
ಉಡುಪಿ ಮಂಚಿಯ ಪ್ರಶಾಂತ್ ಮತ್ತು ಹರಿಖಂಡಿಗೆ ಸಂಗೀತ ವಿವಾಹ ಸಂಭ್ರಮ.
ಉಡುಪಿ ಮಂಚಿಯ ದಿವಂಗತ ಕಾರ್ಕಳ ಸಂಜೀವ ಭಂಡಾರಿ ಮತ್ತು ರೇವತಿ ಸಂಜೀವ್ ಭಂಡಾರಿ ದಂಪತಿಯ ಪ್ರಥಮ ಪುತ್ರ
ಚಿ|| ಪ್ರಶಾಂತ್.
ಮತ್ತು ಹರಿಖಂಡಿಗೆ ದಿವಂಗತ ರಾಘು ಭಂಡಾರಿಯವರ ದ್ವಿತೀಯ ಪುತ್ರಿ
ಚಿ||ಸೌ|| ಸಂಗೀತ.
ಇವರ ವಿವಾಹ ಮಹೋತ್ಸವವು ನವೆಂಬರ್ 14,2018 ರ ಬುಧವಾರ ಹರಖಂಡಿಗೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಸಭಾಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಈ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಗುರು ಹಿರಿಯರು,ಬಂಧು ವರ್ಗದವರು,ಸ್ನೇಹಿತರು ಮತ್ತು ಆತ್ಮೀಯರು ನೂತನ ವಧುವರರಿಗೆ ಆಶೀರ್ವದಿಸಿ, ಶುಭ ಶುಭ ಹಾರೈಸಿ, ಯಥೋಚಿತ ಸತ್ಕಾರ ಸ್ವೀಕರಿಸಿದರು.
ನೂತನ ವಧು ವರರಾದ ಪ್ರಶಾಂತ್ ಮತ್ತು ಸಂಗೀತರಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಿ ಅವರ ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಕೋರುತ್ತದೆ.
— ಭಂಡಾರಿವಾರ್ತೆ.