
ವೇಣೂರಿನ ಕರಿಮನೇಲ್ ನಲ್ಲಿ ಶ್ರೀ ಸುರೇಶ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಸುಕನ್ಯಾ ಸುರೇಶ್ ಭಂಡಾರಿ ಯವರ ಸೀಮಂತ ಕಾರ್ಯಕ್ರಮವನ್ನು ಆಗಸ್ಟ್ 29 ರ ಬುಧವಾರ ಸಡಗರ ಸಂಭ್ರಮದಿಂದ ನೆರವೇರಿಸಲಾಯಿತು.
ಪೆರಾಡಿಯ ದಿವಂಗತ ಧೋಗ ಭಂಡಾರಿ ಮತ್ತು ದಿವಂಗತ ನೇಮಕ್ಕ ಭಂಡಾರಿ ದಂಪತಿಯ ಪುತ್ರ ಶ್ರೀ ಸುರೇಶ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಸುಕನ್ಯಾ ಸುರೇಶ್ ಭಂಡಾರಿ ಕಣಿಯೂರು ಪುಂಚತ್ತಾರು ಶ್ರೀ ಕೃಷ್ಣಪ್ಪ ಭಂಡಾರಿ ಮತ್ತು ಶ್ರೀಮತಿ ಭವಾನಿ ಕೃಷ್ಣಪ್ಪ ಭಂಡಾರಿ ದಂಪತಿಯ ಮಗಳು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಟುಂಬದ ಹಿರಿಯರು,ಬಂಧು ಬಾಂಧವರು,ಹಿತೈಷಿಗಳು ತುಂಬು ಗರ್ಭಿಣಿಗೆ ಆರತಿ ಬೆಳಗಿ,ಮಂತ್ರಾಕ್ಷತೆ ಪ್ರೋಕ್ಷಿಸಿ ಶುಭ ಹಾರೈಸಿದರು.



ಶ್ರೀ ಸುರೇಶ್ ಭಂಡಾರಿ ಮತ್ತು ಶ್ರೀಮತಿ ಸುಕನ್ಯಾ ಸುರೇಶ್ ಭಂಡಾರಿ ದಂಪತಿಗೆ ಶ್ರೀ ದೇವರು ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
ವರದಿ : ಶಾಂತಲಾ ಹರೀಶ್ ಭಂಡಾರಿ.ವಿಟ್ಲ.