ಫ್ಯಾಟಿಲಿವರ್ ಸಮಸ್ಯೆ ಸಂಪೂರ್ಣವಾಗಿ ಹೋಗಲಾಡಿಸಬೇಕೆ? ಹೀಗೆ ಮಾಡಿ
ಫ್ಯಾಟಿ ಲಿವರ್ ಸೈಲೆಂಟ್ ಕಿಲ್ಲರ್, ಇದು ನಿಧಾನಕ್ಕೆ ನಮ್ಮ ದೇಹವನ್ನು ಹಾಳು ಮಾಡುತ್ತದೆ. ಮೊದ-ಮೊದಲಿಗೆ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗಿದ್ದೇ ಗೊತ್ತಾಗುವುದಿಲ್ಲ, ಆದ್ದರಿಂದ ಇದು ತುಂಬಾನೇ ಅಪಾಯಕಾರಿಯಾಗಿದೆ.
ಫ್ಯಾಟಿ ಲಿವರ್: ಲಿವರ್‌ನಲ್ಲಿ ಕೊಬ್ಬಿನಂಶ ಹೆಚ್ಚು ಸಂಗ್ರಹವಾದರೆ ಇದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುವುದು. ಇದರಿಂದ ಉರಿಯೂತ, ಲಿವರ್‌ಗೆ ಹಾನಿ ಕೂಡ ಉಂಟಾಗುವುದು. ಫ್ಯಾಟಿ ಲಿವರ್ ಉಂಟಾದರೆ ರಿವರ್ಸ್ ಮಾಡಬಹುದೇ? ಆದರೆ ಲಿವರ್ ಗಾತ್ರವನ್ನು ಸಹಜ ಸ್ಥಿತಿಗೆ ತರಬಹುದೇ? ಗುಡ್ ನ್ಯೂಸ್ ಅಂದರೆ ಫ್ಯಾಟಿ ಲಿವರ್ ಸಮಸ್ಯೆಯಿಂದ ಲಿವರ್ ಆರೋಗ್ಯ ಮರಳಿ ಪಡೆಯಬಹುದು
ಫ್ಯಾಟಿ ಲಿವರ್ ರಿವರ್ಸ್ ಮಾಡುವುದು ಹೇಗೆ, ಅದಕ್ಕೆ ನೀವೇನು ಮಾಡಬೇಕು ಎಂದು ನೋಡೋಣ ಬನ್ನಿ:
ಮೈ ತೂಕ ಕಡಿಮೆ ಮಾಡಬೇಕು
ನೀವು ಮೈ ತೂಕ ಕಡಿಮೆ ಮಾಡಿಕೊಂಡರೆ ಫ್ಯಾಟಿ ಲಿವರ್ ಕಡಿಮೆ ಮಾಡಬಹುದು ಎಂಬುವುದು ಗೊತ್ತೇ? ನಿಮ್ಮ ಮೈ ತೂಕ ನಿಯಂತ್ರಣದಲ್ಲಿಟ್ಟರೆ ಫ್ಯಾಟಿ ಲಿವರ್ ಸಮಸ್ಯೆ ತಡೆಗಟ್ಟಬಹುದು.
2. ಮದ್ಯಪಾನ ನಿಯಂತ್ರಿಸಿ
ಮದ್ಯಪಾನಿಗಳಲ್ಲಿ ಈ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಆದ್ದರಿಂದ ಮದ್ಯಪಾನದಿಂದಾಗಿ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗಿದ್ದರೆ ಮದ್ಯಪಾನ ನಿಯಂತ್ರಣದಲ್ಲಿಡಿ.
3. ಆರೋಗ್ಯಕರ ಆಹಾರ ಸೇವಿಸಿ
ಲಿವರ್‌ನ ಆರೋಗ್ಯಕ್ಕೆ ಬಂದಾಗ ನಿಮ್ಮ ಆಹಾರಕ್ರಮ ಪ್ರಮುಖ ಪಾತ್ರವಹಿಸುತ್ತದೆ. ಬಹುತೇಕ ಹಣ್ಣುಗಳು ಹಾಗೂ ತರಕಾರಿಯಲ್ಲಿ ನಾರಿನಂಶವಿರುತ್ತದೆ. ಆರೋಗ್ಯಕರ ಕೊಬ್ಬಿನಂಶದ ಆಹಾರ ಸೇವಿಸಿ, ಕಾರ್ಬ್ಸ್ ಹಾಗೂ ನಾರಿನ ಪದಾರ್ಥವಿರುವ ಆಹಾರ ಸೇವಿಸಿ. ಮೀನು, ಅಗಸೆಬೀಜ, ಆಲೀವ್, ನಟ್ಸ್, ಕೊಬ್ಬರಿ, ಬೆಣ್ಣೆಹಣ್ಣು ಈ ಬಗೆಯ ಆಹಾರ ಸೇವಿಸಿ.
4. ಅಧಿಕ ಕ್ಯಾಲೋರಿ ಇರುವ ಆಹಾರ ತಿನ್ನಬೇಡಿ
ಫ್ಯಾಟಿ ಲಿವರ್ ಸಮಸ್ಯೆ ಇರುವವರು ಅಧಿಕ ಕ್ಯಾಲೋರಿಯಂಶವಿರುವ ಆಹಾರ ಸೇವಿಸಬೇಡಿ. ಅಧಿಕ ಕೊಬ್ಬಿನಂಶವಿರುವ ಆಹಾರ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚು ಮಾಡುತ್ತದೆ, ಇಂಥ ಆಹಾರಗಳನ್ನು ತಿನ್ನುವುದರಿಂದ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚುವುದು. ಅಧಿಕ ಕೊಬ್ಬಿನಂಶ ಇರುವ ಮಾಂಸಾಹಾರ ಸೇವಿಸಬೇಡಿ.
ವ್ಯಾಯಾಮ ಮಾಡಿ
ಫ್ಯಾಟಿ ಲಿವರ್ ಸಮಸ್ಯೆ ಇರುವವರು ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ವಾರದಲ್ಲಿ 150 ನಿಮಿಷದವರೆಗೆ ವ್ಯಾಯಾಮ ಮಾಡಬೇಕು ಎಂದು ಸಿಡಿಸಿ ಹೇಳಿದೆ. ವಾಕ್ ಮಾಡುವುದು, ಜಿಮ್‌ನಲ್ಲಿ ವರ್ಕ್ ಮಾಡುವುದು, ಯೋಗಾಭ್ಯಾಸ ಇವೆಲ್ಲಾ ಒಳ್ಳೆಯದು.
ಫ್ಯಾಟಿ ಲಿವರ್ ಸಮಸ್ಯೆ ಇರುವವರು ಯಾವ ಆಹಾರ ಸೇವಿಸಬೇಕು?
* ಕಾಫಿ ಕುಡಿಯುವುದು ಒಳ್ಳೆಯದು: ದಿನಾ ಕಾಫಿ ಕುಡಿಯುವುದರಿಂದ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು. ಬೆಲ್ಲ ಕಾಫಿ ತುಂಬಾ ಒಳ್ಳೆಯದು
* ಹಸಿರು ಸೊಪ್ಪು-ತರಕಾರಿ ಒಳ್ಳೆಯದು: ಫ್ಯಾಟಿ ಲಿವರ್ ಸಮಸ್ಯೆ ಇರುವವರು ಸೊಪ್ಪನ್ನು ಹೆಚ್ಚಾಗಿ ಬಳಸಬೇಕು.
* ಬೀನ್ಸ್ ಹಾಗೂ ಸೋಯಾ ಕೂಡ ಒಳ್ಳೆಯದು: ಬೀನ್ಸ್ ಹಾಗೂ ಸೋಯಾ ಫ್ಯಾಟಿ ಲಿವರ್ ಸಮಸ್ಯೆ ಕಡಿಮೆ ಮಾಡುತ್ತದೆ.
* ಮೀನು: ಮೀನಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ಲಿವರ್‌ನ ಉರಿಯೂತ ಕಡಿಮೆ ಮಾಡಲು ಸಹಕಾರಿ
* ಓಟ್‌ಮೀಲ್ಸ್: ಓಟ್‌ಮೀಲ್ಸ್ ತಿಂದರೆ ಅನೇಕ ಪ್ರಯೋಜನಗಳಿವೆ, ನೀವು ಲಿವರ್ ಆರೋಗ್ಯ ಕಾಪಾಡುವುದರ ಜೊತೆಗೆ ಮಧುಮೇಹವನ್ನು ಕೂಡ ನಿಯಂತ್ರಣದಲ್ಲಿಡಬಹುದು.
* ನಟ್ಸ್ : ದಿನಾ ಸ್ವಲ್ಪ ನಟ್ಸ್ ತಿನ್ನಿ
* ಅರಿಶಿಣ: ದಿನಾಒಂದು ಚಿಕ್ಕ ತುಂಡು ಅರಿಶಿಣ ತಿನ್ನುವುದು ಒಳ್ಳೆಯದು
* ಸೂರ್ಯಕಾಂತಿ ಬೀಜ: ಇದರಲ್ಲಿ ವಿಟಮಿನ್ ಇ ಇರುವುದರಿಂದ ಇದರ ಬೀಜ ಫ್ಯಾಟಿ ಲಿವರ್ ಸಮಸ್ಯೆ ಹೋಗಲಾಡಿಸಲು ಸಹಕಾರಿ.
* ಬೆಳ್ಳುಳ್ಳಿ: ಬೆಳ್ಳುಳ್ಳಿಯ ಪೌಡರ್ ಸಪ್ಲಿಮೆಂಟ್ ದೊರೆಯುತ್ತದೆ, ಇದು ಫ್ಯಾಟಿ ಲಿವರ್ ಸಮಸ್ಯೆ ರಿವರ್ಸ್ ಮಾಡಲು ಸಹಕಾರಿ
* ಹಣ್ಣುಗಳು: ಬೆಣ್ಣೆಹಣ್ಣು ಅಥವಾ ಅವೊಕಾಡೊ ತಿನ್ನಿ.
ಯಾವ ಬಗೆಯ ಆಹಾರ ಬಳಸಬಾರದು?
ಮದ್ಯಪಾನ: ಮದ್ಯಪಾನಕ್ಕೆ ಕಡಿವಾಣ ಹಾಕದಿದ್ದರೆ ಆರೋಗ್ಯ ಸ್ಥಿತಿ ಗಂಭೀರವಾಗುವುದು
* ಸಕ್ಕರೆ: ಸಕ್ಕರೆ ಮುಟ್ಟಲೇಬೇಡಿ.
* ಸಿಹಿ ತಿಂಡಿಗಳು
* ಉಪ್ಪಿನಂಶದ ಆಹಾರಗಳು: ಚಿಪ್ಸ್, ಪಾಪ್‌ಕಾರ್ನ್, ಉಪ್ಪಿನಕಾಯಿ ಇವುಗಳನ್ನು ಸೇವಿಸಬೇಡಿ
* ವೈಟ್ ಬ್ರೆಡ್, ಪಾಸ್ತಾ: ಈ ಬಗೆಯ ಆಹಾರಗಳಿಂದ ದೂರವಿರಿ
* ಕೆಂಪು ಮಾಂಸ
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: BS