
ಡಿಸೆಂಬರ್ 3 ರಂದು ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಕಲೋತ್ಸವದ ,ಭರತನಾಟ್ಯ ಸ್ಪರ್ಧೆಯಲ್ಲಿ ಕುಮಾರಿ ವೈಭವಿ ಬಿ ಕೆ. ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶ್ರೀಮತಿ ಸುಜಾತ ಆರ್ ಭಂಡಾರಿ ಮತ್ತು ಶ್ರೀ ಬಾಲಕೃಷ್ಣ ಕೆ ವಿ ಯವರ ಪುತ್ರಿಯಾಗಿರುವ ವೈಭವಿ ಬಿ ಕೆ, ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಕುಮಾರಿ ವೈಭವಿಯವರು ಕೊಪ್ಪದ ಭಗವತಿ ನೃತ್ಯ ಶಾಲೆಯಲ್ಲಿ ಗುರು ವಿದ್ವಾನ್ ಶ್ರೀ ಭಾರ್ಗವ ಶರ್ಮಾರವರ ಬಳಿ ವಿದ್ವತ್ ಕಲಿಯುತ್ತಿದ್ದಾರೆ.
ವೈಭವಿಯವರು ಭರತನಾಟ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲಿ, ರಾಜ್ಯ ಮಟ್ಟದಲ್ಲಿ ಉತ್ತಮ ಸ್ಪರ್ಧೆ ನೀಡಿ ಪ್ರಶಸ್ತಿ ಗಳಿಸಿ ಹೆತ್ತವರಿಗೆ ಮತ್ತು ಸಮಾಜಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸುತ್ತದೆ .