
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ದ ಶ್ರೀ ಬಾಲಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸುಜಾತ ಭಂಡಾರಿಯವರ ಪುತ್ರಿ ವೈಭವಿ ಬಿ.ಕೆ ಭಂಡಾರಿ ಇವರು ಡಿಸೆಂಬರ್ 2021ರಲ್ಲಿ ನಡೆದ ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ (80%) ಅಂಕಗಳೊಂದಿಗೆ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಈಗ ವಿದ್ವತ್ ಕಲಿಯುತ್ತಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ವೈಭವಿ ಬಿ.ಕೆ. ಭಂಡಾರಿ ಇವರು ಭಗವತಿ ಸಂಗೀತ ಮತ್ತು ನೃತ್ಯ ಶಾಲೆ ಕೊಪ್ಪ ಇಲ್ಲಿ ನೃತ್ಯಗುರು ವಿದ್ವಾನ್ ಶ್ರೀ ಭಾರ್ಗವ ಇವರಿಂದ ಭರತನಾಟ್ಯ ಕಲಿಯುತ್ತಿದ್ದು, ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ವೈಭವಿ ಬಿ.ಕೆ.ಭಂಡಾರಿ ಇವರು ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.