
HINDUISM : Mannarsala Temple , snake worship , Kerala , India
ತುಳುನಾಡುಪುರಾಣಕಾಲದ ನಾಗಲೋಕವೆಂದೂ, ಇಲ್ಲಿ ಇರುವ ನಾಗಗಳೇಮನುಷ್ಯರಾಗಿ ಪರಿವರ್ತನೆಗೊಂಡರೆಂಬುದು ಪುರಾಣದ ಉಲ್ಲೇಖ. ಈನಾಡು ತಲಸಿರಿಯ ಮಕ್ಕಳಾದ ನಲವತ್ತುಜನ ನಾಗಕನ್ಯೆಯರ ಅಧಿಕಾರದಲ್ಲಿತ್ತೆಂದು ಜಾನಪದ ಇತಿಹಾಸದಲ್ಲಿದೆ. ಮಲಸಿರಿಯಮಕ್ಕಳು 60 ಜನ ನಾಗಕನ್ಯೆಯರು ಮಲಯಾಳರಾಜ್ಯವನ್ನು ಆಳುತ್ತಿದ್ದರೆಂದೂ, ತುಳುನಾಡು ಮತ್ತು ಮಲಯಾಳದಲ್ಲಿ ನಾಗಮೂಲಕಟ್ಟಾದ ಅಳಿಯಕಟ್ಟಿನವರು ಇದ್ದೂ, ಅವರು ನಾಗಾರಾಧಕರಾಗಿಇರುವುದನ್ನು ಕಾಣುತ್ತಿದ್ದೇವೆ. ಇಲ್ಲಿ ಹೆಣ್ಣು ಮೂಲಕಟ್ಟಿಗೆವಾಸುಕಿಯೇ ಕಾರಣ, ತನ್ನ ಸೊಸೆಯಂದಿರಿಗೆಈ ನಾಡಿನ ಆಳ್ವಿಕೆಬಿಟ್ಟು ಕೊಟ್ಟಿದ್ದು, ತುಳುವರು ನಾಗವಂಶಜರೆಂದೆ ಐತಿಹ್ಯ. ಇಲ್ಲಿ ನಾಗರ ಆರಾಧನೆ ವಿಶೇಷವಾಗಿಇದೆ. ಈ ಆರಾಧನೆಯಲ್ಲಿ ರಾಹುವಿಗೆಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಗ್ರಂಥಗಳಲ್ಲಿರಾಹುವಿನಿಂದ ನಾಗದೋಷಗಳನ್ನು ತಿಳಿಯುವುದು ಸುಲಭ. ಶನಿ–ಕುಜರು ಕೂಡಾನಾಗಕಾರಕರೆ ಆದರೂ, ನಾಗನ ಬಗ್ಗೆಹೆಚ್ಚಿನ ವಿಚಾರ ರಾಹುವಿನಿಂದಲೇ ತಿಳಿಯುವರು. ನಾಗರ ಆರಾಧನೆ ಒಂದು ಪ್ರಕೃತಿಪೂಜೆ. ತಮ್ಮ ಗದ್ದೆಗಳ ಮೂಲೆಯಲ್ಲಿ ನಾಗಬನಗಳನ್ನುಬೆಳೆಸಿ, ಉಳಿಸಿ ನಾಗರ ಕಲ್ಲನ್ನುಮರದ ಬುಡದಲ್ಲಿ ಪ್ರತಿಷ್ಠೆ ಮಾಡಿ, ಆ ಬನದಮರಗಳನ್ನು ರಕ್ಷಿಸಿ ಖಗ, ಮಿಗ, ಉರಗಗಳಿಗೆ ಒಂದು ನೆಲೆಮಾಡಿಕೊಟ್ಟು ತಮ್ಮಔದಾರ್ಯವನ್ನು ತುಳುವರು ಮೆರೆದಿದ್ದಾರೆ.
ಸೂಪರ್ ಸರ್,ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿಗಳ ನಿರೀಕ್ಷೆ ನಮಗಿದೆ.
ಸೂಪರ್ ಸರ್,ನಿಮ್ಮಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿಗಳ ನಿರೀಕ್ಷೆ ನಮಗಿದೆ.
ಸೂಪರ್..
Very nice
Very nice
Very nice
Very nice
ನಾಗಾರಾಧನೆ ಎಂಬುದು ಒಂದು ಪ್ರಕೃತಿ ಪೂಜೆ.ಹಿಂದುಗಳಲ್ಲಿ ನಾಗಾರಾಧನೆಗೆ ವಿಶೇಷ ಸ್ಥಾನಮಾನವಿದೆ ಎಂಬುದನ್ನು ತಿಳಿಸಿಕೊಟ್ಟ ಲೇಖನ. ಚೆನ್ನಾಗಿತ್ತು.