ಮುಂಬಯಿಯ ಸಾಕಿನಾಕಾದ ಶ್ರೀ ರಮೇಶ್ ಮುಲ್ಕಾರ್ ಮತ್ತು ಶ್ರೀಮತಿ ಪ್ರೇಮಾ ರಮೇಶ್ ಮುಲ್ಕಾರ್ ದಂಪತಿಗಳ ಪುತ್ರ ಶ್ರೀ ಧನು ರಮೇಶ್ ಮುಲ್ಕಾರ್ ಅಕಾಲಿಕ ಮರಣದ ಬಗ್ಗೆ ಫೆಬ್ರವರಿ19 ರಂದು ನಮ್ಮ ಭಂಡಾರಿವಾರ್ತೆಯಲ್ಲಿ ವರದಿ ಪ್ರಕಟವಾಗಿತ್ತು.
ನಮಗೆ ಸಿಕ್ಕಿರುವ ವಿಶ್ವಾಸಾರ್ಹ ಮಾಹಿತಿಯನ್ನು ಆಧರಿಸಿ ವರದಿಯನ್ನು ಪ್ರಕಟಿಸಿದ್ದೇವೆ. ನಮ್ಮ ವರದಿಯಲ್ಲಿ ವ್ಯಕ್ತಿಯು ಮೃತಪಟ್ಟಿರುವುದಕ್ಕೆ ನಮೂದಿಸಿರುವ ಕಾರಣವನ್ನು ತಪ್ಪಾಗಿ ಅರ್ಥೈಸಿಕೊಂಡು ಅಥವಾ ದುರುದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಿ ಪೋಷಕರು ಮತ್ತು ಕುಟುಂಬಿಕರಿಗೆ ಇನ್ನಷ್ಟು ಮುಜುಗರ ಮತ್ತು ನೋವುಂಟುಮಾಡುವಂತೆ ಮಾಡಿರುತ್ತಾರೆ ಎಂಬುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇಂತಹ ತಿರುಚು ಗಾಳಿಸುದ್ದಿಗಳಿಗೆ ಭಂಡಾರಿ ವಾರ್ತೆ ಜವಾಬ್ದಾರಿಯಲ್ಲ .
ದೇಶ ವಿದೇಶದ ಭಂಡಾರಿ ಕುಟುಂಬಗಳಲ್ಲಿ ನಡೆಯುವ ವಿದ್ಯಮಾನಗಳನ್ನು ವಸ್ತುನಿಷ್ಟವಾಗಿ ಜನರಿಗೆ ತಲುಪಿಸುವ ಕೆಲಸವನ್ನು ಭಂಡಾರಿ ವಾರ್ತೆ ಮಾಡುತ್ತಿರುವುದನ್ನು ಸಹಿಸಲಾಗದವರು ಈ ಮುಖಾಂತರ ಗೊಂದಲ ಸೃಷ್ಟಿಸುತ್ತಿರುವುದು ನಮ್ಮ ಅರಿವಿಗೆ ಬಂದಿದೆ .
– ಪ್ರಧಾನ ಸಂಪಾದಕರು, ಭಂಡಾರಿ ವಾರ್ತೆ