ಸೌಂದರ್ಯ , ಆರೋಗ್ಯ , ಅಡುಗೆ ಮುಂತಾದ ದೈನಂದಿನ ವಿಷಯಗಳ ಬಗ್ಗೆ ಉಪಯುಕ್ತ ಸಲಹೆಗಳನ್ನು ಭಂಡಾರಿ ವಾರ್ತೆ ಇನ್ನು ಮುಂದೆ ಪ್ರತೀ ಭಾನುವಾರ ಪ್ರಕಟಿಸಲಿದೆ ..
1) ಅನ್ನ ಮೆದುವಾಗುತ್ತದೆಂಬ ಚಿಂತೆ ಬೇಡ, ಬೇಯಿಸುವಾಗ ಸ್ವಲ್ಪ ತುಪ್ಪ ನಾಲ್ಕಾರು ಹನಿ ನಿಂಬೆರಸ ಸೇರಿಸಿ ಅನ್ನ ಉದುರುದುರಾಗುವುದು.
2) ಮಿಕ್ಸಿಯನು ಒಂದೇ ಸಲಕ್ಕೆ ಮೂರನೇ ಗುಂಡಿಯನ್ನು ಒತ್ತಬೇಡಿ, ಮಿಕ್ಸಿ ಬೇಗ ಹಾಳಾಗುತ್ತದೆ , ಕ್ರಮವಾಗಿ ಒಂದೊಂದೇ ಗುಂಡಿಗಳನ್ನು ಒತ್ತುತ್ತಾ ಹೋಗಿ.
3) ಮಿಕ್ಸಿ ಜಾರ್ ಗಳನು ಸೋಪಿನ ಪುಡಿಯಿಂದ ತೊಳೆಯಬೇಡಿ, ಬಿಸಿ ನೀರಿನಿಂದ ತೊಳೆದು ಒರೆಸಿಟ್ಟರೆ ಸಾಕು. ಸಾಬೂನು ಹಾಕಿದರೆ ಬ್ಲೇಡು ಹಾಳಾಗುತ್ತದೆ. ಮಿಕ್ಸಿ ಮಸಾಲೆ ರುಬ್ಬಿದ ಮೇಲೆ ವಾಸನೆ ಉಳಿದರೆ ಬ್ರೇಡ್ ತುಂಡು ಮಾಡಿ ರುಬ್ಬಿ ವಾಸನೆ ಹೋಗುತ್ತದೆ.
4) ಟೀ ಕಾಫಿ ಕಲೆ ಸ್ಟಿಲ್ ಪಾತ್ರೆಯಲ್ಲಿ ಉಳಿದಿದ್ದರೆ ಉಪ್ಪಿನ ನೀರಿನಲ್ಲಿ ನೆನೆಸಿಟ್ಟು ತೊಳೆಯಿರಿ.
5) ನಾನ್ ಸ್ಟಿಕ್ ಪ್ಯಾನ್ ಗಳನು ಬಿಸಿ ನೀರಿನಲ್ಲಿ ನೆನೆಸಿಟ್ಟು ತೊಳೆದರೆ ಸುಲಭವಾಗುತ್ತದೆ
ಸಂಗ್ರಹಕರು : ನೇತ್ರಾ ಮಂಗಳೂರು