
ಉಡುಪಿ ಕುಂಜಿಬೆಟ್ಟಿನ ದಿ. ಬಸಪ್ಪ ಭಂಡಾರಿ ಅವರ ಪುತ್ರ, ಶೇಷಗಿರಿ ಭಂಡಾರಿಯವರು ಅಲ್ಪ ಕಾಲದ ಆಸೌಖ್ಯದಿಂದ ದಿನಾಂಕ 16-05-2018 ರ ಬುಧವಾರ ಸಂಜೆ ವಿಧಿವಶರಾದರು .ಇವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು .
ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿಯಾಗಿದ್ದ ದಿವಂಗತರು ಬಾರ್ಕೂರಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಉಡುಪಿ ಉತ್ಸವ ಸಮಿತಿ ಹಾಗೂ ಬ್ರಹ್ಮಕಲಶದ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ದಿವಂಗತ ಶೇಷಗಿರಿ ಭಂಡಾರಿಯವರು ಪತ್ನಿ ನಿರ್ಮಲಾ ಶೇಷಗಿರಿ ಭಂಡಾರಿ ಮತ್ತು ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು , ಮೊಮ್ಮಕ್ಕಳು ,ಬಂಧು ವರ್ಗದವರು ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ .
ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 17.05.2018 ರಂದು ಬೆಳಿಗ್ಗೆ 10 ಗಂಟೆಗೆ ಕುಂಜಿಬೆಟ್ಟು ಮನೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶ್ರೀ ದೇವರು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಟ್ಟು, ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ