January 18, 2025
Useful Tips

ಉಪಯುಕ್ತ ಸಲಹೆಗಳು

  •  ಅರ್ಧ ಬಕೇಟ್ ನೀರಿಗೆ ಮೂರು ಚಮಚ ಅಮೋನಿಯಮ್ ಬೆರೆಸಿ ಅದರಲ್ಲಿ ಅಡುಗೆ ಮನೆಯಲ್ಲಿ ಧರಿಸುವ ಏಪ್ರಾನ್ ನೆನೆಹಾಕಿ ಇಪ್ಪತ್ತು ನಿಮಿಷ ಬಿಟ್ಟು ಬ್ರಷ್ ನಿಂದ ಉಜ್ಜಿದರೆ ಕಲೆ ಹೋಗುತ್ತದೆ.

 

  • ಗ್ಯಾಸ್ ಸ್ಟವ್ ಮೇಲೆ ವಿನಿಗರ್ ಹಾಕಿ 30 ನಿಮಿಷ ಬಿಡಿ. ನಂತರ ಸೋಪು ಹಾಕಿ ಉಜ್ಜಿದರೆ ಗ್ಯಾಸ್ ಹೊಸತರಂತೆ ಹೊಳೆಯುತ್ತದೆ. ಸ್ಟವ್ ಮೀನು ಮತ್ತು ಮೊಟ್ಟೆಯ ವಾಸನೆ ಬರುತ್ತಿದ್ದರೆ ಅಡುಗೆ ಸೋಡಾ ಬಳಸಿ ಉಜ್ಜಿದರೆ ವಾಸನೆ ಹೋಗುತ್ತದೆ.

 

  • ಅಡುಗೆ ಕೋಣೆಯ ನೆಲವನ್ನು ಕ್ಲೀನ್ ಮಾಡಲು ವಿನಿಗರ್ ನಿಂಬೆ ರಸ ಹಾಗೂ ಬಿಸಿ ನೀರನ್ನು ಸೇರಿಸಿ ಶುಚಿ ಮಾಡಿ ಇದರಿಂದ ನೆಲ ಹೊಳೆಯುತ್ತದೆ.

 

  •  ಬಾಟಲಿ, ಡಬ್ಬಿಗಳನ್ನು ಕ್ಲೀನ್ ಮಾಡಲು ಬಿಸಿ ನೀರು ಹಾಗೂ ಅಕ್ಕಿಯನ್ನು ಬಳಸಿ. ಬಾಟಲಿಯಲ್ಲಿ ಮುಕ್ಕಾಲು ಭಾಗ ಬಿಸಿ ನೀರು ಹಾಕಿ ಒಂದು ಚಮಚ ಅಕ್ಕಿ ಹಾಕಿ

 

  • ಬಾಟಲಿಯನ್ನು ಚೆನ್ನಾಗಿ ಕುಲುಕಿಸಿ ಆ ನೀರನ್ನು ಹೊರ ಚೆಲ್ಲಿ ಬೇರೆ ನೀರಿನಿಂದ ತೊಳೆಯಿರಿ

ಸಂಗ್ರಹ: ನೇತ್ರಾ ‌ಮಂಗಳೂರು

Leave a Reply

Your email address will not be published. Required fields are marked *