January 19, 2025
nidhi-sri

ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಕಾವ್ಯಪಾಠ ಸ್ಪರ್ಧೆಯಲ್ಲಿ ಉಡುಪಿಯ ಕೇಂದ್ರೀಯ ವಿದ್ಯಾಲಯವನ್ನು ಪ್ರತಿನಿಧಿಸಿದ ಕುಮಾರಿ ನಿಧಿಶ್ರೀ ಗಂಗಾಧರ ಭಂಡಾರಿ ದ್ವಿತೀಯ ಬಹುಮಾನ ಗಳಿಸಿಕೊಂಡಿದ್ದಾರೆ. ಮತ್ತು ಶಾಲಾ ಕ್ರೀಡಾಕೂಟದಲ್ಲಿ ಇವರನ್ನೊಳಗೊಂಡ ಅಶೋಕ ತಂಡ ಖೋಖೋ ಆಟದಲ್ಲಿ ಪ್ರಥಮ ಬಹುಮಾನ ಗಳಿಸಿತು.

 

ಉಡುಪಿಯ ಕೇಂದ್ರೀಯ ವಿದ್ಯಾಲಯದಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ನಿಧಿಶ್ರೀ ಉಡುಪಿ ಬಿರ್ತಿಯ  ಶ್ರೀ ಗಂಗಾಧರ ಭಂಡಾರಿ ಮತ್ತು ಶ್ರೀಮತಿ ಶಾಲಿನಿ ಗಂಗಾಧರ ಭಂಡಾರಿ ದಂಪತಿಗಳ ಹಿರಿಯ ಪುತ್ರಿ. 

ಕುಮಾರಿ ನಿಧಿಶ್ರೀ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಮತ್ತು ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

ವರದಿ:ಭಾಸ್ಕರ್ ಭಂಡಾರಿ. ಶಿರಾಳಕೊಪ್ಪ.

Leave a Reply

Your email address will not be published. Required fields are marked *