ಕುಂದಾಪುರದ ಬಸ್ರೂರು ಶ್ರೀ ಮಹಾಲಿಂಗ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ವಾಸಂತಿ ಮಹಾಲಿಂಗ ಭಂಡಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ಡಿಸೆಂಬರ್ 25, 2018 ರ ಮಂಗಳವಾರ ರಾತ್ರಿ 8:15 ಕ್ಕೆ ನಿಧನ ಹೊಂದಿದರು.ಅವರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು.

ಮೃತರು ಪತಿ ಶ್ರೀ ಮಹಾಲಿಂಗ ಭಂಡಾರಿ, ಮಕ್ಕಳಾದ ಶ್ರೀಮತಿ ರಾಧಿಕಾ ನಾಗರಾಜ್ ಭಂಡಾರಿ, ಶ್ರೀ ರಾಘವೇಂದ್ರ ಭಂಡಾರಿ, ಶ್ರೀ ರಾಮಚಂದ್ರ ಭಂಡಾರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

ಮೃತರು ಪತಿ ಶ್ರೀ ಮಹಾಲಿಂಗ ಭಂಡಾರಿ, ಮಕ್ಕಳಾದ ಶ್ರೀಮತಿ ರಾಧಿಕಾ ನಾಗರಾಜ್ ಭಂಡಾರಿ, ಶ್ರೀ ರಾಘವೇಂದ್ರ ಭಂಡಾರಿ, ಶ್ರೀ ರಾಮಚಂದ್ರ ಭಂಡಾರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಶ್ರೀಮತಿ ವಾಸಂತಿ ಮಹಾಲಿಂಗ ಭಂಡಾರಿಯವರ ಉತ್ತರ ಕ್ರಿಯೆಯು ಬಸ್ರೂರು ಮಕ್ಕಿಮನೆ ಆನಗಳ್ಳಿ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಜನವರಿ 5, 2019 ರ ಶನಿವಾರ ಮದ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಶ್ರೀಮತಿ ವಾಸಂತಿ ಮಹಾಲಿಂಗ ಭಂಡಾರಿಯವರ ನಿಧನದಿಂದ ದುಃಖತಪ್ತರಾದ ಅವರ ಕುಟುಂಬ ವರ್ಗದವರು, ಸಹೋದರ ಸಹೋದರಿಯರು, ಮಕ್ಕಳು ಮೊಮ್ಮಕ್ಕಳಿಗೆ ಆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ, ಶ್ರೀ ದೇವರು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
“ಭಂಡಾರಿವಾರ್ತೆ”