
ವರ್ಕಾಡಿ ಚಾವಡಿಬೈಲ್ ದಿವಂಗತ ಬಾಬು ಭಂಡಾರಿಯವರ ಧರ್ಮಪತ್ನಿ ನಾಗಮ್ಮ ಬಾಬು ಭಂಡಾರಿಯವರು ಫೆಬ್ರವರಿ 18 ರ ಭಾನುವಾರ ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ಕೊನೆಯುಸಿರೆಳೆದಿದ್ದಾರೆ.ಅವರಿಗೆ 95 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಶ್ರೀ ಧರ್ಮರಾಜ್ ಭಂಡಾರಿ, ರಾಜೇಶ್ವರಿ ಆನಂದ್ ಭಂಡಾರಿ,ಆತೂರು ರಾಮಕುಂಜ, ಸುಮತಿ ಆನಂದ್ ಭಂಡಾರಿ,ಪುತ್ತೂರು, ಗಾಯತ್ರಿ ಶೇಖರ್ ಭಂಡಾರಿ, ಉಳ್ಳಾಲಬೈಲು ಮತ್ತು ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಪೆಬ್ರವರಿ 19 ರ ಬೆಳಿಗ್ಗೆ 10:30 ಕ್ಕೆ ಚಾವಡಿಬೈಲ್ ಮನೆಯಲ್ಲಿ ಜರುಗಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ನಾಗಮ್ಮಬಾಬು ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಮತ್ತು ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.
— ಭಂಡಾರಿವಾರ್ತೆ