January 18, 2025
1

ಅಂಗಳದಲ್ಲಿನ ಮನೆಮದ್ದು ಅರಿಶಿನದ ಎಲೆಗಳು

ನಮ್ಮ ಸುತ್ತಮುತ್ತಲಿನ ಅನೇಕ ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಪೂರಕವಾಗಿರುತ್ತವೆ. ನಾವು ಅದನ್ನು ಬಳಸುತ್ತಿದ್ದರೂ ಅದರ ಪ್ರಯೋಜನಗಳ ಬಗ್ಗೆ ಅಷ್ಟೊಂದು ಗೊತ್ತಿರುವುದಿಲ್ಲ. ಅಂತಹ ಗಿಡಗಳಲ್ಲಿ ಅರಿಶಿನದ ಗಿಡ ಕೂಡ ಒಂದು.

ಅರೇ ಇದೇನಿದು ಅರಿಶಿನ ಬೇರಿನ ರೂಪದಲ್ಲಿ ಸಿಗುತ್ತದೆ ಅದನ್ನು ಮಾತ್ರ ಬಳಸಬಹುದು ಎಂದುಕೊಂಡವರು ಎಂದು ಯೋಚಿಸುತ್ತಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಅರಿಶಿನ ಗಿಡದ ಎಲೆಯನ್ನೂ ಕೂಡ ಸೇವನೆ ಮಾಡಬಹುದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಹಳ್ಳಿಗಳಲ್ಲಿ ಅರಿಶಿನ ಎಲೆಯನ್ನು ಸಿಹಿ ತಿಂಡಿಗಳನ್ನು ತಯಾರಿಸಲು ಬಳಸುತ್ತಾರೆ. ಇದು ಅಡುಗೆಗೆ ವಿಶೇಷ ಘಮ ನೀಡುವುದರ ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ. ಹಾಗಾದರೆ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ನೋಡೋಣ.

​ನಂಜು ನಿರೋಧಕ

ಅರಿಶಿನದ ಎಲೆಯಲ್ಲಿ ಸೋಂಕು ನಿವಾರಕ ಗುಣವಿದೆ, ಹೀಗಾಗಿ ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಗಾಯಗಳು ಮತ್ತು ಕಡಿತಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು.

ಅರಶಿನದ ಎಲೆಗಳನ್ನು ಮೇಲೋಗರದಂತಹ ಪದಾರ್ಥಗಳಲ್ಲಿ ಬಳಸಬಹುದು. ಕೆಲವು ಕಡೆ ಅನ್ನವನ್ನೂ ಕೂಡ ಅರಿಶಿನ ಎಲೆಯಲ್ಲಿ ಅಕ್ಕಿ ಹಾಕಿ ತಯಾರಿಸುತ್ತಾರೆ. ಇದು ಕಜ್ಜಿ. ತುರಿಕೆಯಂತಹ ಚರ್ಮದ ಸಮಸ್ಯೆಗಳನ್ನೂ ನಿವಾರಿಸುತ್ತದೆ.

ಅಜೀರ್ಣಕ್ಕೆ ಬೆಸ್ಟ್‌ ಮದ್ದು

ಆಯುರ್ವೇದ ವೈದ್ಯರು ಹೇಳುವ ಪ್ರಕಾರ ಅರಿಶಿನ ಎಲೆಯನ್ನು ಬಾಯಿಗೆ ಹಾಕಿ ಅಗೆಯುವುದರಿಂದ ಅದರ ರಸ ಹೊಟ್ಟೆಗೆ ಹೋಗಿ ಅಜೀರ್ಣ, ಹೊಟ್ಟೆ ಸಮಸ್ಯೆಗಳನ್ನು ನಿವಾರಿಸುತ್ತದೆ.

ಜಾನಪದ ಔಷಧದಲ್ಲಿ ಎಲೆಗಳನ್ನು ವಿವಿಧ ಆರೋಗ್ಯ ಕಾಯಿಲೆಗಳಿಗೆ ಕಷಾಯ ಮಾಡಲು ಬಳಸಲಾಗುತ್ತದೆ.

ಮುಖದ ಸೌಂದರ್ಯಕ್ಕೆ

ಅರಿಶಿನದ ಎಲೆಗಳನ್ನು ಪೇಸ್‌ ಮಾಸ್ಕ್‌ ರೀತಿಯಲ್ಲಿಯೂ ಬಳಕೆ ಮಾಡಬಹುದಾಗಿದೆ. ಮೊಡವೆಯಿಂದ ಕೂಡಿದ ಚರ್ಮಕ್ಕಾಗಿ ಎಲೆಗಳ ಪೇಸ್ಟ್ ಅನ್ನು ಮುಖಕ್ಕೆ ಅನ್ವಯಿಸಬಹುದು. ಇದು ಚರ್ಮದ ಕಿರಿಕಿರಿಯನ್ನು ಸಹ ನಿವಾರಿಸುತ್ತದೆ. ಅಲ್ಲದೆ ಚರ್ಮವನ್ನು ಸ್ವಚ್ಛಗೊಳಿಸಿ ಹೊಳೆಯುವಂತೆ ಮಾಡುತ್ತದೆ.

ಸಂಧಿವಾತದಂತಹ ಸಮಸ್ಯೆಗಳಿಗೆ

ಕರ್ಕ್ಯುಮಿನ್‌ನ ಬಲವಾದ ಉರಿಯೂತದ ಗುಣಲಕ್ಷಣಗಳಿಂದಾಗಿ, ಅರಿಶಿನ ಎಲೆಗಳು ಅಸ್ಥಿಸಂಧಿವಾತ ಮತ್ತು ಸಂಧಿವಾತದಿಂದ ಬಳಲುತ್ತಿರುವವರಿಗೆ ಅತ್ಯುತ್ತಮ ಮನೆಮದ್ದಾಗಲಿದೆ. ತಜ್ಞರ ಪ್ರಕಾರ ಜೈವಿಕ-ಸಕ್ರಿಯ ಸಂಯುಕ್ತವು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಹೀಗಾಗಿ ವೈದ್ಯರ ಸಲಹೆಯನ್ನು ಪಡೆದುಕೊಂಡು ಸೂಕ್ತ ಪ್ರಮಾಣದಲ್ಲಿ ಸೇವನೆ ಮಾಡುವುದು ಒಳ್ಳೆಯದು.ರೆ ವೈದ್ಯರು.

ಮಧುಮೇಹಿಗಳಿಗೆ ಒಳ್ಳೆಯದು

ಸಾಮಾನ್ಯವಾಗಿ ಅರಿಶಿನವನ್ನು ಮಧುಮೇಹಿಗಳಿಗೆ ಬಹಳ ಉತ್ತಮ ಎನ್ನುತ್ತಾರೆ. ಆದರೆ ಅರಿಶಿನ ಎಲೆಗಳೂ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಈ ಕಾರಣದಿಂದಾಗಿ ಮಧುಮೇಹಿಗಳಿಗೆ ಅರಿಶಿನದ ಎಲೆಗಳು ಬಹಳ ಒಳ್ಳೆಯದು ಎನ್ನುತ್ತಾರೆ ವೈದ್ಯರು.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *