January 18, 2025

ತುಲುನಾಡಲ್ಲಿ ಅಗ್ನಿಯನ್ನು “ತೂಕತ್ತೆರಿ” ಎಂಬ ದೈವದ ಹೆಸರಲ್ಲಿ ನಂಬುತ್ತಾ ಬಂದಿದ್ದಾರೆ ಎಂದು ನಾನೂ ನಂಬಿ ಆರಾಧಿಸುತ್ತೇನೆ.ತುಲುನಾಡಲ್ಲಿ ಕೃಷಿ ಭೂಮಿಗಳನ್ನು, ಹೊಲ ಗದ್ದೆಗಳನ್ನುನಿರ್ಮಾಣ ಮಾಡುತ್ತಿದ್ದ ಕಾಲವದು. ಎಲ್ಲೆಡೆಗಳಲ್ಲೂ ಕುತ್ತಿ,ಕೂಳೆ, ಮೋಟುಗಳನ್ನು ಸುಡುವ ದೃಶ್ಯ ಕಾಣುತ್ತದೆ.ಸುಡುತ್ತಿರುವಾಗ ಒಂದು ವೇಳೆ ಬೆಂಕಿಯ ಕಿಡಿಗಳು ಊರೆಲ್ಲಾ ,ಕಾಡೆಲ್ಲಾ ಹತ್ತಿ ಹೊತ್ತಿ ಉರಿದರೆ ಏನು ಮಾಡುವುದು ಎಂಬ ಭಯವು ಆಗಿನ ಜನರಲ್ಲಿ ಹುಟ್ಟುತ್ತದೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವಾಗ ತುಲುನಾಡಿನ ಮೂಲ ನಿವಾಸಿಗಳ ಬೂತರಾಧನೆ ದೈವರಾಧನೆ ಅಡಿಯಲ್ಲಿ ಅಗ್ನಿಯನ್ನು ದೈವದ ರೂಪದಲ್ಲಿ ನಂಬಿ ಆರಾಧಿಸುವರು.”ಬೆಂಕಿಯ ಅವಘಡಗಳು ಆಗದಿರಲಿ.ಅಂತಹ ದುರಂತಗಳು ಆಕಸ್ಮಿಕವಾಗಿ ನಡೆದಲ್ಲಿ ಅವುಗಳನ್ನು ನೀನೇ ಬೆಂಕಿಯಿಂದ ಪಾರು ಮಾಡಬೇಕು. ತೂತೆಕ್ಕರೆ (ಬೆಂಕಿ ನಂದಿಸಲು) ಪ್ರಾರ್ಥಿಸುತ್ತೇವೆ.ನೀನೇ ತೂ ತೆಕ್ಕಲ(ನೀನೇ ಬೆಂಕಿಯನ್ನು ನಂದಿಸು).ನೀನು ನಿರ್ದಯಿ, ಆಕ್ರಮಣಕಾರಿ ಆಗ ಬೇಡ.ಕೆನ್ನಾಲಗೆಯ ರೂಪ ತೋರ ಬೇಡ.ಕಠಿಣ ಹೃದಯಿಯಾಗಿವರ್ತಿಸಬೇಡ.ಶಾಂತಳಾಗಿ ನಮ್ಮನ್ನು ರಕ್ಷಿಸು ಕಾಪಾಡು” ಎಂದು ಬೇಡುವರು.

 

ನಂತರದಲ್ಲಿ ನೀರು ನೇರವಾಗಿ ಹರಿದು ಹೋಗಲು ತೋಡು ಕಾಲುವೆಗಳನ್ನು ತೋಡುವರು.ಇವಕ್ಕೆಲ್ಲಾ ದಂಡೆಗಳನ್ನು ನಿರ್ಮಾಣ ಮಾಡಲು ಕಲ್ಲುಗಳ ಅವಶ್ಯಕತೆ ಇದೆ.ಹೊಲಗದ್ದೆಗಳ ಕಟ್ಟಪುಣಿ,ಕಟ್ಟಣಿಗೆ ನಿರ್ಮಿಸಲು ಕಲ್ಲು ಬೇಕು.ಹಲವು ಕಡೆ ತೋಡುಗಳ ದಾರಿಯಲ್ಲಿ ಪಾದೆ ಕಲ್ಲುಗಳನ್ನು ಒಡೆದು ನೀರು ಸರಾಗವಾಗಿ ಹರಿಯುಂತೆ ಮಾಡಬೇಕು.ಕಾಡಿನಿಂದ ಪ್ರಾಣಿಪಕ್ಷಿಗಳು ನಾಡಿಗೆ ಇಳಿದು ಬಾರದಂತೆ ಹೊಗೆಗೂಡು,ಬೆಂಕಿಗೂಡು,ಗಂಟೆಗಳ ಕಟ್ಟೆಗಳನ್ನು ತಯಾರಿಸಲು ಕಲ್ಲು ಚಪ್ಪಡಿಗಳ ಅಗತ್ಯವಿದೆ. ನಂತರದಲ್ಲಿ ಬಸದಿಗಳ ನಿರ್ಮಾಣಕ್ಕೆ ಮತ್ತಷ್ಟು ಕಲ್ಲುಗಳು ಬೇಕು.ಒಟ್ಟಿನಲ್ಲಿ ಅಪಾರವಾದ ಕಲ್ಲುಗಳನ್ನು ಬಳಸುವ ಅಗತ್ಯವಿದೆ.

ಕಲ್ಲುಗಳನ್ನು ತೆಗೆಯುವುದು ಹೇಗೆ? ಅಂದು ಯಂತ್ರ ಉಪಕರಣಗಳು ಇರಲಿಲ್ಲ.ಕಲ್ಲುಗಳನ್ನು ತೆಗೆಯಲು ಬೆಂಕಿ ಬೇಕೇಬೇಕು.ಬೆಂಕಿ ಕೆಂಡಗಳಿಂದ ಕಲ್ಲುಗಳನ್ನು ಕಾಯಿಸಿ ಬಿಸಿ ಮಾಡಿ ಕಾದ ಕಲ್ಲುಗಳನ್ನು ಒಡೆದು ತೆಗೆಯಬೇಕು.ಪಾದೆ ಬಂಡೆ ಕಲ್ಲುಗಳಲ್ಲಿ ನಿರಂತರವಾಗಿ ಬೆಂಕಿ ಉರಿಯುತ್ತಾ ಇರಬೇಕಾಗುತ್ತದೆ.ಕಾಡ್ಗಿಚ್ಚು ಹರಡಿದಲ್ಲಿ ಪ್ರಾಣಿಪಕ್ಷಿಗಳು,ಗಿಡಮರಗಳು ಸಾಯುತ್ತೆ. ಅಗ್ನಿ ದೇವತೆಯನ್ನು ತೂ ಕತ್ತೆರಿ ದೈವದ ಹೆಸರಿನಲ್ಲಿ ಇನ್ನಷ್ಟು ಆರಾಧನೆ ಮಾಡುವರು.ಕಲ್ಲು ಹಾಕಿ ನಂಬಿ ಆರಾಧಿಸುವರು.ತೂ ತೆಕ್ಕಲ(ಬೆಂಕಿ ನಂದಿಸು).ತೂ ತೆಕ್ಕರೆ(ಬೆಂಕಿ ನಂದಿಸಲು) ಭಯ ಭಕ್ತಿಯಿಂದ ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಾರೆ.ತಪ್ಪುಗಳನ್ನು ಮನ್ನಿಸು ತಾಯಿ ಎಂದು ಅಗ್ನಿಯನ್ನು ಪ್ರಕೃತಿ ಯನ್ನು ಆರಾಧಿಸಿದಂತೆ ಸ್ತೀ ದೈವದ ರೂಪದಲ್ಲಿ ಎಲ್ಲೆಡೆ ಆರಾಧಿಸುತ್ತಾ ಬರುತ್ತಾರೆ.

ತೂ ತೆಕ್ಕರೆ(ನಂದಿಸಲು),ತೂ ತೆಕ್ಕಲ(ನಂದಿಸು) ಪದಗಳೇ ತುಲುನಾಡಲ್ಲಿ ಕ್ರಮೇಣವಾಗಿ “ತೂಕತ್ತೆರಿ”(ಬೆಂಕಿಯ ಕತ್ತರಿಸು)ಎಂದು ಕರೆದರು.ಈ ದೈವವು ತುಲುನಾಡಿನ ಬೂತರಾಧನೆಯ ಎರಡನೆಯ ಹಂತದ ಪ್ರಥಮ ದೈವ|ಬೂತವಾಗಿದೆ.

Leave a Reply

Your email address will not be published. Required fields are marked *