
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಕುತ್ರಬೆಟ್ಟು ಶ್ರೀ ಅನಂತರಾಮ ಬಂಗಾಡಿ ಮತ್ತು ಶ್ರೀಮತಿ ಸುಮತಿ ಅನಂತರಾಮ ಬಂಗಾಡಿ ದಂಪತಿಯು ಮೇ 4 ರ ಶುಕ್ರವಾರ ತಮ್ಮ ವೈವಾಹಿಕ ಜೀವನದ ಮೂವತ್ತೈದನೇ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬಸ್ಥರೊಂದಿಗೆ ಆಚರಿಸಿಕೊಂಡಿದ್ದಾರೆ.
ಶ್ರೀ ಅನಂತರಾಮ ಬಂಗಾಡಿಯವರು ಬರಹಗಾರರಾಗಿ, ಜ್ಯೋತಿಷ್ಯಿಯಾಗಿ, ದೈವಾರಾಧಕರಾಗಿ, ಯಕ್ಷಗಾನ ಪ್ರಸಂಗಕತೃಗಳಾಗಿ ಸಮಾಜಕ್ಕೆ ಚಿರಪರಿಚಿತರಾಗಿದ್ದಾರೆ. ಮೇ ನಾಲ್ಕಕ್ಕೆ ಅವರು ಮದುವೆಯಾಗಿ ಸಂತೃಪ್ತ ಮೂವತ್ತೈದು ವಸಂತಗಳನ್ನು ಪೂರೈಸಿ ಮೂವತ್ತಾರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಗಳಿಗೆಯಲ್ಲಿ ಅವರಿಗೆ ಅವರ ಮಗಳು ಶ್ರೀಮತಿ ಸಂಧ್ಯಾ ಕೇಶವ ಭಂಡಾರಿ, ಅಳಿಯ ಶ್ರೀ ಕೇಶವ ಭಂಡಾರಿ.ಹಿರೇಬೆಟ್ಟು, ಮಗ ಶ್ರೀ ಸಂದೇಶ್ ಕುಮಾರ್ ಬಂಗಾಡಿ, ಸೊಸೆ ಶ್ರೀಮತಿ ಶುಭ ಸಂದೇಶ್ ಕುಮಾರ್ ಬಂಗಾಡಿ ಮತ್ತು ಕುಟುಂಬಸ್ಥರು ಶುಭ ಕೋರುತ್ತಿದ್ದಾರೆ.
ವೈವಾಹಿಕ ಜೀವನದ ಮೂವತ್ತೈದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಹಿರಿಯರಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಹರಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
“ಭಂಡಾರಿವಾರ್ತೆ.”