January 18, 2025
anniverssary1

ಪೆರ್ಡೂರಿನ ಶ್ರೀ ಗೋವಿಂದ ಭಂಡಾರಿ ಮತ್ತು ಶ್ರೀಮತಿ ದೇವಕಿ ಗೋವಿಂದ ಭಂಡಾರಿ ದಂಪತಿಗಳು ತಮ್ಮ ವೈವಾಹಿಕ ಜೀವನದ ಸಾರ್ಥಕ ಐವತ್ತು ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಅವರ ಮಕ್ಕಳು,ಮೊಮ್ಮಕ್ಕಳು,ಮರಿಮಕ್ಕಳು ಮತ್ತು ಕುಟುಂಬಸ್ಥರು ಎಲ್ಲರೂ ಒಗ್ಗೂಡಿ ಹಿರಿಯರ ವೈವಾಹಿಕ ಜೀವನದ ಸುವರ್ಣೋತ್ಸವ ವನ್ನು ಫೆಬ್ರವರಿ 24 ರ ಶನಿವಾರ ಪೆರ್ಡೂರಿನ ತಮ್ಮ ಸ್ವಗೃಹ ಶ್ರೀನಿವಾಸ ನಿಲಯ ದಲ್ಲಿ ವೈಭವದಿಂದ ಆಚರಿಸಿದರು.

 

ಪೆರ್ಡೂರಿನ ದಿವಂಗತ ಸದಿಯ ಭಂಡಾರಿ ಮತ್ತು ಹೂವಮ್ಮ ಸದಿಯ ಭಂಡಾರಿ ದಂಪತಿಗಳ ಮಗ ಶ್ರೀ ಗೋವಿಂದ ಭಂಡಾರಿ ಮತ್ತು ದೊಂದೆರಂಗಡಿಯ ದಿವಂಗತ ಗಂಗ ಭಂಡಾರಿ ಮತ್ತು ಚಿಕ್ಕು ಭಂಡಾರಿ ದಂಪತಿಗಳ ಮಗಳು ಶ್ರೀಮತಿ ದೇವಕಿ ಗೋವಿಂದ ಭಂಡಾರಿ ದಂಪತಿಗಳದ್ದು ಆದರ್ಶಯುತವಾದ ಸಂತೃಪ್ತ ಜೀವನ.

 

ಈ ಶುಭ ಗಳಿಗೆಯಲ್ಲಿ ಮಕ್ಕಳಾದ ಶ್ರೀಮತಿ ರೇಖಾ ಮಂಜುನಾಥ ಭಂಡಾರಿ, ಶ್ರೀಮತಿ ಗೀತಾ ಸುಧಾಕರ ಭಂಡಾರಿ, ಶ್ರೀ ಶ್ರೀನಿವಾಸ್ ಭಂಡಾರಿ. ಕುವೈತ್ ಮತ್ತು ಶ್ರೀಮತಿ ಸುಚರಿತ ಶ್ರೀನಿವಾಸ್ ಭಂಡಾರಿ, ಶ್ರೀ ಸತೀಶ್ ಭಂಡಾರಿ ಮತ್ತು ಶ್ರೀಮತಿ ದೀಪಾ ಸತೀಶ್ ಭಂಡಾರಿ, ಶ್ರೀಮತಿ ಉಷಾ ಪ್ರಕಾಶ್ ಭಂಡಾರಿ, ಕು.ಆಶಾ ಭಂಡಾರಿ,ಮೊಮ್ಮಕ್ಕಳು,ಕುಟುಂಬಸ್ಥರು,ಬಂಧುಮಿತ್ರರು,ಹಿತೈಷಿಗಳು ಎಲ್ಲರೂ ಉಪಸ್ಥಿತರಿದ್ದು ಶುಭ ಹಾರೈಸಿ,ಆಶೀರ್ವಾದ ಪಡೆದರು.

ಐವತ್ತು ವರ್ಷಗಳ ತುಂಬು ಜೀವನ ನಡೆಸಿ ಐವತ್ತೊಂದಕ್ಕೆ ಪಾದಾರ್ಪಣೆ ಮಾಡಿದ ಹಿರಿಯ ದಂಪತಿಗಳಿಗೆ ಭಗವಂತನು ಇನ್ನೂ ಹೆಚ್ಚಿನ ಆರೋಗ್ಯ ಆಯುಷ್ಯ ನೀಡಿ ಕುಟುಂಬಕ್ಕೆ ಮಾರ್ಗದರ್ಶಕರಾಗಿ ಇರುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.

 

ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *