September 20, 2024

ತುಲುನಾಡಿನ ಕೊರಂಬು ಎಂದರೆ ಹೆಚ್ಚಿನ ತುಲುವರಿಗೆ ಪರಿಚಿತವಾದುದು. ಅದೊಂದು ಮಳೆಗೆ ಒದ್ದೆಯಾಗದಂತೆ ಬಳಸುವ ಸಾಧನ ಎನ್ನುತ್ತಾರೆ. ಇದನ್ನು ಬಿದಿರಿನ ಸಲಾಕೆಗಳಿಂದ ಮತ್ತು ಪನೊಲಿ ಮರದ ಎಲೆಗಳು ಅಥವಾ ತಂದೊಲಿಗೆ ಎಲೆಗಳಿಂದ ತಯಾರಿಸುವರು ಎನ್ನುವರು. ಕೊರಂಬು ಇದರ ಒಳಗಿನ ರೂಪವು ಮಾನವನ ಎದೆಗೂಡಿನ ಮೂಳೆಗಳಂತೆ ಕಂಡುಬರುತ್ತದೆ. ಸಣಕಲು ಶರೀರದವನ ಎದೆಯ ಗೂಡನ್ನು ಕಂಡು”ಆಯೆ ಬಚ್ಚಿದ್ ಕೊರಂಬು ತೋಜುಂಡು“(ಎದೆ ಗೂಡು ಕಾಣುತ್ತದೆ) ಎನ್ನುವುದು ಇದೆ. ಅಂದರೆ ಬಿದಿರಿನ ಸಣ್ಣಪುಟ್ಟ ಸಲಾಕೆಗಳಿಂದ ತಯಾರಿಸುವ ಕೊರಂಬು ಇದರ ಒಳಭಾಗವನ್ನು ಎದೆಯ ಮೂಳೆಗಳಿಗೆ ಹೋಲಿಸಿದ್ದಾರೆ.

 

ತುಲು ಭಾಷೆಯು ಇತರ ಭಾಷೆಯಂತೆ ಅಲ್ಲ. ತುಲು ಭಾಷೆಯ ಒಂದು ಶಬ್ಧವನ್ನು ಕೈಗೆತ್ತಿಕೊಂಡರೆ ಒಂದು ಕತೆಯನ್ನೇ ಬರೆಯಬಹುದು. ಇತಿಹಾಸ, ಚರಿತ್ರೆಯನ್ನೇಬಿಚ್ಚಿಡಬಹುದು. ಆಳವಾಗಿ ಶಬ್ಧದ ಚಿಂತನೆಯನ್ನುಮಾಡಬೇಕು. ಅದರಂತೆಯೇ ಈ “ಕೊರಂಬು” ಪದದಲ್ಲಿ ಎರಡು ಪದಗಳು ಸೇರಿ ಒಂದು ಪದವಾಗಿದೆ. ಅವುಗಳು ಎಂದರೆ, 1)ಕೊರ ಮತ್ತು 2)ಅಂಬು. ಕೊರ ಎಂದರೆ “ಕೊರ“ಜನಾಂಗ (ಕೊರಗರು) ಮತ್ತು ಅಂಬು ಎಂದರೆ ನೀರು. ಹರಿದು ಹೋಗುವ ನೀರು.

ಹಿಂದಿನ ಲೇಖನಗಳಲ್ಲಿ ಬರೆದಂತೆ ಒಂದಾನೊಂದು ಕಾಲದಲ್ಲಿ ತುಲುನಾಡಲ್ಲೂ ದೇಶದಾದ್ಯಂತ ವಾಸ ಮಾಡಿದಂತೆ ಆದಿಮೂಲದ ಆದಿವಾಸಿಗಳು ಇದ್ದರು. ತುಲು ಭಾಷೆ ಇತ್ತು. ಈ ಕಾಲದಲ್ಲೇ ತುಲುನಾಡಿಗೆ ದಕ್ಷಿಣ ಆಫ್ರಿಕಾ ಮೂಲದ “ಕೊರ“ಜನಾಂಗದ ಜನರು ಕಾಲಿಡುತ್ತಾರೆ. ಇವರು ಮಾನವರಲ್ಲೇ ಅತ್ಯಂತ ಸಾಧು ಸ್ವಭಾವದವರು. ಇವರಿಗೆ ಇತರೊಡನೆ ಬೆರೆತು ಜೀವಿಸಲು ಆಗದೆ ತಮ್ಮ ಕೀಳರಿಮೆಯಿಂದ ತಮ್ಮ ದೋಣಿಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಚರಿಸುತ್ತಾ ಅಂಡಮಾನ್ ದ್ವೀಪದಲ್ಲಿ ನೆಲೆ ಆಗುತ್ತಾರೆ. ಇವರಿಗೆ ಕಾಡಲ್ಲೂ ಕಡಲಲ್ಲೂ ಬದುಕಲು ತಿಳಿದಿತ್ತು. ಈ ಕೊರಬುಡಕಟ್ಟು ಜನಾಂಗದ ಸಮುದಾಯದಕ್ಕೆ ಅಂಡಮಾನ್ ದ್ವೀಪದಲ್ಲೂ ಜೀವಿಸಲು ಕಷ್ಟವಾಗುತ್ತದೆ . ಅಲ್ಲೂ ಕ್ರೂರ ಇತರ ಬುಡಕಟ್ಟು ಜನರು ಇದ್ದರು. ಈ ಕೊರ ಜನರು ಗುಂಪು ಗುಂಪಾಗಿ ಅಲ್ಲಿಂದ ಹೊರಟು ಕೆಲವರು ಬಾಂಗ್ಲಾ, ವೆಸ್ಟ್ ಬೆಂಗಾಲ್, ಒಡಿಶಾ, ಜಾರ್ಖಂಡ್ ರಾಜ್ಯಗಳಲ್ಲಿ ನೆಲೆಸುವರು. ಇನ್ನು ಹಲವರ ದೋಣಿಗಳು ದಾರಿ ತಪ್ಪಿ ಅರಬ್ಬಿ ಸಮುದ್ರವನ್ನು ಪ್ರವೇಶಿಸುತ್ತದೆ. ಇಲ್ಲೂ ಕೆಲವರು ತಮಿಳುನಾಡು,ಕೇರಳದಲ್ಲಿ ನೆಲೆಸಿದರೆ ಉಳಿದ ದೋಣಿಗಳು ತುಲುನಾಡು ಸೇರುತ್ತದೆ. ತುಲುನಾಡಿನ ಆದಿಮೂಲದ ಆದಿವಾಸಿಗಳು ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶದಲ್ಲಿ ನೆಲೆ ಆಗಿದ್ದರೆ ಈ ಕೊರ ಬುಡಕಟ್ಟು ಜನರು ಕಡಲಿನ ತೀರದಲ್ಲೇ ತಮ್ಮ ದೋಣಿಗಳಲ್ಲೇ ವಾಸಿಸುವರು. ಕೊರ ಜನರು ಇಲ್ಲಿನ ಆದಿವಾಸಿಗಳ ಒಡನೆ ಗೌರವದಿಂದ ಬೆರೆತು ಒಗ್ಗಿ ನೆಲೆ ಆಗಲು ಶಕ್ತರಾಗುವರು. ಕಡಲ ಮೀನು ಹಿಡಿಯುವರು. ಆದಿವಾಸಿಗಳಿಗೆ ಕಡಲ ಮೀನಿನ ರುಚಿ ತೋರಿಸುವರು.

ಕಾಲಗಳು ಉರುಳುತ್ತದೆ. ತುಲುನಾಡು ಪ್ರಚಂಡ ಜಲಪ್ರಲಯದಿಂದ ಮುಳುಗಿ ಹೋಗುತ್ತದೆ. ಈಜುಬಾರದ ಇಲ್ಲಿನ ತುಲುವ ಆದಿವಾಸಿಗಳು ಹೆಚ್ಚಿನಸಂಖ್ಯೆಯಲ್ಲಿ ಸಾಯುತ್ತಾರೆ. ಕೊರ ಜನಾಂಗದ ಜನರಿಗೆ ಈಜು ಬರುತ್ತಿತ್ತು. ಅಲ್ಲದೆ ತಮ್ಮ ದೋಣಿಗಳಲ್ಲಿ ತಮ್ಮ ಜನರನ್ನು ಅಲ್ಲದೆ ಆದಿವಾಸಿಗಳನ್ನೂ ಪಶ್ಚಿಮ ಘಟ್ಟದ ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸುವರು. ತುಲುನಾಡು ನೀರು ಹರಿದು ಹೋಗದೆ ಕೊಳ(ಪಟ್ಲ)ಗಳಾಗಿಪರಿವರ್ತನೆ ಆಗುತ್ತದೆ. ತುಲುವ ಆದಿವಾಸಿಗಳು ಪಶ್ಚಿಮ ಘಟ್ಟಗಳ ಸಾಲುಗಳಲ್ಲಿ ಸಂಚರಿಸುತ್ತಾ ಈಗಿನ ಚಿಕ್ಕಮಗಳೂರು, ಹಾಸನ,ಮಡಿಕೇರಿ ಘಟ್ಟ ಪ್ರದೇಶದಾಟಿ ಕೇರಳದ ಮಲಬಾರ(ಮಲೆತ್ತ ಬರೆ)ಘಟ್ಟ ಪ್ರದೇಶದಿಂದ ಕೆಳಗಿಳಿದು ತಪ್ಪಲಲ್ಲಿ ನೆಲೆಸುವರು. ಹಲವು ಗುಂಪುಗಳು ತಮಿಳುನಾಡು, ಆಂಧ್ರ, ತೆಲಂಗಾಣ,ಕಳಿಂಗ, ಶ್ರೀಲಂಕಾ ಊರುಗಳಲ್ಲಿ ನೆಲೆಸುವರು. ಇತ್ತ ಕೊರ ಜನಾಂಗದ ಜನರು ತುಲುನಾಡಿನ ಪಶ್ಚಿಮಗಟ್ಟ ಪ್ರದೇಶದಲ್ಲಿ ಇರುವರು. ಇವರಿಗೆ ಕಾಡಲ್ಲೂ ಬದುಕಲು ತಿಳಿದಿತ್ತು. ಈಗಿನ ಕೊಡಗು ಪ್ರದೇಶವು ಅವರ ಅಂದಿನ ಸಾಮ್ರಾಜ್ಯವಾಗಿತ್ತು. “ಕೊರ“ಗಪದದಿಂದಲೇ ಕೊನೆಗೆ ಕೊಡಗ ಎಂಬ ಹೆಸರು ಬರುತ್ತದೆ. ನಂತರದ ಕಾಲದಲ್ಲಿ ಕೊಡಗಿಗೆ ಬೇರೆಜನರು ಬರುತ್ತಿರಲು ಕೊರ ಜನರು ಕೊಡಗುಬಿಟ್ಟು ತುಲುಕಾಡಿನ ಎತ್ತರದ ಘಟ್ಟ ಪ್ರದೇಶದಲ್ಲಿ ನೆಲೆ ಆಗುವರು. ತುಲುನಾಡಿನ ಸಂಬಂಧವನ್ನುಉಳಿಸಿಕೊಂಡು ಇರುತ್ತಾರೆ. ತುಲುನಾಡಿಗೆ ಇಳಿದು ಇಲ್ಲಿನ ಕಾಡು ಉತ್ಪನ್ನಗಳನ್ನು ಒಯ್ದು ಘಟ್ಟದ ಮೇಲಿನ ಊರುಗಳಿಗೆ ಮಾರಿ ಜೀವಿಸುವರು.

ಕಾಲಗಳು ಉರುಳುತ್ತದೆ. ಕೇರಳದಲ್ಲಿ ನೆಲೆಯಾಗಿದ್ದ ತುಲುವ ಆದಿವಾಸಿಗಳಿಗೆ ಅಲ್ಲಿ ಶೂದ್ರರು ಎಂಬ ಹೆಸರು ಸುತ್ತಿಕೊಂಡು ಸತ್ತು ಬದುಕುವ ಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲಿಂದ ಕೆಲವರು ತಮ್ಮ ಆದಿಆರಂಭದ ನಾಡು ತುಲುನಾಡನ್ನು ಹುಡುಕುತ್ತಾಬರುತ್ತಾರೆ. ನೋಡುವುದೇನು ಅದು ತುಲುಕಾಡಗಿತ್ತು. “ಕೊರ“ಜನರು ಅಂದು ಇವರ ಪೂರ್ವಜರಿಗೆ ನೆರವುಕೊಟ್ಟಂತೆ ಇಲ್ಲೂ ಕೊರ ಜನರೇ ತುಲುಕಾಡಿನ ಬಗ್ಗೆಎಚ್ಚರ ಕೊಡುವರು. ಗುಂಪು ಗುಂಪಾಗಿ ಕೇರಳದಿಂದ ಶೂದ್ರರು ತುಲುಕಾಡಿಗೆ ಬರುವರು. ನೂರಾರು ವರ್ಷಗಳವರೆಗೂ ಇಲ್ಲಿ ಕುಡು(ಹುರುಳಿ)ಬಿತ್ತಿ ತಿಂದು ಬದುಕುಸಾಗಿಸುವರು. ಎತ್ತರದ ಸಮತಟ್ಟಾದ ಜಾಗದಲ್ಲಿ ಭತ್ತಬಿತ್ತಿ ಅಕ್ಕಿ ಸೃಷ್ಟಿ ಮಾಡುವರು. ಕುಡರಿ(ಹುರುಳಿ, ಅಕ್ಕಿ)ದಕ್ಕ್ ದ್(ಎಸೆದು)ತುಲುನಾಡು ಸೃಷ್ಟಿ ಆಯಿತು ಎಂದರು. ನಂತರದಲ್ಲಿ ಕೇರಳದಿಂದ ದಲಿತರು ತುಲುನಾಡಿಗೆ ಬರಲಾರಂಭಿಸುವರು. ಈ ಕಾಲದಲ್ಲೇ ತುಲುನಾಡಲ್ಲಿ ದೈವರಾಧನೆ(ನಾಗಮತ್ತು ಬೂತೊಗಳು) ಆರಂಭವಾಗಿತ್ತು.

ಈ ಕಾಲದಲ್ಲಿ ಕೊರ ಜನರು ಮಳೆಗಾಲದಲ್ಲಿ ಮಳೆ ಯಿಂದ ರಕ್ಷಿಸಿಕೊಳ್ಳಲು ಅವರದ್ದೇ ಆದ ಒಂದು ಸಾಧನವನ್ನು ಬಳಸುತ್ತಿದ್ದರು. ಅದನ್ನು ತೊಡುವ ಶೈಲಿ ಮತ್ತು ಅದರ ತಯಾರಿಯನ್ನು ಕೇರಳದಿಂದ ಬಂದಶೂದ್ರರು ನೋಡುವರು. ಅದರ ಅನ್ವೇಷಣೆ ಮತ್ತು ಆವಿಷ್ಕಾರಗಳನ್ನು ಇವರು ಪೂರ್ತಿಯಾಗಿ ಮೆಚ್ಚುವರು. ತಮಗೂ ಧರಿಸುವ ಮನಸ್ಸಾಗುವುದು. ಅದರಂತೆಯೇ ಕೊರ ಜನರು ಅವರಿಗೂ ತಯಾರಿಸಿ ಕೊಡುವರು. ಇಲ್ಲಿ ನೋಡಿ ಈ ಸಾಧನಕ್ಕೆ ಸೂದ್ರರು “ಕೊರಂಬು”ಎಂಬ ಅರ್ಥಪೂರ್ಣವಾದ ಹೆಸರು ಕೊಡುವರು. ಆವರೆಗೂ ಈ ಸಾಧನಕ್ಕೆ ಹೆಸರು ಇರಲಿಲ್ಲ. ಇಲ್ಲೇಕೊರ ಜನರನ್ನುಸೂದ್ರರು “ಕೊರಗೆ”,”ಕೊರಗ”ಎಂದುಕರೆಯುತ್ತಾರೆ. ಆಯೆಗೆ,ಇಂಬೆಗೆ,ಬಲಗ,ಪೋಲಗ ಎಂಬ ಪದಗಳು ತುಲು ಭಾಷೆಯಲ್ಲಿ ಇದೆ. ಇದುಹೆಚ್ಚಾಗಿ ಏಕವಚನದಲ್ಲಿ ಗುರುತಿಸುವ ಕರೆಯುವಪದಗಳು ಆಗಿರುತ್ತದೆ. ಅದರಂತೆ ಕೊರ ಮಹಿಳೆಯನ್ನು”ಕೊರ”ತಿ ,”ಕೊರ”ಗೆತಿ ಎಂದು ಕರೆಯುತ್ತಾರೆ. “ಕೊರ”ಪ್ಪೊಲು (ಕೊರ+ಅಪ್ಪುಲು)ಎಂತಲೂ ಕರೆಯುತ್ತಾರೆ. ಇದು ಪ್ರೀತಿಯಿಂದ ಕರೆಯುವುದು. “ಅಪ್ಪುಲು” ,”ಅಪ್ಪೊಲು” ಎಂದು ಹೆಣ್ಣು ಮಗುವನ್ನುಪ್ರೀತಿಯಿಂದ ಕರೆಯುವುದು ಈಗಲೂ ತುಲುನಾಡಿನಲ್ಲಿಇದೆ. ದಲಿತರೂ ಕೊರಗರ ಕೊರಂಬು ಕೊಳ್ಳುವರು.

ತುಲುನಾಡಿಗೆ ಜೈನರ ಪ್ರವೇಶ. ಹೊಲಗದ್ದೆಗಳ ನಿರ್ಮಾಣ. ನೂರಾರು ವರ್ಷಗಳ “ಕೊಳ”(ಪಟ್ಲ)ಕ್ಕೆ ಗದ್ದೆಗಳ ಬೃಹತ್ ಯೋಜನೆ. ತುಲುಕಾಡಲ್ಲಿ ತುಲು ನಾಡು ಕಟ್ಟುವ ಯೋಜನೆ. ಬೇರೆ ಬೇರೆ ಊರುಗಳಿಂದವಿವಿಧ ಜಾತಿಯ ಜನರು ಬರುತ್ತಾರೆ. ಗೇಣಿದಾರರು,ಕೂಲಿ ಕಾರ್ಮಿಕರು,ವಿವಿಧ ವೃತ್ತಿಪರ ಜನರು,ಕಸಬುದಾರರು ಇತ್ಯಾದಿ ಇತ್ಯಾದಿ ಜನರು ತುಲುನಾಡಿಗೆ ಧಾವಿಸುವರು. ಭತ್ತದ ಕೃಷಿ ಕೆಲಸಗಳೇ ಮುಖ್ಯಉದ್ಯೋಗ ಖಾತರಿ ಆಗುತ್ತದೆ. ಆ ಕಾಲದಲ್ಲಿ ತುಲುನಾಡಲ್ಲಿ ಎಂಟು ತಿಂಗಳು ಮಳೆಗಾಲವೇ ಆಗಿತ್ತು. “ಕೊರಂಬು”ಎಲ್ಲಾ ಮನೆಗಳಿಗೂ ಅಗತ್ಯ ಇತ್ತು. ದಿನದಿಂದ ದಿನಕ್ಕೆ ಕೊರಂಬು ಬೇಡಿಕೆಹೆಚ್ಚುತ್ತದೆ. ಇವುಗಳನ್ನು ಪೂರೈಸಲು “ಕೊರ”ಗರಿಂದ ಕಷ್ಟವಾಗುತ್ತದೆ. ಇದರೊಡನೆ ಕೊರಗರು ಅಗತ್ಯ ವಸ್ತುಗಳಾದ ವಿವಿಧಕುರುವೆ,ಬಿತ್ತ ಕುರುವೆ,ಪುಡಾಯಿ,ಕೂರಿ,ಗಲಗೆ,ಬಲ,ಸಾರನೆ,ಪೆಟ್ಟಿಗೆ, ಮಕ್ಕೆರಿ(ವಿವಿಧ ಬುಟ್ಟಿಗಳು ಮತ್ತುಕೃಷಿ ಸಲಕರಣೆಗಳು)ಇತ್ಯಾದಿಗಳನ್ನು ಪೂರೈಸಲುಕೊರಗರಿಗೆಸಾಧ್ಯವಾಗುವುದಿಲ್ಲ. ಈ ಸಂದಿಗ್ಧಕಾಲದಲ್ಲಿ “ಕೊರಂಬು”ತಯಾರಿಸುವ ವಿದ್ಯೆಯನ್ನುಇತರ ಕಸಬುದಾರರು ಕೊರಗರಿಂದ ಕಲಿತು ಕೊಳ್ಳುವರು. ಇತರ ಜಾತಿಯ ಜನರು ಕೊರಂಬುಕಲಿತು ತುಲುನಾಡಿನಾದ್ಯಂತ ಅಲ್ಲದೆ ತುಲುನಾಡಿನ ಪಕ್ಕದ ಘಟ್ಟದ ಊರ ಜಿಲ್ಲೆಯ ಜನರಿಗೂ ಕೊರಗರಕೊರಂಬು ಪೂರೈಸುವರು. ಇತರ ಜಾತಿಯ ಜನರುಕೊರಂಬು ತಯಾರಿಸಿದರೂ ಅದರ ಹೆಸರು ಬದಲಾಗುವುದಿಲ್ಲ. “ಕೊರ”ಜನರಿಂದ ಹುಟ್ಟಿದ ಹೆಸರೇ “ಕೊರಂಬು”ಎಂದು ಶಾಶ್ವತವಾಗಿ ಉಳಿಯುತ್ತದೆ. ಘಟ್ಟದಲ್ಲಿ “ಗೊರ್ಗ”ಎಂದು ಕರೆದರು. “ಕೊರಗ” ಪದವನ್ನೇ”ಗ”ಕಾರದಲ್ಲಿ ಗೊರಗ,ಗೊರ್ಗಎಂದಿದ್ದಾರೆ. ಕನ್ನಡದ ಜನರು ಕೂಡಾ “ಕೊರಂಬು”ಪದದ ಬದಲು”ಗ” ಕಾರದಲ್ಲಿ ಉಚ್ಛರಿಸಿ “ಗೊರಂಬು”,”ಗೊರಬುಎಂದು ಕರೆದರು. “ಕೊರ”ಪದವನ್ನು ಎಲ್ಲೂ ಅಳಿಸಲುಪ್ರಯತ್ನ ಪಟ್ಟಿಲ್ಲ. “

 

ತುಲುನಾಡಿನಾದ್ಯಂತ ಕರೆಯುವ “ಕುರುವೆ”(ಬುಟ್ಟಿ)ಪದವೂ ಕೊರಗ, ಕುರಗ ಪದದಿಂದಲೇ ಹುಟ್ಟಿದೆ. ಮೀನು ಹಿಡಿಯುವ “ಕೂರಿ”ಸಾಧನವೂ “ಕೊರ” ಹೆಸರಿನಿಂದಲೇ ಬಂದಿದೆ. ಭತ್ತದ ಕಣಜಕ್ಕೆ ಸುತ್ತಿ ಬಳಸುವ “ಗಲಗೆ”ಪದವೂ ಕೊರಗ ಪದದಿಂದಲೇಬಂದಿರುವುದು ಕಾಣುತ್ತದೆ. “ಕ”ಕಾರಕ್ಕೆ “ಗ” ಕಾರಮತ್ತು”ರ”ಕಾರಕ್ಕೆ “ಲ” ಕಾರ ಬಂದಿದೆ. ಇದು ತುಲುಭಾಷೆಯಲ್ಲಿ ಸಾಮಾನ್ಯ ವಾಗಿದೆ. “ಪುಡಾಯಿ”(ದೊಡ್ಡಮಟ್ಟದ ಬುಟ್ಟಿ)ಕೊರಗರ “ಕಡಾಯಿ”(ಡೋಲು)ಕೊರಗರ ಭಾಷೆಯಿಂದ ಬಂದಿರುವುದು ಗೋಚರಿಸುತ್ತದೆ. ಹೊಳೆಯಲ್ಲಿ ಮೀನು ಬಾಚುವ”ಮಕ್ಕೆರಿ” ಇದರಲ್ಲೂ ಕೊರ ಪದ ಅಡಗಿದೆ.

ಅಂದು ತುಲುನಾಡು ಬೆಳೆಯುವ ಕಾಲದಲ್ಲಿ ತುಲುವರಿಗೆ ಸಿಕ್ಕಿದ ಕೊರಗರ ಕೊಡುಗೆ ಅಷ್ಟಿಷ್ಟಲ್ಲ. ಅದು ನಿರಂತರವಾಗಿ ಸಿಗುತ್ತಲೇ ಇತ್ತು. ಈಗಿನ ಪ್ಲಾಸ್ಟಿಕ್ ಯುಗದಿಂದಾಗಿ ಅವರ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಅಲ್ಲದೆ ಕಾಡುಗಳಲ್ಲಿ ಅವರಿಗೆ ಬೇಕಾದ ಉತ್ಪತ್ತಿಗಳು ಇಲ್ಲದಂತಾಗಿದೆ. ಅವರಿಗೆ ಅವರ ಕೀಳರಿಮೆಯಿಂದಾಗಿ ಎಲ್ಲರೊಂದಿಗೆ ಬೆರೆತು ಬದುಕಲು ಆಗುವುದಿಲ್ಲ. ತುಲುನಾಡಿನ ಆದಿನಿವಾಸಿಗಳನ್ನು ಬಿಟ್ಟರೆ ತುಲುನಾಡಿಗೆ ಪ್ರಪ್ರಥಮವಾಗಿ ಕಾಲಿಟ್ಟವರೇ ನಮ್ಮ”ಕೊರ”ಜನಾಂಗದ ಕೊರಗರು. ಆದರೆ ಅವರ ಸ್ಥಿತಿ ಎಲ್ಲಿಯವರೆಗೆ ಕೊರಗಿದೆ ಎಂದರೆ ಇರಲು ಸರಿಯಾದ ಸೂರು ಇಲ್ಲ. ಇನ್ನೂ ಅನಾದಿಕಾಲದವರಂತೆ ಇದ್ದಾರೆ. ಅವರು ವಿದ್ಯಾವಂತರಾಗಬೇಕು. ಸರ್ಕಾರದಎಲ್ಲಾ ಸೌಲಭ್ಯಗಳನ್ನು ಅವರಿಗೆ ಒದಗಿಸುವ ಕೆಲಸ ಆಗಬೇಕು. ಅಸ್ಪೃಶ್ಯತೆಯ ಪಿಡುಗಿನಿಂದ ಅವರನ್ನುಹೊರತರಬೇಕು.

ಕೊರಂಬು“ಇದರ ಅನ್ವೇಷಣೆ ಆವಿಷ್ಕಾರರು “ಕೊರ”ಜನಾಂಗದ ಕೊರಗರು. ಇದಕ್ಕೆ “ಕೊರಂಬು“ಎಂಬ ನಾಮಕರಣ ಮಾಡಿದವರು ಸೂದ್ರರು. ಇದರ ಪ್ರಕಾಶಕರು ಜೈನರು. ತುಲುನಾಡಲ್ಲಿ ಅದೆಷ್ಟೋ ಮಂದಿಆಯುರ್ವೇದ ಪಂಡಿತರಿದ್ದರು ಮತ್ತು ಈಗಲೂ ಇದ್ದಾರೆ. ಇವರೆಲ್ಲರ ಪೂರ್ವಜರು ಆ ವೈದ್ಯಪಾಂಡಿತ್ಯವನ್ನು ಈ ಕೊರಗರಿಂದ ಪಡೆದಿದ್ದಾರೆ ಎಂಬುದನ್ನು ಮರೆಯಲೇಬಾರದು. ಈ ಪಾಂಡಿತ್ಯವನ್ನು ಕೊರಗರಿಗೆ ಕರುಣಿಸಿರುವುದು ಆಪ್ರಕೃತಿ ಮಾತೆ.

ಕೊರಂಬು“ಪದದಲ್ಲಿ “ಕೊರ” ಪದದೊಡನೆ “ಅಂಬು”ಎಂಬ ಪದವು ಸೇರಿದೆ. “ಕೊರ” ಎಂಬುದುಒಂದು ಜನಾಂಗದ ಹೆಸರು. “ಅಂಬು”ಎಂದರೆ ಮುಖ್ಯವಾಗಿ ನೀರು. ಹರಿದು ಹೋಗುವ ನೀರು. ಕೊರಂಬು ಎಂಬ ಅದ್ಭುತ ಸಾಧನದಲ್ಲಿ ನೀರು ಹರಿದುಹೋಗುತ್ತದೆ. ಅಂಬು ಎಂಬ ಪದಕ್ಕೆ ಕಣೆ,ಬಾಣ,ಆಕಾಶಇತ್ಯಾದಿ ಅರ್ಥಗಳು ಇದ್ದರೂ ಭಾರತದ ಹೆಚ್ಚಿನ ಭಾಷೆಗಳಲ್ಲಿ ಮುಖ್ಯವಾಗಿ ನೀರು ಎಂದು ಹೇಳಿದೆ. ತುಲುಭಾಷೆಯಲ್ಲೂ “ಅಂಬು”ಎಂದರೆ ನೀರು ಎಂದು ಹೇಳಿದೆ. ಅದಕ್ಕೆ ಸಾಕಷ್ಟು ಶಬ್ಧಗಳನ್ನು ತುಲು ಭಾಷೆಕೊಟ್ಟಿದೆ.

ಕಂರ್ಬು (ಕಬ್ಬು): ಕರ್(ಕಲ್)+ಅಂಬು. ಕಂರ್ಬು ಇದರ ಹೊರ ಕವಚ ಕಲ್ಲಿನಂತೆ ಗಟ್ಟಿಯಾಗಿದೆ. ಆದರೆಒಳಗೆ ಹಾಲು ರಸ ಇದೆ. ಕಬ್ಬಿನ ನೀರು ಸಿಗುತ್ತದೆ. ನೆಯಿ ಅಂಬು: ಹೊರ ಕವಚ ಮೃದು. ಒಳಗೆ ನೀರಿದೆ. ಕಂಬ್ಲ: ಕ್+ಅಂಬುಲ=ಕೆಸರು ನೀರು. ಎಂದರೆ ಕಂಬುಲ. ಗೋಡಂಬುಲು,ಕಿನ್ಯಂಬುಲು, ಜಂಬುನೇರೊಲು ಇವುಗಳಲ್ಲೂ, ಹಾಲು,ರಸ,ನೀರು ತುಂಬಿರುತ್ತದೆ. ಲ್+ಅಂಬು=ಲಾಂಬು(ಅಣಬೆ). ಇದನ್ನು ಜಜ್ಜಿ ಬಿಟ್ಟರೆನೀರಾಗಿ ಬಿಡುತ್ತದೆ. ಅಂಬುಜ(ತಾವರೆ),ಅಂಬುಲಿ(ಗಂಜಿ),ಅಂಬಿ,ಅಂಬಿಗ ಈ ಶಬ್ಧಗಳು ಕೂಡಾ ತುಲುಭಾಷೆಯಲ್ಲಿ ಬಳಕೆ ಆಗಿದೆ.

(ಚಿತ್ರ: ಕೊರಗರ ಮುಟ್ಟಾಲೆ. ಇದು ಕೊರಗರ ಕೊರಂಬು ನಂತರದ ಕೊರಗರದ್ದೇ ಆವಿಷ್ಕಾರ.)

ತುಲುನಾಡಲ್ಲಿ ದೈವಗಳ ಸಂಶೋಧನೆ, ಅಧ್ಯಯನ ಅನಗತ್ಯ. ಸರಳವಾದ ನಂಬಿಕೆ ಮತ್ತು ಆರಾಧನೆ ಸಾಕಾಗುತ್ತದೆ. ನಮ್ಮ ಪೂರ್ವಜರು ಅಷ್ಟೇ ಮಾಡಿದ್ದು. ಇವೆಲ್ಲ ದೈವಗಳಿಗೂ ಅಗತ್ಯವಿಲ್ಲ. ಇವೆಲ್ಲಾ ಮಾನವನು ತನ್ನದೇ ಹೊಸತನವನ್ನು ಪ್ರದರ್ಶನ ಮಾಡುವುದು. ತುಲು ಅಕಾಡೆಮಿಯವರು ಎಚ್ಚೆತ್ತುಇಂತಹಾ ಅರ್ಥಇಲ್ಲದ ಸತ್ಯತೆ ಇಲ್ಲದ ವೈಭವವನ್ನು ನಿಲ್ಲಿಸಬೇಕು. ಬದಲಾಗಿ ಬಲು ಪುರಾತನದ ನಮ್ಮ ಮುತ್ತಿನಂತಹ ತುಲು ಭಾಷೆಯ ಅಧ್ಯಯನ, ಸಂಶೋಧನಾ ಕೆಲಸವನ್ನು ಆರಂಭಿಸಬೇಕು. ಭಾಷೆಯನ್ನು ಶ್ರೀಮಂತಗೊಳಿಸಬೇಕು. ದೈವಗಳ ಸಂದಿ,ಬೀರ,ಪಾಡ್ದನ,ಪಾರಿ,ದೈವಗಳ ವಿಪರೀತಅಬ್ಬರ,ದೈವಗಳ ವಿಚಿತ್ರ ಭಕ್ತಿ ಗೀತೆ,ಅಸಂಖ್ಯಾತ ಜೀಟಿಗೆಗಳು, ಬೃಹತ್ ಗಾತ್ರದ ಅಣಿ,ಕಾಲ್ಪನಿಕ ಕತೆಗಳು ಇತ್ಯಾದಿ ಇತ್ಯಾದಿ ಇವೆಲ್ಲವೂ ಮನೋರಂಜನೆ ಮಾತ್ರ. ಇವುಗಳಿಂದ ನಮ್ಮ ತುಲುಭಾಷೆಯನ್ನು ಶ್ರೀಮಂತಗೊಳಿಸಲು ಆಗುವುದಿಲ್ಲ. ತುಲು ಭಾಷೆಯ ದೊಡ್ಡ ಮಟ್ಟದ ಅಧ್ಯಯನಕ್ಕಾಗಿದೊಡ್ಡ ಮಟ್ಟದ ಸಂಶೋಧನಾ ಕೇಂದ್ರ ಬೇಕು. ರಾಜ್ಯ, ಕೇಂದ್ರ ಸರಕಾರಗಳ ಮುಂದೆ ನಮ್ಮ ಬೇಡಿಕೆಇಡಬೇಕು. ಭಾಷೆ ಶ್ರೀಮಂತ ಆದರೆ ಮಾತ್ರ ನಮಗೆಮುಂದುವರಿಯಲು ಸಾಧ್ಯ ಇರುತ್ತದೆ. ತುಲು ಭಾಷೆಯಷ್ಟು ಅರ್ಥಪೂರ್ಣ ಭಾಷೆ ಬೇರೊಂದು ಇಲ್ಲ.

ತುಲುನಾಡಿನಲ್ಲಿ “ಕೊರ”ಗರ ಕುಟುಂಬಗಳ ಸಂಖ್ಯೆಕಡಿಮೆ ಆದಲ್ಲಿ ತುಲುವರ ಕುಟುಂಬಗಳು ಕಡಿಮೆ ಆದಂತೆ. ತುಲುನಾಡು ಅವಸಾನದತ್ತ ಸಾಗುತ್ತದೆ. ಎಚ್ಚರಇರಲಿ. ಇದು ನನ್ನ “ಕೊರ”ಜನಾಂಗದ ಕೊರಗರ ಕತೆ. “ಕೊರಂಬು” ಇದರ ಚರಿತ್ರೆ ಮತ್ತು ಇತಿಹಾಸ. ಮಳೆ,ಗಾಳಿ, ಮಿಂಚು,ಗುಡುಗು, ಸಿಡಿಲು, ಆಲಿಕಲ್ಲು, ಚಳಿ,ಬಿಸಿಲು ಇವುಗಳಿಂದ ರಕ್ಷಿಸಿಕೊಳ್ಳುವ ಸಾಧನವೇ ಕೊರಗರ ಕೊರ ಅಂಬು ಕೊರಂಬು.

Leave a Reply

Your email address will not be published. Required fields are marked *