September 20, 2024

ಮಗುವಿಗೆ ಅರು ತಿಂಗಳ ನಂತರ ಘನ ಆಹಾರವನ್ನು ಪರಿಚಯಿಸುವುದು ನಿಜಕ್ಕೂ ಒಂದು ಸವಾಲೇ ಸರಿ . ಕೆಲವೊಮ್ಮೆ ಮಗು ಆಹಾರವನ್ನು ಸೇವಿಸಬಹುದು ಕೆಲವೊಮ್ಮೆ ಸೇವಿಸಲು ನಿರಾಕರಿಸ ಬಹುದು. ಅಂತಹ ಸಂದರ್ಭದಲ್ಲಿ ಘನ ಆಹಾರವನ್ನು ಯಾವ ರೀತಿ ಪರಿಚರಯಿಸಬೇಕು ಅನ್ನೋದನ್ನು ತಿಳಿಯೋಣ.

ಮಗುವಿಗೆ ಆರು ತಿಂಗಳು ತಾಯಿಯ ಹಾಲನ್ನೇ ಉಣಿಸಬೇಕು ಎನ್ನಲಾಗುತ್ತದೆ. ಆರು ತಿಂಗಳ ನಂತರ ಘನ ಆಹಾರವನ್ನು ನೀಡಲಾಗುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಎದೆಹಾಲನ್ನು ಉಣಿಸಲು ಸಾಧ್ಯವಾಗದಿದ್ದಾಗ ಮಗುವಿಗೆ ಘನ ಆಹಾರವನ್ನು ಬೇಗನೆ ಅಭ್ಯಾಸ ಮಾಡಬೇಕಾಗುತ್ತದೆ. ಇಂದು ನಾವು ಆರು ತಿಂಗಳ ಮಗುವಿಗೆ ಯಾವ ರೀತಿಯ ಘನ ಆಹಾರವನ್ನು ತಿನ್ನಿಸಬಹುದು ಎನ್ನುವುದರ ಬಗ್ಗೆ ತಿಳಿಸಲಿದ್ದೇವೆ.

ನನ್ನ ಮಗು ಘನ ಆಹಾರವನ್ನು ತಿನ್ನಲು ಸಿದ್ಧವಾಗಿದೆಯೇ?

ನಿಮ್ಮ ಮಗು ಘನವಸ್ತುಗಳಿಗೆ ಸಿದ್ಧವಾಗಿದೆಯೇ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಮೊದಲು ಮಗುವಿಗೆ ಆಹಾರವನ್ನು ನೀಡುವಾಗ ಅದನ್ನು ನುಂಗುತ್ತದೆಯೇ ಅಥವಾ ಬಾಯಲ್ಲಿಟ್ಟು ಹೊರಹಾಕುತ್ತದೆಯೇ ಎನ್ನುವುದನ್ನು ತಿಳಿಯಬೇಕು. ಘನ ಆಹಾರವನ್ನು ಸೇವಿಸಲು ಮಗುವಿನ ಕುತ್ತಿಗೆ ಹಾಗೂ ತಲೆಯ ನಿಯಂತ್ರಣ ಇರಬೇಕು. ಕುತ್ತಿಗೆ ಬಲವಾದೆ ಸ್ವಲ್ಪ ಮಟ್ಟಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ.

ಕೈಗೆ ಸಿಕ್ಕಿದ ವಸ್ತುಗಳನ್ನು ಬಾಯಿಗೆ ಹಾಕುತ್ತಿದೆಯೇ?

ಆಹಾರವನ್ನು ನೋಡುವ ಯಾವುದೇ ವಸ್ತುವನ್ನು ಹಿಡಿಯುವ ಅಥವಾ ಅದನ್ನು ಬಾಯಿಗೆ ಹಾಕಲು ಪ್ರಯತ್ನಿಸಿದರೆ ನಿಮ್ಮ ಮಗು ಘನ ಆಹಾರಕ್ಕೆ ಸಿದ್ಧವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ಮಗು ಆಹಾರಗಳಲ್ಲಿ ಆಸಕ್ತಿ ತೋರಿಸದಿದ್ದರೆ ಅದನ್ನು ಪದೇ ಪದೇ ಪ್ರಯತ್ನಿಸುವ ಬದಲು ಸ್ವಲ್ಪ ಸಮಯದ ವರೆಗೆ ಕಾಯುವುದು ಒಳ್ಳೆಯದು. ನಿಮ್ಮ ಮಗು ಘನ ಆಹಾರವನ್ನು ತಿನ್ನಲು ಕಲಿಯುವುದರ ಜೊತೆಗೆ ಎದೆ ಹಾಲು ಮತ್ತು ಫಾರ್ಮುಲಾಗಳ ಮೂಲಕ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುತ್ತದೆ.

ಹೆಚ್ಚುವರಿ ಪೋಷಣೆಯ ಅಗತ್ಯ

6 ತಿಂಗಳ ನಂತರ, ಶಿಶುಗಳಿಗೆ ಕಬ್ಬಿಣ ಮತ್ತು ಸತುವುಗಳಂತಹ ಹೆಚ್ಚುವರಿ ಪೋಷಣೆಯ ಅಗತ್ಯವಿರುತ್ತದೆ. ಅದು ಘನ ಆಹಾರಗಳಿಂದ ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಮಗುವಿನ ಆಹಾರಕ್ಕೆ ಏಕದಳ ಅಥವಾ ಇತರ ಆಹಾರವನ್ನು ಸೇರಿಸಬೇಡಿ ಏಕೆಂದರೆ ಅದು ತೂಕ ಹೆಚ್ಚಾಗಲು ಕಾರಣವಾಗಬಹುದು.

ಹಸಿದಿದೆಯೇ, ಹೊಟ್ಟೆ ತುಂಬಿದೆಯೇ ಖಚಿತಪಡಿಸಿಕೊಳ್ಳಿ

ನಿಮ್ಮ ಮಗುವಿಗೆ ಹಸಿದಿದೆಯೇ ನೀವು ನೀಡುವ ಆಹಾರವನ್ನು ಸೇವಿಸಬಹುದೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮಗುವಿನ ಹೊಟ್ಟೆ ತುಂಬಿದ್ದಾಗ ನೀವು ನೀಡುವ ಆಹಾರವನ್ನು ನಿರುತ್ಸಾಹದಿಂದ ತಿನ್ನುತ್ತದೆ. ಅಥವಾ ಬಾಯಿ ತೆರೆಯಲು ನಿರಾಕರಿಸಬಹುದು ಅಥವಾ ಆಹಾರವನ್ನು ಉಗುಳಬಹುದು. ಅದೇ ಹಟ್ಟೆ ಹಸಿದಿದ್ದರೆ ಸರಿಯಾಗಿ ಬೇಗ ಬೇಗನೆ ತಿನ್ನುತ್ತದೆ.

ಮಗುವಿಗೆ ಘನ ಆಹಾರವನ್ನು ಹೇಗೆ ಪ್ರಾರಂಭಿಸಬೇಕು?

ನಿಮ್ಮ ಮಗು ಘನ ಆಹಾರವನ್ನು ಪ್ರಯತ್ನಿಸಬಹುದೆಂದು ವೈದ್ಯರು ಹೇಳಿದಾಗ, ನಿಮ್ಮ ಮಗು ದಣಿದಿಲ್ಲದಿರುವಾಗ ಅಥವಾ ಶಾಂತಿಯಿಂದ ಇರುವ ಸಮಯದಲ್ಲಿ ಆಹಾರ ನೀಡಿ. ನಿಮ್ಮ ಮಗುವಿಗೆ ಸ್ವಲ್ಪ ಹಸಿವಾಗಬೇಕೆಂದು ನೀವು ಬಯಸುತ್ತೀರಾದರೆ ಇನ್ನೂ ಹತ್ತು ನಿಮಿಷ ಕಾಯಿರಿ. ಆದರೆ ಮಗು ಹಸಿವಿನಿಂದ ಅಳುವ ರೀತಿ ಮಾಡಬೇಡಿ. ಮಗು ಅಳಲು ಪ್ರಾರಂಭಿಸಿದರೆ ಆಹಾರವನ್ನು ಸೇವಿಸಲು ನಿರಾಕರಿಸಬಹುದು.

ಚಮಚವನ್ನು ತುಟಿ ಬಳಿ ಇಡಿ

ಹೆಚ್ಚಿನ ಶಿಶುಗಳು ಮೊದಲ ಬಾರಿ ಆಹಾರ ನೀಡುವಾಗ ನಿರಾಕರಿಸುತ್ತದೆ. ನೀವು ಮೊದಲು ಆಹಾರವನ್ನು ತಿನ್ನಿಸುವಾಗ ನಿಮ್ಮ ಮಗುವಿನ ತುಟಿಗಳ ಬಳಿ ಚಮಚವನ್ನು ಇರಿಸಿ ಅದರ ವಾಸನೆ ಮತ್ತು ರುಚಿಯನ್ನು ನೀಡಿ. ಒಂದು ನಿಮಿಷ ನಿರೀಕ್ಷಿಸಿ. ಆಹಾರವನ್ನು ತಿನ್ನಿಸುವಾಗ ನಿಮ್ಮ ಮಗುವನ್ನು ನಿಮ್ಮ ತೊಡೆಯ ಮೇಲೆ ಅಥವಾ ಸುರಕ್ಷತಾ ಪಟ್ಟಿಯೊಂದಿಗೆ ಎತ್ತರದ ಕುರ್ಚಿಯಲ್ಲಿ ಕುಳ್ಳಿರಿಸಿ.

​ಅಲರ್ಜಿ ಆಹಾರಗಳನ್ನು ನೀಡಬಾರದು

ನಿಮ್ಮ ಮಗುವಿಗೆ ನೀವು ಪರಿಚಯಿಸುವ ಆಹಾರಗಳಲ್ಲಿ ಅಲರ್ಜಿಯನ್ನು ಉಂಟುಮಾಡುವ ಸಾಧ್ಯತೆಯಿರುವ ಆಹಾರಗಳು ಇರಬಹುದು. ಇವುಗಳಲ್ಲಿ ಕಡಲೆಕಾಯಿ, ಮೊಟ್ಟೆ, ಹಸುವಿನ ಹಾಲು, ಸಮುದ್ರಾಹಾರ, ಬೀಜಗಳು, ಗೋಧಿ ಮತ್ತು ಸೋಯಾ ಕೂಡಾ ಸೇರಿವೆ. ನೀವು ಆಹಾರ ಅಲರ್ಜಿಗಳ ಬಗ್ಗೆ ಕಾಳಜಿವಹಿಸುತ್ತಿದ್ದರೆ, ಅಥವಾ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಯಾವುದೇ ಆಹಾರದಲ್ಲಿ ಅಲರ್ಜಿಗಳಿದ್ದರೆ ಅಂತಹ ಆಹಾಗಳನ್ನು ಪರಿಚಯಿಸುವಾಗ ಎಚ್ಚರಿಕೆವಹಿಸಬೇಕು. ಅಂತಹ ಆಹಾರಗಳನ್ನು ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸಿ.

ಆಹಾರ ಅಲರ್ಜಿಯ ಲಕ್ಷಣಗಳಿವು

  • ಮೈಯಲ್ಲಿ ದದ್ದು
  • ಹೊಟ್ಟೆ ಉಬ್ಬುವುದು
  • ಗ್ಯಾಸ್ಟ್ರಿಕ್ ಹೆಚ್ಚಳ
  • ಅತಿಸಾರ
  • ವಾಂತಿಯಾಗುವುದು

ಶಿಶುಗಳಿಗೆ ಇವುಗಳನ್ನು ನೀಡಬಾರದು

  • ಸಕ್ಕರೆಗಳನ್ನು ಸೇರಿಸಿದ ಆಹಾರಗಳು
  • ಕ್ಯಾಲೋರಿಗಳಿಲ್ಲದ ಸಿಹಿಕಾರಕಗಳು
  • ಹೆಚ್ಚಿನ ಸೋಡಿಯಂ ಆಹಾರಗಳು
  • ಒಂದು ವರ್ಷದವರೆಗೆ ಜೇನು ನೀಡಬಾರದು
  • ಪಾಶ್ಚರೀಕರಿಸದ ರಸ, ಹಾಲು, ಮೊಸರು ಅಥವಾ ಚೀಸ್
  • ಎದೆ ಹಾಲು ಅಥವಾ ಫಾರ್ಮುಲಾ ಹಾಲಿನ ಬದಲಿಗೆ 12 ತಿಂಗಳ ಮೊದಲು ಸಾಮಾನ್ಯ ಹಸುವಿನ ಹಾಲು ಅಥವಾ ಸೋಯಾ ಹಾಲನ್ನು ನೀಡಬಾರದು.
  • ಪಾಶ್ಚರೀಕರಿಸಿದ ಮೊಸರು ಮತ್ತು ಚೀಸ್ ಅನ್ನು ನೀಡಬಹುದು.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *