Lahori Green Chicken: ಮನೆಯಲ್ಲಿಯೇ ಟ್ರೈ ಮಾಡಿ ಲಹೋರಿ ಗ್ರೀನ್ ಚಿಕನ್!
ಸಾಮಾನ್ಯವಾಗಿ ಹೆಚ್ಚಿನ ಜನರು ಎಲ್ಲಾ ರೆಸಿಪಿಗಳ ಟೇಸ್ಟ್ ಸವಿದಿರುತ್ತೀರಾ. ಆದರೆ ಇಂದು ಹೊಸ ರೆಸಿಪಿಯೊಂದನ್ನು ಹೇಳುತ್ತಿದ್ದೇವೆ. ಅದುವೇ ಲಹೋರಿ ಗ್ರೀನ್ ಚಿಕನ್ ರೆಸಿಪಿ. ಇದನ್ನು ಮಾಡೋದು ಹೇಗೆ ಗೊತ್ತಾ?.
ಕೋಳಿ ಮಾಂಸ ಬಳಸಿ ಅಡುಗೆ ಮಾಡಲು ಬರುತ್ತಾ? ಬಹುತೇಕರ ಮನೆಯಲ್ಲಿ ವಿಕನ್ ಪುಲಿಮುಂಚಿ (Chicken Pulimunchi), ಚಿಕನ್ ಸಾಂಬರ್, ಚಿಕನ್ ಸುಕ್ಕ (Chicken Sukka), ಚಿಕನ್ ಬಿರಿಯಾನಿ (Chicken Biriyani) ಮಾಡಿಯೇ ಮಾಡುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಜನರು ಈ ಎಲ್ಲಾ ರೆಸಿಪಿಗಳ ಟೇಸ್ಟ್ ಸವಿದಿರುತ್ತೀರಾ. ಆದರೆ ಇಂದು ಹೊಸ ರೆಸಿಪಿಯೊಂದನ್ನು ಹೇಳುತ್ತಿದ್ದೇವೆ. ಅದುವೇ ಲಹೋರಿ ಗ್ರೀನ್ ಚಿಕನ್ (Lahori Green Chicken) ರೆಸಿಪಿ. ಇದನ್ನು ಮಾಡೋದು ಹೇಗೆ ಗೊತ್ತಾ?.
ಹೊಸ ಹೆಸರು ಕೇಳಿದಂತಿದೆ ಅನಿಸುತ್ತಿದ್ದೆಯಾ?. ಹೌದು. ಇದೊಂದು ಹೊಸ ರೆಸಿಪಿ. ಚಿಕನ್ ಬಳಸಿಕೊಂಡು ಲಹೋರಿ ಗ್ರೀನ್ ರೆಸಿಪಿ ತಯಾರಿಸಲಾಗುತ್ತದೆ. ಅಂದಹಾಗೆಯೇ ಈ ರೆಸಿಪಿಯ ಟೇಸ್ಟ್ ಅದ್ಭುತವಾಗಿದೆ. ಮಸಾಲೆಯೊಂದಿಗಿನ ಚಿಕನ್ ಸವಿದಾಗ ಈ ರೆಸಿಪಿಯ ಟೇಸ್ಟ್ ತಿಳಿಯುತ್ತದೆ. ಅಂದಹಾಗೆಯೇ ಲಹೋರಿ ಗ್ರೀನ್ ಚಿಕನ್ ರೆಸಿಪಿ ತಯಾರಿಸುವುದು ಹೇಗೆ ಗೊತ್ತಿದ್ಯಾ?. ಸುಲಭವಾಗಿ ಮತ್ತು ವೇಗವಾಗಿ ಲಹೋರಿ ಗ್ರೀನ್ ಚಿಕನ್ ರೆಸಿಪಿ ತಯಾರಿಸುವ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ.
ಲಹೋರಿ ಗ್ರೀನ್ ಚಿಕನ್ಗೆ ಬೇಕಾಗುವ ಸಾಮಗ್ರಿಗಳು:
1.6 ಕೆಜಿ ಚಿಕನ್, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು, ಹಸಿ ಮೆಣಸು, ಎಣ್ಣೆ , ದನದ ತುಪ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನ ಪುಡಿ, ಅರಶಿನ ಪುಡಿ, 1 ಕಪ್ ಮೊಸರು, ಕಾಳು ಮೆಣಸಿನಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಫ್ರೆಶ್ ಕ್ರೀಮ್.
ಮಾಡುವ ವಿಧಾನ:
1 ಕಪ್ ಪುದೀನ ಸೊಪ್ಪು, 1 ಕಪ್ ಕೊತ್ತಂಬರಿಸೊಪ್ಪು, 4 ಹಸಿ ಮೆಣಸನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.
ಒಂದು ಪಾತ್ರೆಗೆ ಒಂದು ಕಪ್ ಎಣ್ಣೆ ಹಾಕಿ, 2-3 ಚಮಚ ತುಪ್ಪ ಹಾಕಿ,2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ,1/2 ಚಮಚ ಮೆಣಸಿನ ಪುಡಿ,1/2 ಚಮಚ ಅರಶಿಣ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ.
ನಂತರ ತೊಳೆದಿಟ್ಟು ಕೊಂಡ ಚಿಕನ್,4 ಹಸಿ ಮೆಣಸು ತುಂಡರಿಸಿ ಹಾಕಿ, 10 ನಿಮಿಷಗಳ ಕಾಲ ಫ್ರೈ ಮಾಡಿ.
ನಂತರ ಮಿಕ್ಸಿ ಮಾಡಿಟ್ಟ ಮಿಶ್ರಣ ವನ್ನು ಸೇರಿಸಿ, 3 ನಿಮಿಷಗಳ ವರೆಗೆ ಬೇಯಲು ಇಡಿ.
ನಂತರ ಮೊಸರು ಸೇರಿಸಿ 3 ನಿಮಿಷಗಳ ಕಾಲ ಬೇಯಲು ಇಡಿ.
ನಂತರ 1 ಚಮಚ ಕಾಳುಮೆಣಸಿನ ಪುಡಿ,1 ಚಮಚ ಜೀರಿಗೆ ಪುಡಿ,ಕೊತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಬೇಯಲು ಬಿಡಿ.
ನಂತರ ಫ್ರೆಶ್ ಕ್ರೀಮ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ , ಸಣ್ಣ ಉರಿಯಲ್ಲಿ ಬೇಯಿಸಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಲಹೋರಿ ಗ್ರೀನ್ ಚಿಕನ್ ಸವಿಯಲು ಸಿದ್ದ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ನ್ 18