಿಯಮಿತವಾಗಿ ತಂಪಾದ ಆರೇಂಜ್, ಲೈಮ್, ಚಾಕೊಲೇಟ್, ಸ್ಟ್ರಾಬೆರ್ರಿ ಮುಂತಾದ ರುಚಿಯ ಸಾವಿರಾರು ಲೋಟ ಶರಬತ್ ಗಳನ್ನು ಮಕ್ಕಳು, ಮಹಿಳೆಯರು, ಕ್ರೀಡಾಳುಗಳು,ನೆರೆದಿದ್ದವರು ಅಸ್ವಾದಿಸಿದರು. ಜೊತೆಗೆ ಮಕ್ಕಳಿಗೆ ಇಷ್ಟವಾದ ಚಾಕೊಲೇಟ್ ಗಳನ್ನು ವಿತರಿಸಿ ಮಕ್ಕಳ ಮುಖದ ಮೇಲೆ ಇನ್ನಷ್ಟು ನಗು ಮೂಡಿಸಲಾಯಿತು. ಮಕ್ಕಳು ಮಾಸ್ಟರ್ ತನಿಷ್ ಕೃಷ್ಣಾನಂದ, ಕುಮಾರಿ ದಿಯಾ ಮತ್ತು ಕುಮಾರಿ ಭಾವಿನಿಯವರ ಕೈನಿಂದ ಖುಷಿಖುಷಿಯಾಗಿ ಚಾಕೊಲೇಟ್ ಗಳನ್ನು ಪಡೆದು ಸವಿದರು.
ಮದ್ಯಾಹ್ನದ ಮೇಲೆ ನೆರೆದವರಿಗೆ ಉಚಿತವಾಗಿ ಐಸ್ ಕ್ಯಾಂಡಿಗಳನ್ನು ಪೂರೈಸಲಾಯಿತು. ಬಿಸಿಲಿನಲ್ಲಿ ಆಟವಾಡಿ ದಣಿದವರಿಗೆ ಐಸ್ ಕ್ಯಾಂಡಿಗಳು ತಂಪೆರೆದವು. 
ಸಂಜೆಯ ವೇಳೆಗೆ ಸ್ಟಾಲ್ ನಲ್ಲಿ ಚಹಾತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನಲ್ಲಿ ಆಡಿ ದಣಿದು ಹಸಿದವರಿಗೆ ಚಹಾತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಅಂತಿಮ ಹಂತದಲ್ಲಿ ಮೈದಾನದ ತುಂಬೆಲ್ಲಾ ತುಂಬಿದ್ದ ಕಸವನ್ನು ಭಂಡಾರಿ ಯೂತ್ ವಾರಿಯರ್ಸ್ ಸದಸ್ಯರು ಕೆಲವೇ ನಿಮಿಷಗಳಲ್ಲಿ ಸ್ವಚ್ಚಗೊಳಿಸಿದರು. 

ಭಂಡಾರಿವಾರ್ತೆ ಮಕ್ಕಳ ದಿನಾಚರಣೆ ಸಂದರ್ಭ ಆಯೋಜಿಸಿದ್ದ ಭಂಡಾರಿ ಚಿತ್ತಾರ ಮತ್ತು ದೀಪಾವಳಿ ಸಂದರ್ಭದಲ್ಲಿ ಭಂಡಾರಿವಾರ್ತೆ ಹಾಗೂ ಭಂಡಾರಿ ಯೂತ್ ವಾರಿಯರ್ಸ್ ಜಂಟಿಯಾಗಿ ಆಯೋಜಿಸಿದ ಗೂಡುದೀಪ ಸ್ಪರ್ಧೆಯ ವಿಜೇತರಿಗೆ ನಮ್ಮ ಪ್ರಾಯೋಜಕರಾದ ಅರುಣ್ ಭಂಡಾರಿ ಬಿಲ್ಡರ್ಸ್ ಎಂಡ್ ಡೆವಲಪರ್ಸ್ ನ ಮುಖ್ಯಸ್ಥರಾದ ಶ್ರೀ ಅರುಣ್ ಭಂಡಾರಿಯವರು ಮತ್ತು ಕ್ಯಾಬಿನೆಟ್ ಸಿಸ್ಟಮ್ಸ್ ಎಂಡ್ ಕಂಟ್ರೋಲ್ಸ್ ಪ್ರೈ.ಲಿ.ನ ಮುಖ್ಯಸ್ಥರಾದ ಶ್ರೀ ಬಾಲಕೃಷ್ಣ ಭಂಡಾರಿ ಪುತ್ತೂರು ಇವರುಗಳು ಒದಗಿಸಿದ ಬಹುಮಾನಗಳನ್ನು ಮತ್ತು ಭಂಡಾರಿವಾರ್ತೆಯ ಪ್ರಶಸ್ತಿ ಪತ್ರಗಳನ್ನು ಭಂಡಾರಿವಾರ್ತೆಯ CEO ಶ್ರೀ ಪ್ರಕಾಶ್ ಭಂಡಾರಿ ಕಟ್ಲಾರವರು ಭಂಡಾರಿ ವಾರ್ತೆಯ ಸ್ಟಾಲ್ ನಲ್ಲಿ  ವಿತರಿಸಿದರು.

ಭಂಡಾರಿ ಸ್ವಯಂ ಸೇವಕ ಸಂಘದ ಕ್ರೀಡಾಕೂಟ ಪ್ರತೀ ವರ್ಷವೂ ನಡೆಯುತ್ತದೆ ಆದರೆ ಈ ವರ್ಷದ ಕ್ರೀಡಾಕೂಟವನ್ನು ಭಂಡಾರಿವಾರ್ತೆ ಮತ್ತು ಭಂಡಾರಿ ಯೂತ್ ವಾರಿಯರ್ಸ್ ನ ಸ್ವಯಂ ಸೇವಕರು ಒಂದು ಜಾತ್ರೆಯಂತೆ, ಒಂದು ಹಬ್ಬದಂತೆ ಆಚರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಭಂಡಾರಿ ಯೂತ್ ವಾರಿಯರ್ಸ್ ನ ಶ್ರೀ ಮನೋರಾಜ್ ರಾಜೀವ್, ಶ್ರೀಮತಿ ಉಷಾ ಮನೋರಾಜ್, ಶ್ರೀಮತಿ ವಿದ್ಯಾ ಪ್ರಕಾಶ್ ಭಂಡಾರಿ ಕಟ್ಲಾ , ಶ್ರೀ ವಿಪಿನ್ ಪ್ರಕಾಶ್ ಭಂಡಾರಿ ಕಟ್ಲಾ, ಶ್ರೀಮತಿ ಅರುಣ ವಿಪಿನ್ ಪ್ರಕಾಶ್, ಶ್ರೀ ವಿಖ್ಯಾತ್ ಪ್ರಕಾಶ್ ಭಂಡಾರಿ ಕಟ್ಲಾ, ಶ್ರೀ ಶ್ರೀಪಾಲ್ ಭಂಡಾರಿ ನೆಲ್ಯಾಡಿ,  ಶ್ರೀ ಅವಿನಾಶ್ ಭಂಡಾರಿ,  ಶ್ರೀ ನಿತಿನ್ ಕುಮಾರ್ ಬಿಕರ್ನಕಟ್ಟ,  ಶ್ರೀ ಕಿಶೋರ್ ಸೊರ್ನಾಡ್,  ಶ್ರೀ ಕೃಷ್ಣಾನಂದ ಭಂಡಾರಿ ಶಕ್ತಿನಗರ, ಶ್ರೀ ಕಿರಣ್ ಸರಪಾಡಿ, ಶ್ರೀ ಪ್ರಶಾಂತ್ ಭಂಡಾರಿ ಕಾರ್ಕಳ, ಶ್ರೀ ಪ್ರಕಾಶ್ ಮಂಜೇಶ್ವರ, ಶ್ರೀ ಭೂಷಣ್ ಕುಮಾರ್ ಕ್ಯಾಲಿಕಟ್, ಶ್ರೀ ಸಂಪತ್ ಕುಮಾರ್ ಬೋಂದೇಲ್ ಇನ್ನೂ ಮುಂತಾದವರು ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಭಂಡಾರಿ ವಾರ್ತೆ ಮತ್ತು ಯೂತ್ ವಾರಿಯರ್ಸ್ ನ ಈ ಸೇವಾ ಕಾರ್ಯಗಳು ಆಯೋಜಕರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ, ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಯಿತು. 

ಸ್ವಚ್ಚತೆಯೊಂದಿಗೆ ಶುಭವಿದಾಯ ಹೇಳಿದಾಗ ಉಳಿದದ್ದು ಕಸಕಡ್ಡಿಗಳಲ್ಲ… ಉಳಿದದ್ದು ಕೃತಜ್ಞತೆ, ಅಭಿಮಾನ, ಅಭಿನಂದನೆ, ಪ್ರೀತಿ, ವಿಶ್ವಾಸ ಮತ್ತು ಸವಿನೆನಪುಗಳು ಮಾತ್ರ….

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

1 thought on “ಕ್ರೀಡಾಭಿಮಾನಿಗಳ ಮನತಣಿಸಿತು ಭಂಡಾರಿ ಯೂತ್ ವಾರಿಯರ್ಸ್

Leave a Reply

Your email address will not be published. Required fields are marked *