January 18, 2025
varamahalakshmi5
       ತುಳುನಾಡುಹೊರತುಪಡಿಸಿ ಉಳಿದೆಡೆಗಳಲ್ಲಿ ಆಷಾಡಮಾಸದಕೊನೆಯದಿನಭೀಮನಅಮವಾಸ್ಯೆ. ಇದುಕಳೆಯುತ್ತಿದ್ದ ಹಾಗೆಶ್ರಾವಣಮಾಸದಪ್ರಾರಂಭ. ಶ್ರಾವಣಮಾಸವೆಂದರೆ ಎಲ್ಲರಲ್ಲೂ ಸಂತಸದನಗುಹೊಮ್ಮುತ್ತದೆ. ಶ್ರಾವಣಮಾಸಬಂತೆಂದರೆ ಸಾಕುಹಬ್ಬಗಳು ಸರತಿಸಾಲಿನಲ್ಲಿ ನಿಲ್ಲುತ್ತದೆ. ನಮಗೇನಿದ್ದರೂ ಇನ್ನುಹಬ್ಬಗಳನ್ನು ಆಚರಿಸುವ ಕೆಲಸವಷ್ಟೇ ಬಾಕಿ. ಶ್ರಾವಣಮಾಸದಪ್ರತಿದಿನ ಕೂಡಅತ್ಯಂತಶ್ರೇಷ್ಠ ದಿನವಾಗಿದ್ದು, ಶ್ರಾವಣಸೋಮವಾರ, ಮಂಗಳಗೌರಿವ್ರತ, ನಾಗರಪಂಚಮಿ, ವರಮಹಾಲಕ್ಷ್ಮಿ ವ್ರತ, ನೂಲಹುಣ್ಣಿಮೆ, ಶ್ರಿಕ್ರಷ್ಣಜನ್ಮಾಷ್ಟಮಿ ,ಗಣೇಶಚತುರ್ಥಿ ಹೀಗೆಹಬ್ಬಗಳಸರಮಾಲೆಯೆ ಇದೆ. ಶ್ರಾವಣದ ಎರಡನೇಶುಕ್ರವಾರದಂದು ಬರುವವರಮಹಾಲಕ್ಷ್ಮಿ ವ್ರತಮಹಿಳೆಯರಿಗೆ ಅತ್ಯಂತಶ್ರೇಷ್ಠವಾದ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ಕುಟುಂಬವು ಸಂಪತ್ತು, ಸಮೃದ್ಧಿಯಿಂದ ಕೂಡಿರಲೆಂದು,  ತಮ್ಮ ಗಂಡನಆಯಸ್ಸು, ಆರೋಗ್ಯಹೆಚ್ಚಲೆಂದು, ಕನ್ಯೆಯರು ಒಳ್ಳೆಯಗಂಡಸಿಗಲೆಂದು ವ್ರತವನ್ನೂ ಆಚರಿಸುತ್ತಾರೆ.
 

ಇತಿಹಾಸದ ಒಂದು ಕಥೆ

          ಮಗಧ ರಾಜ್ಯದ ಒಂದುನಗರದಲ್ಲಿ ಚಾರುಮತಿ ಎಂಬಬ್ರಾಹ್ಮಣ ಮಹಿಳೆತನ್ನಕುಟುಂಬದೊಂದಿಗೆ ವಾಸವಾಗಿದ್ದಳು. ಆಕೆಯಭಕ್ತಿ, ಪರಾಕಾಷ್ಟೆಗೆ ಮೆಚ್ಚಿದೇವಿಮಹಾಲಕ್ಷ್ಮಿಯು ಅವಳಕನಸಿನಲ್ಲಿ ಬಂದುವರಮಹಾಲಕ್ಷ್ಮಿಯ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನಶುಕ್ರವಾರದಂದು ಮಾಡಬೇಕೆಂದೂ, ಇದರಿಂದಇಷ್ಟಾರ್ಥಗಳು ಈಡೇರುವುದೆಂದು ಕನಸಲ್ಲಿ ಸೂಚಿಸಿದರು. ವರಮಹಾಲಕ್ಷ್ಮಿಯು ವಿಷ್ಣುದೇವನ ಪತ್ನಿಯಇನ್ನೊಂದು ರೂಪವಾಗಿದ್ದು ಹಾಗೂಸಂಪತ್ತಿನ ಅಧಿದೇವತೆಯೂ ಆಗಿರುತ್ತಾಳೆ. ಚಾರುಮತಿಯು ತನ್ನಕನಸಿನಬಗ್ಗೆಕುಟುಂಬದವರಲ್ಲಿ ಹೇಳಿದಾಗ ವ್ರತವನ್ನು ಆಚರಿಸುವುದು ಒಳ್ಳೆಯದು ಎಂದುಆಕೆಗೆಪ್ರೊತ್ಸಾಹ ನೀಡಿದರು. ಹೀಗಾಗಿನಗರದಎಲ್ಲಾಮಹಿಳೆಯರು ಒಟ್ಟುಸೇರಿವರಮಹಾಲಕ್ಷ್ಮಿ ವ್ರತವನ್ನು ಶ್ರಧ್ಧೆಭಕ್ತಿಯಿಂದ ಆಚರಿಸಿದರು
 

ಪೂಜೆಯ ವಿಧಾನ

        ಶುಕ್ರವಾರದ ದಿನ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಮನೆಯನ್ನೆಲ್ಲಾ ಶುಚಿಗೊಳಿಸಿ , ಮನೆಯಮುಂದೆರಂಗೋಲಿಹಾಕಿ, ಹಸಿರುತೋರಣಕಟ್ಟಿ, ಹೆಣ್ಣುಮಕ್ಕಳು ಅಭ್ಯಂಜನ ಮುಗಿಸಿಕೊಂಡು, ರೇಷ್ಮೆಯ ಬಟ್ಟೆಧರಿಸಿ, ಪೂಜೆಗೆಬೇಕಾದಎಲ್ಲಾಸಿದ್ದತೆಗಳನ್ನು ಮಾಡಿಕೊಳ್ಳುತ್ತಾರೆ. ಮೊದಲಿಗೆ ಕಳಶಸ್ಥಾಪನೆ, ಒಂದುಕಂಚಿನಅಥವಾಬೆಳ್ಳಿಚೊಂಬುತೆಗೆದುಕೊಂಡು, ಅದಕ್ಕೆಶ್ರೀಗಂಧವನ್ನು ಲೇಪನಮಾಡಿಕಳಶದಚೊಂಬಿಗೆ ಅಕ್ಕಿಅಥವಾನೀರುಹಾಗೂವೀಳ್ಯದೆಲೆ, ಅಡಿಕೆ, ನಾಣ್ಯಗಳನ್ನು ಹಾಕಿತುಂಬಿಸುತ್ತಾರೆ. ರೀತಿಚೊಂಬಿನಲ್ಲಿ ತುಂಬುವಸಂಪ್ರದಾಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಕೆಲವುಕಡೆಚೊಂಬಿನಸುತ್ತಒಂದುಬಟ್ಟೆಯನ್ನು ಕಟ್ಟಿ, ಚೊಂಬಿನಬಾಯಿಯಲ್ಲಿ ಮಾವಿನಎಲೆಯನ್ನಿಟ್ಟು ನಿಲ್ಲಿಸಿ, ಒಂದುತೆಂಗಿನಕಾಯಿಗೆಅರಿಶಿನವನ್ನು ಬಳಿದು,ತೆಂಗಿನಕಾಯಿಯಜುಟ್ಟುಮೇಲೆಬರುವಹಾಗೆಕೂರಿಸುತ್ತಾರೆ. ತೆಂಗಿನಕಾಯಿಗೆಲಕ್ಷ್ಮೀ ದೇವಿಯಮುಖವಾಡವನ್ನು ಕಟ್ಟುತ್ತಾರೆ ಅಥವಾಅರಿಶಿನದಲ್ಲಿ ಲಕ್ಷ್ಮಿ ದೇವಿಯಚಿತ್ರವನ್ನು ಬಿಡಿಸುತ್ತಾರೆ. ರೀತಿಮಾಡುವುದರಿಂದ ಕಳಶವುಲಕ್ಷ್ಮಿ ದೇವಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಎಂಬನಂಬಿಕೆಇದೆ‌. ಹೀಗೆಆಭರಣಗಳಿಂದ ಭೂಷಿತಳಾದ ಲಕ್ಷ್ಮಿ ದೇವಿಯನ್ನು ಸುಮಧುರಸುವಾಸನೆಯುಳ್ಳ ಮಲ್ಲಿಗೆ, ಸಂಪಿಗೆ, ಸೇವಂತಿಗೆ ಹೂವುಗಳಿಂದ ಅಲಂಕರಿಸಲಾಗುತ್ತದೆ. ಬಳಿಕಅರಿಶಿನಕುಂಕುಮಶೋಭಿತೆಯಾದ ಲಕ್ಷ್ಮಿಯ ಕಳಶವನ್ನು ಒಂದುಅಕ್ಕಿಯಪೀಠದಲ್ಲಿ ಸ್ಥಾಪಿಸಿ. ಬಳಿಕವಿವಿಧರೀತಿಯಸಿಹಿತಿಂಡಿಗಳು, ಹಣ್ಣು, ಕಾಯಿ,ಹಾಲುಸಕ್ಕರೆಗಳನ್ನು ನೈವೇದ್ಯಕ್ಕೆ ಇಟ್ಟುಪೂಜೆಆರಂಭಿಸುತ್ತಾರೆ. ಮಹಾಲಕ್ಷ್ಮಿಯ ಶ್ಲೋಕಗಳನ್ನು ಹೇಳುತ್ತಾ ,ಲಕ್ಷ್ಮಿ ಸಹಸ್ರನಾಮಗಳನ್ನು ಜಪಿಸುತ್ತಾ, ಕಷ್ಟಗಳನ್ನು ದೂರಮಾಡಿಮನೆಯಲ್ಲಿ ಸುಖಶಾಂತಿನೆಲೆಸಿ, ಸಮೃಧ್ದಿ, ಸಂಪತ್ತು ಹೆಚ್ಚಾಗಲೆಂದು ಬೇಡಿಕೊಳ್ಳುತ್ತಾರೆ
            “ಮಂಗಳಾರತಿಯ ತಂದು ಬೆಳಗಿರೆ ಅಂಬುಜಾಕ್ಷಿಯ ರಾಣಿಗೆಎಂದುಹಾಡುತ್ತಾ ಕಳಶಕ್ಕೆ ಆರತಿಮಾಡುತ್ತಾರೆ. ಕೆಲವುಕಡೆಪೂಜೆಮಾಡುವಮಹಿಳೆಯರು ತಮ್ಮಕೈ ಮಣಿಕಟ್ಟಿನ ಸುತ್ತಲೂ ಅರಿಶಿಣದಾರವನ್ನು (ಕಂಕಣ) ಕಟ್ಟಿಕೊಳ್ಳುತ್ತಾರೆ. ಕೊನೆಯಲ್ಲಿ ಮನೆಗೆಬಂದಮುತ್ತೈದೆಯರಿಗೆ ಅರಿಶಿಣಕುಂಕುಮಕೊಟ್ಟು, ‘ಬಾಗಣವನ್ನುನೀಡಿಆಶಿರ್ವಾದ ಪಡೆಯುತ್ತಾರೆ. ಎಲ್ಲರೂಒಟ್ಟುಗೂಡಿ ಹಬ್ಬದೂಟವನ್ನು ಮಾಡಿಸಂಭ್ರಮಿಸುತ್ತಾರೆ.

: ಪ್ರತಿಭಾ ಭಂಡಾರಿ, ಹರಿಹರಪುರ

  

0 thoughts on “ವರಮಹಾಲಕ್ಷ್ಮೀ ವ್ರತಾಚರಣೆ

  1. ವರಮಹಾಲಕ್ಷ್ಮಿ ಪೂಜೆಯ ಮಹತ್ತ್ವ ಮತ್ತು ವಿಧಾನವನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ವಿವರಿಸಿದ್ದೀರಿ. ಧನ್ಯವಾದಗಳು.

Leave a Reply

Your email address will not be published. Required fields are marked *