ಸತತ ಎರಡು ದಶಕಗಳ ಕಾಲ ಅಪಘಾತ ರಹಿತವಾಗಿ ಕೆಎಸ್ಆರ್ ಟಿಸಿ ಬಸ್ ಚಾಲನೆ ಮಾಡಿದ ಸಾಧನೆಗಾಗಿ ಉಜಿರೆಯ ಎಸ್. ಉಮೇಶ್ ಭಂಡಾರಿ ಅವರಿಗೆ ಚಿನ್ನದ ಪದಕ ನೀಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಗೌರವಿಸಿದೆ.
ಜನವರಿ 26 ರ ಬುಧವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಜರಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯದ ಮಾನ್ಯ ಇಂಧನ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ವಿ.ಸುನಿಲ್ ಕುಮಾರ್ ಈ ಪ್ರಶಸ್ತಿಯನ್ನುವಿತರಿಸಿದರು.
ಉಮೇಶ್ ಭಂಡಾರಿಯವರಿಗೆ 1999 ನೇ ಇಸವಿಯಲ್ಲಿ ಸತತ 5 ವರ್ಷ ಅಪಘಾತ ರಹಿತ ಚಾಲನೆಗೆ ಬೆಳ್ಳಿ ಪದಕ ಲಭಿಸಿತ್ತು .
ಇದೀಗ ಸತತ 15 ವರ್ಷಗಳ ಅಪಘಾತ ರಹಿತ ಚಾಲನೆಗೆ ಮತ್ತೊಮ್ಮೆ ಚಿನ್ನದ ಪದಕ ಮತ್ತು ಪ್ರಶಸ್ತಿ ಲಭಿಸಿರುವುದು ಕೆಲಸದಲ್ಲಿ ಅವರಿಗಿರುವ ಶ್ರದ್ಧೆ ,ನಿಷ್ಠೆಯನ್ನು ಸೂಚಿಸುತ್ತದೆ.
ಈ ಪ್ರಶಸ್ತಿ ಲಭಿಸಿದ ಧರ್ಮಸ್ಥಳ ಡಿಪೋ ದ 4 ಚಾಲಕರಲ್ಲಿ ಹಾಗೂ ಪುತ್ತೂರು ಡಿವಿಷನ್ ನ 11 ಚಾಲಕರಲ್ಲಿ ಉಮೇಶ್ ಭಂಡಾರಿಯೂ ಒಬ್ಬರಾಗಿರುವುದು ವಿಶೇಷ .
ಕೊಪ್ಪದ ದಿವಂಗತ ಶೀನ ಭಂಡಾರಿ ಮತ್ತು ದಿವಂಗತ ರಮಣಿ ಭಂಡಾರಿ ಯವರ ಮೂರನೇ ಮಗನಾಗಿ ಜನಿಸಿದ ಶ್ರೀ ಉಮೇಶ್ ಭಂಡಾರಿಯವರನ್ನು 1987 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಾಲಕರಾಗಿ ನೇಮಿಸುತ್ತದೆ .ಉಮೇಶ್ ಭಂಡಾರಿಯವರು ಚಿಕ್ಕಮಗಳೂರು ಡಿಪೋ ದಲ್ಲಿ 2 ವರ್ಷ ಹಾಗೂ ಧರ್ಮಸ್ಥಳ ಡಿಪೋ ದಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.
ರಾತ್ರಿ ಹೊತ್ತಿನಲ್ಲಿ ತನ್ನ ಬಸ್ ನಲ್ಲಿ ಯಾರಾದರೂ ಅಶಕ್ತ ,ಒಬ್ಬಂಟಿ ಮಹಿಳೆ, ಹೆಣ್ಣು ಮಕ್ಕಳಿದ್ದರೆ ಅವರ ಮನೆಯ ವರೆಗೆ ತಲುಪಿಸುವ ಜವಾಬ್ದಾರಿ ತೆಗೆದುಕೊಂಡು ಇಂತಹ ಹಲವಾರು ಉತ್ತಮ ಕೆಲಸಗಳನ್ನು ತಮ್ಮ ಸೇವಾವಧಿಯಲ್ಲಿ ಮಾಡಿಕೊಂಡು ಬಂದಿದ್ದಾರೆ.
ತನ್ನ ಕ್ಷೇತ್ರದಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿ ದುಡಿದಿರುವ ಉಮೇಶ್ ಭಂಡಾರಿ ಪ್ರಸ್ತುತ ಭಂಡಾರಿ ಸಮಾಜ ಸಂಘ ಬೆಳ್ತಂಗಡಿ ಯ ಅಧ್ಯಕ್ಷರಾಗಿದ್ದಾರೆ .
ಶ್ರೀಯುತರ ಸೇವೆಯನ್ನು ಮನಗಂಡು ಕರ್ನಾಟಕ ಸರಕಾರ 1996 ರಲ್ಲಿ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಸ್ತುತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಧರ್ಮಸ್ಥಳ ಡಿಪೋ ದಲ್ಲಿ ಚಾಲಕ ತರಭೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ಉಮೇಶ್ ಭಂಡಾರಿ ಯವರು ಪತ್ನಿ ರಾಜೇಶ್ವರಿ ಹಾಗೂ ಇಬ್ಬರು ಮಕ್ಕಳಾದ ಚೈತನ್ಯ ಕುಮಾರ್ ಮತ್ತು ಚರಿತ್ರ ರ ಜೊತೆ ಉಜಿರೆಯಲ್ಲಿ ವಾಸ್ತವ್ಯ ಹೊಂದಿದ್ದಾರೆ .
ಉಮೇಶ್ ಭಂಡಾರಿಯವರ ಅತ್ಯುನ್ನತ ಸೇವೆಗೆ ಕರ್ನಾಟಕ ರಾಜ್ಯ ಸರಕಾರ ಚಿನ್ನದ ಪದಕ ನೀಡಿ ಗೌರವಿಸಿರುವುದು ಭಂಡಾರಿ ಸಮಾಜಕ್ಕೊಂದು ಹೆಮ್ಮೆಯ ವಿಚಾರವಾಗಿದೆ .
ಇದೇ ಬರುವ ಮೇ ತಿಂಗಳಿನಲ್ಲಿ ನಿವೃತ್ತಿ ಹೊಂದುತ್ತಿರುವ ಉಮೇಶ್ ಭಂಡಾರಿ ಯವರಿಗೆ ದೇವರು ಉತ್ತಮ ಆರೋಗ್ಯವನ್ನು ಕೊಟ್ಟು ಕರುಣಿಸಲಿ , ಮುಂಬರುವ ದಿನಗಳಲ್ಲಿ ಅವರಿಂದ ನಮ್ಮ ಸಮಾಜಕ್ಕೂ ಉತ್ತಮ ಸೇವೆ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿ ಶುಭ ಹಾರೈಸುತ್ತದೆ .
ಉಮೇಶ್ ಭಂಡಾರಿ ಯವರಿಗೆ ಅಭಿನಂದನೆ ಸಲ್ಲಿಸಲು ಬಯಸುವವರು ಅವರ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು +91 9448622784 ,8762360333.
-ಭಂಡಾರಿ ವಾರ್ತೆ
Congratulations