ತಲೆಕೂದಲು ಬಿಳಿ ಆಗುವುದು/ ಉದುರುವುದು
1) ದಾಸವಾಳದ ಹೂವು ಮತ್ತು ಬೃಂಗರಾಜ ಸಸ್ಯದ ಎಲೆಗಳನ್ನು ತೆಂಗಿನ ಎಣ್ಣೆಯಿಂದ ಬೇಯಿಸಿ ತಯಾರಿಸಿದ ಎಣ್ಣೆ ತಲೆಗೆ ಹಚ್ಚಿ.
2) ಒಂದೆಲಗದ ಸೊಪ್ಪನು ಆಹಾರದಲ್ಲಿ ಸೇವಿಸಿ.
3) 20 ಬಿಳಿ ದಾಸವಾಳದ ಎಲೆ ಮತ್ತು 40 ಕರಿಬೇವಿನ ಎಲೆಗಳನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ ಕೂದಲ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದರೆ ಕೂದಲು ಕಪ್ಪಾಗುತ್ತದೆ.
4) ವಾರಕ್ಕೆ ಮೂರು ಬಾರಿಯಾದರೂ ಮೊಟ್ಟೆಯ ಬಿಳಿ ಭಾಗಕ್ಕೆ ನಿಂಬೆರಸ ಬೆರಸಿ ಕೂದಲಿಗೆ ಲೇಪಿಸಿದರೆ ಕೂದಲಿನ ಬುಡ ಗಟ್ಟಿಯಾಗುತ್ತದೆ, ಹೊಟ್ಟು ನಿವಾರಣೆಯಾಗುತ್ತದೆ.
ಸಂಗ್ರಹ: ನೇತ್ರಾ ಮಂಗಳೂರು