

ಕೊಪ್ಪ ತಾಲೂಕಿನ ಭಂಡಿಗಡಿಯ ದಿ.ನರಸಿಂಹ ಭಂಡಾರಿ ಮತ್ತು ಕಮಲ ನರಸಿಂಹ ಭಂಡಾರಿಯವರ ಮಗನಾದ ಶ್ರೀ ಶಿವರಾಮ ಭಂಡಾರಿ ಮತ್ತು ಉಡುಪಿ ತಾಲೂಕು ಕೆಂಜೂರಿನ ಉಡುಪಿ ದಿ.ವೆಂಕಪ್ಪ ಭಂಡಾರಿ ಮತ್ತು ಶಾರದ ವೆಂಕಪ್ಪ ಭಂಡಾರಿಯವರ ಮಗಳಾದ ಶ್ರೀಮತಿ ಜ್ಯೋತಿ ಶಿವರಾಮ ಭಂಡಾರಿ ದಂಪತಿಗಳು ಮೇ 20 ರ ಭಾನುವಾರ ತಮ್ಮ ಮದುವೆಯ 24ನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.
ಈ ಶುಭ ಸಂದರ್ಭದಲ್ಲಿ ಅವರಿಗೆ ಶಿವರಾಮ ಭಂಡಾರಿಯವರ ತಾಯಿ ಕಮಲ ನರಸಿಂಹ ಭಂಡಾರಿ ಮತ್ತು ಅವರ ಕುಟುಂಬದವರು ಹಾಗೂ ಜ್ಯೋತಿಯವರ ತಾಯಿ ಶಾರದ ವೆಂಕಪ್ಪ ಭಂಡಾರಿ,ಅಣ್ಣ-ಅತ್ತಿಗೆ, ಶ್ರೀ ಕರುಣಾಕರ ಭಂಡಾರಿ ಮತ್ತು ಶ್ರೀಮತಿ ಶೋಭಾ ಕರುಣಾಕರ ಭಂಡಾರಿ, ಅಕ್ಕ-ಭಾವಂದಿರಾದ ಶ್ರೀ ಶೇಖರ ಭಂಡಾರಿ ಮತ್ತು ಶ್ರೀಮತಿ ಮಮತಾ ಶೇಖರ್ ಭಂಡಾರಿ, ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಜಯಂತಿ ಕೃಷ್ಣ ಭಂಡಾರಿ, ಶ್ರೀ ಕೇಶವ ಭಂಡಾರಿ ಮತ್ತು ಶ್ರೀಮತಿ ವಿನೋದ ಕೇಶವ ಭಂಡಾರಿ,ಶ್ರೀ ಮುರಳೀಧರ ಭಂಡಾರಿ ಮತ್ತು ಶ್ರೀಮತಿ ಶೋಭಾ ಮುರಳೀಧರ ಭಂಡಾರಿ,ತಂಗಿ ಶ್ರೀಮತಿ ಮಾಲತಿ ರಮೇಶ್ ಭಂಡಾರಿ ಮತ್ತು ಶ್ರೀ ರಮೇಶ್ ಭಂಡಾರಿ ಹಾಗೂ ಅಪಾರ ಬಂಧುಗಳು, ಹಿತೈಷಿಗಳು ಹಾಗೂ ಚನ್ನಪಟ್ಟಣದಲ್ಲಿರುವ ಅವರ ಸ್ನೇಹಿತರು ಶುಭ ಹಾರೈಸಿದರು.
ದಾಂಪತ್ಯ ಜೀವನದ ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನು ದಯಪಾಲಿಸಿ,ಸುಖ ಶಾಂತಿ ನೆಮ್ಮದಿಯುತ ಕ್ಷಣಗಳನ್ನು ಕರುಣಿಸಿ ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ:ಶ್ರೀಮತಿ ಮಾಲತಿ ರಮೇಶ್ ಭಂಡಾರಿ.