ವಿಧಿಯಾಟ!
ರಂಗು ರಂಗಿನ ಕನಸುಗಳನ್ನು
ಕಾಣುತ್ತಿದ್ದ ಮನಸ್ಸು ಅರಿವಿಲ್ಲದೆ
ಚಿರ ನಿದ್ರೆಗೆ ಜಾರಿದೆ….
ಭವಿಷ್ಯದಲ್ಲಿ ಸಾಧನೆಗೈಯಬೇಕಾದ
ಅಮಾಯಕ ಜೀವವೊಂದು
ಮೋಸದ ಜಾಲಕ್ಕೆ ಬಲಿಯಾಗಿದೆ…..
ಕರುಳಬಳ್ಳಿಗಾಗಿ ಪರಿತಪಿಸುತ್ತಿರುವ
ಮಾತೃ ಹೃದಯದ ಆಕ್ರಂದನ
ಮುಗಿಲು ಮುಟ್ಟಿದೆ…..
ಕಳೆದುಕೊಂಡ ಕುವರನ
ನೆನಪು ಕ್ಷಣಕ್ಕೊಮ್ಮೆ
ಮಸ್ತಕದಿ ಹಾದು ಹೋಗಿ
ಕಣ್ಣಿಗೆ ಕಟ್ಟುವಂತಿದೆ…..
ನೋವಿನ ಹನಿಗಳೆಲ್ಲ
ನಯನದಲ್ಲಿ ಮಡುಗಟ್ಟಿ
ಒತ್ತಾಯದ ಮಂದಹಾಸ
ಮೊಗದಲ್ಲಿ ತಂದುಕೊಳ್ಳಬೇಕಿದೆ….
ಬ್ರಹ್ಮ ನ ಬರಹವ ಯಾರಿಂದಲೂ
ಅಳಿಸಲಾಗದು ಎಂಬ ಕಟು ಸತ್ಯವ ಅರಿತುಕೊಳ್ಳಬೇಕಿದೆ….
✍ ಸುಪ್ರೀತ ಭಂಡಾರಿ ಸೂರಿಂಜೆ
ನಿಮ್ಮ ಮಾತೃ ಹೃದಯಿ
ವಿಧಿಯಾಟ ಕವಿತೆ ಸೊಗಸಾಗಿದೆ. 💐💐💐
ಧನ್ಯವಾದಗಳು ಸರ್ ನಿಮ್ಮ ಅಭಿಮಾನಕ್ಕೆ 😊
ತುಂಬಾ ಚನ್ನಾಗಿದೆ ಮೇಡಂ ಕವಿತೆ