
ವೈಭವಿ ಬಿ ಕೆ ರಾಜ್ಯ ಮಟ್ಟದ ಭರತ ನಾಟ್ಯ ಸ್ಪರ್ಧೆಯಲ್ಲಿ ತೃತೀಯ
ಶಿವಮೊಗ್ಗ ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಪ್ರೌಢಶಾಲಾ ವಿಭಾಗದ ಭರತ ನಾಟ್ಯ ಸ್ಪರ್ಧೆಯಲ್ಲಿ ಕೊಪ್ಪದ ಸೈಂಟ್ ಜೋಸೆಫ್ ಅಂಗ್ಲಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ವೈಭವಿ ಬಿ ಕೆ ಇವರು ತ್ತೃತೀಯ ಸ್ಥಾನ ಪಡೆದು ಶಾಲೆಗೆ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರನ್ನು ಗಳಿಸಿ ಕೊಟ್ಟಿದ್ದಾರೆ.
ಇವರು ಭಗವತಿ ಡ್ಯಾನ್ಸ್ ಶಾಲೆಯ ನೃತ್ಯ ಗುರು ವಿದ್ವಾನ್ ಶ್ರೀ ಭಾರ್ಗವ ಶರ್ಮಾ ಇವರಿಂದ ಮಾರ್ಗದರ್ಶನ ಪಡೆದಿದ್ದರು. ಇವರು ಕೊಪ್ಪದ ಬಾಲಕೃಷ್ಣ ಕೆ ವಿ ಭಂಡಾರಿ ಮತ್ತು ಸುಜಾತಾ ದಂಪತಿಗಳ ಮಗಳು.
ಇವರು ಮುಂದೆ ಕೂಡ ಇನ್ನೂ ಹೆಚ್ಚಿನ ಸಾಧನೆ ಮಾಡಿ ಯಶಸ್ಸನ್ನು ಪಡೆಯಲಿ ಎಂದು ಭಂಡಾರಿ ವಾರ್ತೆಯು ಈ ಮೂಲಕ ಹಾರೈಸುತ್ತದೆ.
ವರದಿ-ಭಂಡಾರಿ ವಾರ್ತೆ