November 21, 2024
gutu barke (3)

ತುಲುನಾಡಲ್ಲಿ “ಗುತ್ತಿಗೆ’ಎಂಬ ಕನ್ನಡ ಪದಕ್ಕೆ ಕ್ರಮೇಣವಾಗಿ ಗುತ್ತುಗೆ, ಗುತ್ತು, ಗುತ್ತಿನಾರ್, ಗುತ್ತುದ ಗತ್ತ್ ಎಂಬ ಪದಗಳು ಜನಿಸಿ ಕೊಂಡಿದೆ. ಗುತ್ತು ಎಂಬ ಪದವು ಆಂಗ್ಲ ಭಾಷೆಯ “ಘಾಟ್ಸ್” (Ghats) ಎಂಬ ಪದದಿಂದ ಜನಿಸಿದೆ ಎಂದು ಬರೆದು ಪ್ರಕಟ ಮಾಡಿದ್ದೆ.ಘಾಟ್ಸ್ ಪದವನ್ನು ಗಟ್ಟ ,ಗತ್ತ ಎಂದು ಉಚ್ಛಾರ ಮಾಡಿ ಗತ್ತ್,ಗುತ್ತು ಎಂದಿದ್ದಾರೆ ಎಂದು ತಪ್ಪಾಗಿ ಬರೆದಿದ್ದೆ.ಅದು ಅನಿಸಿಕೆ ಅಷ್ಟೇ ಆಗಿರುತ್ತದೆ.ಈಗ ಆಳವಾಗಿ ಚಿಂತನೆಗೆ ಒಳಗಾಗಿ ಗುತ್ತು ಬರ್ಕೆ ಪದಗಳ ನಿಜವಾದ ಅರ್ಥವು ದೊರಕಿದೆ.

ತುಲುನಾಡಿಗೆ ಪಾಂಡ್ಯರ ಪ್ರವೇಶವಾಗಿದೆ.ಕೊಳ ಪ್ರದೇಶಗಳಲ್ಲಿ ಅಲ್ಲದೆ ಎಲ್ಲೆಡೆ ಅಚ್ಚುಕಟ್ಟಾಗಿ ಹೊಲ ಗದ್ದೆಗಳ ನಿರ್ಮಾಣ ಆಗಿದೆ.ಅವರವರ ಭೂಮಿ ಜಮೀನಿನಲ್ಲಿ ಸ್ವಂತವಾಗಿ ಅವರವರೇ ಕೃಷಿ ಮಾಡುತ್ತಾರೆ. ಬೇರೆಬೇರೆ ಊರುಗಳಿಂದ ಕೃಷಿ ಕಾರ್ಮಿಕರನ್ನು ಆಗಲೇ ತರಿಸಿದ್ದರು.ಇಲ್ಲಿನ ಪ್ರಾಣಿ ಪಕ್ಷಿಗಳನ್ನು ನಿಯಂತ್ರಣ ಮಾಡುವುದೇ ಒಂದು ಸವಾಲು ಆಗುತ್ತದೆ.ಇದಕ್ಕಾಗಿ ಅನೇಕ ಪ್ರಯೋಗಳನ್ನು ಪ್ರಯೋಗಿಸಿದರೂ ಕೃಷಿಯಲ್ಲಿ ಅಪಾರ ನಷ್ಟವನ್ನು ಅನುಭವಿಸುವರು.ಕೊನೆಗೆ ಇವರು ತಮ್ಮ ಜಮೀನುಗಳನ್ನು “ಗುತ್ತಿಗೆ”ಗೆ ಕೊಡುತ್ತಾರೆ.

 

ಇದರಿಂದ ಪಾಂಡ್ಯರು ಜಯಶೀಲರಾಗಿ ಮೆರೆದು ರಾಜರಾಗಿ ತುಲುನಾಡನ್ನೇ ಆಳುತ್ತಾರೆ.ಈ “ಗುತ್ತಿಗೆ”ಪದವೇ ಕೊನೆಗೆ “ಗುತ್ತುಗೆ”,”ಗುತ್ತು”ಎಂದು ಕರೆಯುತ್ತಾರೆ.ಗುತ್ತಿಗೆ ಎಂಬ ಪದವು ಕನ್ನಡ ಪದವಾಗಿದೆ.ಗುತ್ತು ಮನೆ ಎಂದರೆ ತನ್ನ ಸ್ವಾಧೀನದ ಭೂಮಿ ,ಕೃಷಿ ಜಮೀನನ್ನು ಗುತ್ತಿಗೆಗೆ ಕೊಟ್ಟು ಗೇಣಿ ಪಡೆಯುವುದು.

 

 

ಗುತ್ತಿಗೆ ಎಂದರೆ ಒಂದು ಸ್ವತ್ತಿನ ಬಳಕೆಗಾಗಿ ಗುತ್ತಿಗೆದಾರನು ಅಂದರೆ ಒಕ್ಕಲಿಗನು ಅಥವಾ ಬಳಕೆದಾರನು ಗೇಣಿದಾತನಿಗೆ ಅಂದರೆ ಧನಿಗೆ ಸಂದಾಯ ಮಾಡುವಂತೆ ಕೋರುವ ಒಂದು ವ್ಯವಸ್ಥೆ.ಗೇಣಿದಾತನು ತನ್ನ ಸ್ವಂತ ಸೊತ್ತಿನ ಅಂದರೆ ಭೂಮಿಯ ನ್ಯಾಯ ಸಮ್ಮತ ಒಡೆಯನಾಗಿರುತ್ತಾನೆ. ಗುತ್ತಿಗೆದಾರನು ಅಂದರೆ ಗುತ್ತಿಗೆ ಪಡೆದವನು ನಿಯಮಿತ ಗೇಣಿ ಅಂದರೆ ಇಷ್ಟೇ ಮುಡಿ ಅಕ್ಕಿಯನ್ನು ಧನಿ ಗೇಣಿದಾತನಿಗೆ ಕೊಡುವುದು.ಗೇಣಿದಾರನು ಗೇಣಿ ಕೊಟ್ಟು ಭೂಮಿ ಜಮೀನುಗಳನ್ನು ಬಳಸುವ ಹಕ್ಕು ಪಡೆಯುತ್ತಾನೆ. ಗುತ್ತು ಮನೆಯವರು ಗೇಣಿದಾತರು ಅಂದರೆ ಗೇಣಿ ಪಡೆಯುವವರು.ಗುತ್ತಿಗೆ ಪಡೆಯುವವರು ಗೇಣಿದಾರರು. ಅಂದರೆ ಅಕ್ಕಿ ಮುಡಿಗಳನ್ನು ಗೇಣಿಯಾಗಿ ನೀಡುವವರು.

 

“ಗುತ್ತಿನಾರ್” ಎಂದರೆ ತನ್ನ ಸ್ವಂತ ಭೂಮಿ,ಕೃಷಿ ಭೂಮಿಯನ್ನು ಗೇಣಿದಾರನಿಗೆ ಕೊಟ್ಟು ಗೇಣಿ ಪಡೆಯುವವರು.ಕರಾರಿಗೆ ತಪ್ಪಿ ನಡೆದರೆ ಒಕ್ಕಲು ಎಬ್ಬಿಸಿ ಖಾಲಿ ಮಾಡಿಸಿ ಸ್ವಾಧೀನಕ್ಕೆ ತೆಗೆದು ಕೊಳ್ಳುವುದು. “ಸಾರ ಮುಡಿ ಉಸ್ಟೋಲಿದಾರ್ “ಎಂದರೆ ಗೇಣಿದಾತನು|ಧನಿ ಒಂದು ವರ್ಷದಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಮುಡಿ ಅಕ್ಕಿ ಪಡೆಯುವವರು.ಅವರು “ಗುತ್ತು”ಮನೆಯವರೆಂದು ಕರೆಸಿಕೊಳ್ಳುತ್ತಾರೆ.ಗೇಣಿದಾತನು|ಧನಿ ಒಂದು ವರ್ಷದಲ್ಲಿ ಒಂದು ಸಾವಿರಕ್ಕಿಂತ ಕಡಿಮೆ ಅಕ್ಕಿ ಮುಡಿಗಳನ್ನು ಪಡೆದರೆ ಅಂತವರನ್ನು”ಬರ್ಕೆ” ಮನೆಯವರೆಂದು ಕರೆಸಿಕೊಳ್ಳುತ್ತಾರೆ.ಬರ್ಕೆ ಮನೆಯ ವರು ಕೂಡಾ ಬರ್ಕೆ ಪೆಲಕಾಯಿಯಂತೆ ಗಟ್ಟಿಗರೇ ಆಗಿರುತ್ತಾರೆ.ಆದರೆ ಗುತ್ತು ಮನೆಯವರಿಗೆ ಹೋಲಿಕೆ ಮಾಡಲಾಗದು.ಬರ್ಕೆಯವರು ಗುತ್ತು ಮನೆಯವರ ಹಿಂದೆ ಪಕ್ಕದಲ್ಲಿ ಇರುತ್ತಾರೆ.

 

ಒಟ್ಟಿನಲ್ಲಿ ಗುತ್ತು,ಗತ್ತ್,ಗುತ್ತಿನಾರ್ ,ಈ ಪದಗಳು “ಗುತ್ತಿಗೆ” ಪದದಿಂದ ಜನಿಸಿದೆ.ಈಗಲೂ ಅಂದಿನ ಗುತ್ತಿಗೆ ದಾತರು|ಗುತ್ತಿಗೆದಾರರು ಎಂಬ ಸಂಬಂಧಗಳು ಇಲ್ಲದಿದ್ದರೂ ಈ ಪದಗಳು ತುಲುನಾಡಲ್ಲಿ ಈಗಲೂ ಹಸುರಾಗಿ ಉಳಿದಿದೆ.ಅದನ್ನು ಈಗಲೂ ಬಳಸುವುದು ಎಂದರೆ ಅದೇನೋ ಒಂದು ಗತ್ತು.

 

ತುಲುನಾಡಲ್ಲಿ ಕೊನೆಯ ಕಾಲದಲ್ಲಿ ಕೆಲವರು ಗುತ್ತು ಬರ್ಕೆಯ ಭೂಮಿ,ಜಮೀನು,ಮನೆಗಳನ್ನು ಕೊಂಡು ಕೊಂಡ ಬಳಿಕ ಗುತ್ತು ಬರ್ಕೆ ಮನೆಯವರೆಂದು ಕರೆಸಿ ಕೊಂಡರು. ಇಲ್ಲಿ ಪೂರ್ತಿ ಮನೆ,ಭೂಮಿ, ಜಮೀನುಗಳನ್ನು ಅವರು ಕೊಟ್ಟು ಕೊಂಡಿದ್ದಾರೆ.ಮತ್ತು ಕೆಲವರು ಅವರ ಕಲೆ ಸೇವೆಗಳನ್ನು ಪರಿಗಣಿಸಿ ಅವರುಗಳು ಒಂದಿಷ್ಟು ಭೂಮಿ ಜಮೀನು ಒಡನೆ ಗುತ್ತು ಬರ್ಕೆ ಮನೆಗಳನ್ನು ಪುಕ್ಕಟೆಯಾಗಿ ಪಡೆದು ಗುತ್ತು ಬರ್ಕೆ ಮನೆಯವರೆಂದು ಕರೆಸಿಕೊಂಡರು.

 

ಐ.ಕೆ.ಗೋವಿಂದ ಭಂಡಾರಿ, ಕಾರ್ಕಳ

(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೇಜರ್)

Leave a Reply

Your email address will not be published. Required fields are marked *