January 18, 2025
Udupi Soumya & Bharat Mudigere engagement 1

ಉಡುಪಿ ಕುತ್ಪಾಡಿಯ ಶ್ರೀಮತಿ ಶ್ರೀ ಸರೋಜ ಚಂದ್ರಶೇಖರ ಭಂಡಾರಿಯವರ ಮಗಳು ಚಿ. ಸೌ ಸೌಮ್ಯಶ್ರೀ  ಮತ್ತು ಮೂಡಿಗೆರೆಯ ಶ್ರೀಮತಿ ಮತ್ತು ಶ್ರೀ ವನಿತಾ ಷಣ್ಮುಖಾನಂದ ಭಂಡಾರಿಯವರ ಪುತ್ರ ಚಿ. ಭರತ್ ರವರ ಮದುವೆ ನಿಶ್ಚಿತಾರ್ಥ ಮಾರ್ಚ್ 28 ರ ಭಾನುವಾರ ಚಂದ್ರಭಂಡಾರಿ ಯವರ ನೂತನ ಗೃಹ ಕಡೆಕಾರ್ ನ ಜಗದೀಶ್ವರಿ ನಿಲಯದಲ್ಲಿ ಎಲ್ಲಾ ಬಂಧುಗಳ ಸಮ್ಮಖದಲ್ಲಿ ಅದ್ದೂರಿಯಾಗಿ ನೆರವೇರಿತು.

ಈ ಸುಸಂದರ್ಭದಲ್ಲಿ ವಧುವಿನ ದೊಡ್ಡಪ್ಪ ಮತ್ತು ದೊಡ್ಡಮ್ಮ ಶ್ರೀಮತಿ ಮತ್ತು ಶ್ರೀ ಸುನಂದಾ ಸುಂದರ ಭಂಡಾರಿ ಕುತ್ಪಾಡಿ, ಚಿಕ್ಕಮ್ಮ ಸುಮ ವಿಠಲ ಭಂಡಾರಿ ಮತ್ತು ಮಕ್ಕಳು, ಮಾವ ಎಂಪಿಎಂ ಉದ್ಯೋಗಿ ರಘುಪತಿ ಭಂಡಾರಿ ಸಂಸಾರ ಸಮೇತರಾಗಿ ಹಾಜರಿದ್ದರು.

ಹಿರಿಯರಾದ ಬಾಳೆಹೊನ್ನೂರಿನ ಹಿರಿಯಣ್ಣ ಭಂಡಾರಿ ದಂಪತಿಗಳು, 2021 ನೇ ಸಾಲಿನ ಕಚ್ಚೂರು ಉತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಅಶೋಕ ಭಂಡಾರಿ ಕುತ್ಪಾಡಿ, ಕಾರ್ಯದರ್ಶಿ ಶ್ರೀ ಸಂತೋಷ ಭಂಡಾರಿ, ಕಚ್ಚೂರು ದೇವಸ್ಥಾನ ಕಮಿಟಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮಶೇಖರ ಭಂಡಾರಿ ಉಪಸ್ಥಿತರಿದ್ದರು.

ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಉಪಾಧ್ಯಕ್ಷರಾದ ಶ್ರೀಯುತ ಮೋಹನ ಭಂಡಾರಿ, ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿ ಶಿರಾಳಕೊಪ್ಪ ಹಾಜರಿದ್ದು ಜೋಡಿಯನ್ನು ಆಶೀರ್ವದಿಸಿದರು.

ವಧು ಮತ್ತು ವರನ ಕಡೆಯ ಅಪಾರ ಬಂಧುವರ್ಗ ಹಾಜರಿದ್ದು ಆಶೀರ್ವದಿಸಿದರು. ಆಗಮಿಸಿದ ಎಲ್ಲಾ ಬಂಧುಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿ ಚಂದ್ರಶೇಖರ ದಂಪತಿಗಳು ಸಂತೋಷ ಪಟ್ಟರು.

ಈ ಜೋಡಿಯು ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಸಂತೃಪ್ತಿಯ  ಜೀವನವನ್ನು  ನಡೆಸಲು ಭಗವಂತನ ಅನುಗ್ರಹ  ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.

ವರದಿ : ಸುಧಾಕರ್ ಭಂಡಾರಿ ಶಿರಾಳಕೊಪ್ಪ 

Leave a Reply

Your email address will not be published. Required fields are marked *