



ಫೆಬ್ರವರಿ 10 ರ ಶನಿವಾರ ಮೂಡಿಗೆರೆ ತಾಲೂಕಿನ ಗಬ್ಬಗಲ್ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಧರ್ಮಸ್ಥಳ ಸ್ವಸಹಾಯ ಸಂಘ ಮತ್ತು VMPM Trust (R) ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ಸ್ವದೇಶಿ ಆಂದೋಲನ ದ ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಭಂಡಾರಿಯವರು ಮಾತನಾಡಿ “ಸ್ವದೇಶಿ ವಸ್ತುಗಳನ್ನು ಬಳಸುವುದರಿಂದ ನಮ್ಮ ಬೆವರಿನ ದುಡಿಮೆ ವಿದೇಶದ ಪಾಲಾಗುವುದು ತಪ್ಪುತ್ತದೆ. ಸ್ವದೇಶಿ ವಸ್ತುಗಳನ್ನು ಬಳಸಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸದೃಡಗೊಳಿಸಬಹುದು.” ಎಂದು ತಿಳಿಸಿಕೊಟ್ಟರು.
ಸಂಸ್ಥೆಯ ಕಾರ್ಯದರ್ಶಿಯಾಗಿರುವ ಅಡ್ವೊಕೇಟ್ ಶ್ರೀಮತಿ ಭಾಗ್ಯ ನಾರಾಯಣ ಭಂಡಾರಿಯವರು ಮಾತನಾಡಿ ಮಕ್ಕಳ ರಕ್ಷಣೆ ಮತ್ತು ನೈತಿಕ ಶಿಕ್ಷಣದ ಬಗ್ಗೆ ಪೋಷಕರಿಗೆ ಮತ್ತು ಮಕ್ಕಳಿಗೆ ಅರಿವಿರುವುದು ಅವಶ್ಯಕ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ VMPM Trust (R) ವತಿಯಿಂದ ಮಕ್ಕಳಿಗೆ ನೀಡಲಾದ ನೋಟ್ ಪುಸ್ತಕಗಳನ್ನು ಮತ್ತು ಲೇಖನ ಸಾಮಗ್ರಿಗಳನ್ನು ಸಂಸ್ಥೆಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಭಾಗ್ಯ ನಾರಾಯಣ ಭಂಡಾರಿಯವರು ವಿತರಿಸಿದರು.
ತಮ್ಮ ಹೆತ್ತವರ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಭಾಗ್ಯ ನಾರಾಯಣ ಭಂಡಾರಿ ದಂಪತಿಗಳಿಗೆ ಸಮಸ್ತ ಭಂಡಾರಿ ಬಂಧುಗಳ ಪರವಾಗಿ ಅಭಿವಂದನೆಗಳನ್ನು ತಿಳಿಸುತ್ತ,ಸೇವಾ ಮನೋಭಾವದಿಂದ ದುಡಿಯುತ್ತಿರುವ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಲಿ,ಸಮಾಜಮುಖಿ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇನ್ನೂ ಹೆಚ್ಚಿನ ಶಕ್ತಿ ಚೈತನ್ಯ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತದೆ.