
ಉಡುಪಿ ಬೈಲೂರು ದಿವಂಗತ ಸಂಕಿ ಭಂಡಾರಿ ಮತ್ತು ಕುಂದಾಪುರದ ದಿವಂಗತ ವೆಂಕಟಪ್ಪ ಭಂಡಾರಿ ದಂಪತಿಯ ಪುತ್ರಿ ಹಾಗೂ ಉಡುಪಿ ಪಾಂಗಾಳ ದಿವಂಗತ ಭೋಜ ಭಂಡಾರಿಯವರ ಪತ್ನಿ ಶ್ರೀಮತಿ ಉಮಾ ಭೋಜ ಭಂಡಾರಿಯವರು ಅಕ್ಟೋಬರ್ 2 ರ ಮಂಗಳವಾರದಂದು ಧಾರವಾಡದಲ್ಲಿರುವ ಹಿರಿಯ ಪುತ್ರಿ ಶ್ರೀಮತಿ ಪ್ರೇಮಾ ಮರೋಳಿಯವರ ಮನೆಯಲ್ಲಿ ನಿಧನರಾದರು.ಅವರಿಗೆ 85 ವಷ೯ ವಯಸ್ಸಾಗಿತ್ತು.

ಅವರ ಏಕೈಕ ಪುತ್ರ ಕಮಲಕರ ಭಂಡಾರಿ ಕಳೆದ ನಾಲ್ಕು ವಷ೯ಗಳ ಹಿಂದೆ ದೈವಾಧೀನರಾಗಿದ್ದರು. ಶ್ರೀಮತಿ ಪ್ರೇಮಲೀಲಾ.ಆರ್.ಮರೋಳಿ ಧಾರವಾಡ ,ಶ್ರೀಮತಿ ಸುಮತಿ.ಆರ್.ಭಂಡಾರಿ,ಮುಂಬಯಿ ಮತ್ತು ಶ್ರೀಮತಿ ರಮಾ ಗೋಪಿನಾಥ್, ಬೆಂಗಳೂರು ಮೂವರು ಪುತ್ರಿಯರು ಹಾಗೂ ಬಂದು ಬಳಗವನ್ನು ಅವರು ಅಗಲಿದ್ದಾರೆ.

ಉಮಾ ಭೋಜ ಭಂಡಾರಿಯವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಪುತ್ರಿಯರಿಗೆ, ಮೊಮ್ಮಕ್ಕಳಿಗೆ ಮತ್ತು ಬಂಧು ಬಳಗಕ್ಕೆ ಭಗವಂತನು ದಯಾಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತದೆ.