ಉಪಯುಕ್ತ ಸಲಹೆಗಳು
1) ಲೋಳೆಸರವನ್ನು ಮಜ್ಜಿಗೆಗೆ ಹಾಕಿ ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
2) ಮಧುಮೇಹ ಅಥವಾ ಸಕ್ಕರೆ ರೋಗ ಇದ್ದವರು ಪ್ರತಿದಿನ ಮುಂಜಾನೆ ಹೊತ್ತಲ್ಲಿ ಎಂಟು- ಹತ್ತು ತಾಜಾ ಕರಿಬೇವು ಎಲೆಗಳನ್ನು ಅಗಿದು ಸೇವಿಸಿ.
3) ಅಮೃತ ಬಳ್ಳಿಯ ಒಂಭತ್ತು ಅಂಗುಲದಷ್ಟು ಕಾಂಡವನ್ನು ಚೆನ್ನಾಗಿ ಜಗಿಯುವುದರಿಂದ ಮಧುಮೇಹ ಹತೋಟಿಗೆ ಬರುತ್ತದೆ.
4) ರಕ್ತಹೀನತೆಗೆ ಬಾಳೆಹಣ್ಣು ಮತ್ತು ಕಿತ್ತಳೆ ಹಣ್ಣಿನ ರಸ ಮಿಶ್ರ ಮಾಡಿ ಸತತವಾಗಿ ಸೇವಿಸಬೇಕು.
5) ಗರಿಕೆ ಹುಲ್ಲನ್ನು ಹಗಲು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಟ್ಟು ಶೋಧಿಸಿ ಕುಡಿದರೆ ಮೂಲ ವ್ಯಾಧಿ ಕಡಿಮೆ ಆಗುತ್ತದೆ.
ಸಂಗ್ರಹ: ನೇತ್ರಾ ಮಂಗಳೂರು