January 18, 2025
Prasad-feature

ಕಾರ್ಕಳ ತಾಲೂಕಿನ ಮಾಳ ಗ್ರಾಮದ ದಿವಂಗತ ಸುಂದರ ಭಂಡಾರಿಯವರ ಮಗ ಪ್ರಸಾದ್ ಭಂಡಾರಿ ( ಪ್ರಾಯ 27) ತನ್ನ ತಾಯಿಯೊಂದಿಗೆ ವಾಸವಿದ್ದು, ಇವರು ಅನಿರೀಕ್ಷಿತ ಅನಾರೋಗ್ಯಕ್ಕೆ ತುತ್ತಾಗಿರುತ್ತಾರೆ. ಕ್ಷೌರಿಕ ವೃತ್ತಿ ಮಾಡುತ್ತಿರುವ ಇವರಿಗೆ ಆಗಾಗ್ಗೆ ವಿಪರೀತ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಈ ಕಾರಣದಿಂದ ಸರಿಯಾಗಿ ಉದ್ಯೋಗ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇತ್ತೀಚೆಗೆ ಸೂಕ್ತ ವೈದ್ಯರಿಂದ ತಪಾಸಣೆಗೊಳಿಸಿದಾಗ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿರುವ (brain hemorrhage) ಬಗ್ಗೆ ತಿಳಿದಾಗ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ ಮಾನಸಿಕವಾಗಿ ಕುಗ್ಗಿಹೋಗಿದ್ದಲ್ಲದೇ ಬರಸಿಡಿಲು ಬಡಿದಂತಾಗಿದೆ. ತಂದೆ ಸುಂದರ ಭಂಡಾರಿ ಅನೇಕ ವರ್ಷಗಳ ಕಾಲ ಪಾರ್ಶ್ವ ವಾಯು ಪೀಡಿತರಾಗಿದ್ದು ಇತ್ತೀಚೆಗೆ ಮರಣ ಹೊಂದಿದ್ದರು. ತಾಯಿಗೂ ವಯಸ್ಸಾಗಿದ್ದು ಕೆಲಸ ಮಾಡಲು ಶಕ್ತರಾಗಿಲ್ಲ . ಮನೆಗೆ ಆಧಾರವಾಗಿದ್ದ ಮಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು ಅಪರೇಷನ್ ಮಾಡಿಸಲು ರೂ . 80,000 ಮತ್ತು ಇತರ ಆಸ್ಪತ್ರೆ ವೆಚ್ಚಗಳು ಸೇರಿ ಒಟ್ಟು ರೂ. 100,000 ಮೀರಬಹುದೆಂದು ವೈದ್ಯರು ತಿಳಿಸಿದ್ದಾರೆ. ಯಾವುದೇ ಆರೋಗ್ಯ ವಿಮೆ ಕೂಡ ಹೊಂದಿಲ್ಲದೆ ,ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬ ಸಹಾಯಕ್ಕಾಗಿ ಭಂಡಾರಿ ವಾರ್ತೆಯನ್ನು ಸಂಪರ್ಕಿಸಿ ಬಂಧುಗಳಲ್ಲಿ ಸಹಾಯಯಾಚಿಸಿದ್ದಾರೆ.


ಈ ಶಸ್ತ್ರಚಿಕಿತ್ಸೆಗೆ ರೂ.  80,000 ಖರ್ಚಾಗಲಿದ್ದು, 2 ವಾರದೊಳಗೆ ಹಣ ಹೊಂದಿಸಬೇಕಾಗಿದೆ. 2 ವಾರದೊಳಗೆ ಶಸ್ತ್ರಚಿಕಿತ್ಸೆ ಮಾಡದಿದ್ದಲ್ಲಿ ಅಪಾಯವಾಗುವ ಸಾಧ್ಯತೆಯಿದೆ ಎಂಬುದನ್ನು ವೈದ್ಯರು ತಿಳಿಸಿರುತ್ತಾರೆ. ಭಂಡಾರಿ ಬಂಧುಗಳು ಈ ತುರ್ತು ಮನವಿಗೆ ಸ್ಪಂದಿಸಿ ತಮ್ಮ ಕೈಲಾದಷ್ಟು ಸಹಾಯ ಹಸ್ತ ನೀಡಬೇಕಾಗಿ ಭಂಡಾರಿ ವಾರ್ತೆ ವಿನಮ್ರವಾಗಿ ಮನವಿ ಮಾಡುತ್ತದೆ.

ತಾಯಿ ಐರಾ ಭಂಡಾರಿಯವರ ಬ್ಯಾಂಕ್ ಖಾತೆ ಸಂಖ್ಯೆಗೆ ನೇರವಾಗಿ ಹಣ ವರ್ಗಾಯಿಸಬಹುದು.

A/c No: 01632200051457

IFSC Code: SYNB0000163

Branch: Syndicate bank Bajagoli

ಮಾಹಿತಿಗಾಗಿ ಸಂಪರ್ಕಿಸಿ : 8861028390 ಮತ್ತು 9980563164.

 

 

Leave a Reply

Your email address will not be published. Required fields are marked *