ಉಡುಪಿಯ ನಿಟ್ಟೂರು, ಕೊಡಂಕೂರು ಶ್ರೀಕೃಷ್ಣ ಭಂಡಾರಿಯವರು ಡಿಸೆಂಬರ್ 18,2019 ರ ಬುಧವಾರ ಸಂಜೆ 7:30 ಕ್ಕೆ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಶ್ರೀ ಕೃಷ್ಣ ಭಂಡಾರಿಯವರು ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡು ಹಲವು ವರ್ಷಗಳ ಕಾಲ ದೂರದ ದುಬೈಯಲ್ಲಿ ನೆಲಸಿದ್ದರು.ಅವರು ಪತ್ನಿ ಲೀಲಾವತಿ ಕೃಷ್ಣ ಭಂಡಾರಿ, ಮಕ್ಕಳಾದ ಹರೀಶ್ ಭಂಡಾರಿ, ಅಂಬರೀಶ್ ಭಂಡಾರಿ, ಉಷಾ ಹರೀಶ್ ಭಂಡಾರಿ ಮುಂಬಯಿ, ರೇಖಾ ಸುಭಾಷ್ ಭಂಡಾರಿ ಗುಜ್ಜಾಡಿ, ಗೀತಾ ಸುಧಾಕರ ಭಂಡಾರಿ ಶಿರಾಳಕೊಪ್ಪ, ಸೊಸೆಯಂದಿರಾದ ಜಯಲಕ್ಷ್ಮೀ ಹರೀಶ್ ಭಂಡಾರಿ, ವರಲಕ್ಷ್ಮಿ ಅಂಬರೀಶ್ ಭಂಡಾರಿ, ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಬಂಧು ಬಾಂಧವರನ್ನು ಆಗಲಿದ್ದಾರೆ.ಮೃತರ ಅಂತ್ಯಕ್ರಿಯೆಯು ಡಿಸೆಂಬರ್ 19 ರ ಮಧ್ಯಾಹ್ನ 2 ಗಂಟೆಗೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದರು.
ಕಚ್ಚೂರು ದೇವಸ್ಥಾನದ ಜೀರ್ಣೋದ್ಧಾರ ಸಮಯದಿಂದಲೂ ಸಮಾಜದ ಕಾರ್ಯಗಳಿಗೆ ಯಥೋಚಿತ ಧನ ಸಹಾಯ ನೀಡುತ್ತಾ, ಸಮಾಜ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಕೊಡಂಕೂರು ಶ್ರೀ ಕೃಷ್ಣ ಭಂಡಾರಿಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ, ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ದೇವರು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ ” ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ.