
ಮಂಗಳೂರು ವಾಮಂಜೂರಿನ ಕೆಲರೈ ಅಂಚೆ ನೇಸರ ಹೌಸ್ ನ ದಿವಂಗತ ಟಿ.ಡಿ.ರಾಜಶೇಖರ್ ಮತ್ತು ಶ್ರೀಮತಿ ರಾಜೇಶ್ವರಿ ರಾಜಶೇಖರ್ ದಂಪತಿಯ ಪುತ್ರ
ಚಿ|| ಅನಿಲ್.
ಮತ್ತು ಕದ್ರಿ ದಿವಂಗತ ಮುರಳೀಧರ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ಮುರಳಿಧರ್ ಭಂಡಾರಿ ದಂಪತಿಯ ಪುತ್ರಿ
ಚಿ||ಸೌ|| ಅಕ್ಷಯ.
ಇವರ ವಿವಾಹ ಮಹೋತ್ಸವವು ನವೆಂಬರ್ 5,2018 ರ ಸೋಮವಾರ ಮಂಗಳೂರು ಬೆಂದೂರ್ ವೆಲ್ ನ ಸೇಂಟ್ ಸೆಬಾಸ್ಟಿನ್ ಹಾಲ್ ನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಈ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಗುರು ಹಿರಿಯರು,ಬಂಧು ವರ್ಗದವರು,ಸ್ನೇಹಿತರು ಮತ್ತು ಆತ್ಮೀಯರು ನೂತನ ವಧುವರರಿಗೆ ಆಶೀರ್ವದಿಸಿ, ಶುಭ ಶುಭ ಹಾರೈಸಿ, ಯಥೋಚಿತ ಸತ್ಕಾರ ಸ್ವೀಕರಿಸಿದರು.




ನೂತನ ವಧು ವರರಾದ ಅನಿಲ್ ಮತ್ತು ಅಕ್ಷಯರಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಿ ಅವರ ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಕೋರುತ್ತದೆ.
— ಭಂಡಾರಿವಾರ್ತೆ.