November 25, 2024
vishukumar

ಉಡುಪಿಯ ಕುಂಜಿಬೆಟ್ಟು ನಿವಾಸಿ ಶ್ರೀ ವಿಶುಕುಮಾರ್ ಮತ್ತು ಶ್ರೀಮತಿ ಮೀರಾ ವಿಶುಕುಮಾರ್ ದಂಪತಿಗಳು ಡಿಸೆಂಬರ್ 26 ನೇ ಮಂಗಳವಾರ, ಕುಂಜಿಬೆಟ್ಟು ಕಟ್ಟೆ ಆಚಾರ್ಯ ರಸ್ತೆಯಲ್ಲಿರುವ ಸ್ವಗೃಹ “ಶ್ರೀದೇವಿ ನಿಲಯ” ದಲ್ಲಿ ತಮ್ಮ ಮದುವೆಯ ಹದಿನಾಲ್ಕನೆಯ ವರ್ಷದ ವಾರ್ಷಿಕೋತ್ಸವವನ್ನು ಬಂಧು ಬಾಂಧವರು, ಸ್ನೇಹಿತರು ಮತ್ತು ಹಿತೈಷಿಗಳೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಈ ಶುಭ ಸಂದರ್ಭದಲ್ಲಿ ವಿಶುಕುಮಾರ್ ಸಹೋದರಿಯರಾದಶ್ರೀಮತಿ ವಾಣಿ ಚಂದ್ರಶೇಖರ್, ಶಿವಮೊಗ್ಗ. ಶ್ರೀಮತಿ ಆಶಾ ಜ್ಞಾನೇಶ್, ಬೆಂಗಳೂರು. ಶ್ರೀಮತಿ ಉಷಾ ಸುರೇಶ್, ಬನ್ನಂಜೆ,ಉಡುಪಿ ಮತ್ತು ಅವರ ಕುಟುಂಬಸ್ಥರು ಶುಭ ಹಾರೈಸಿದರು. 

 

ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ,ಐಶ್ವರ್ಯ, ನೆಮ್ಮದಿ ನೀಡಿ ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

— ಭಂಡಾರಿವಾರ್ತೆ.

Leave a Reply

Your email address will not be published. Required fields are marked *