
ಮಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ನಾಗೇಶ್ ಭಂಡಾರಿ ಮಣ್ಣಗುಡ್ಡೆ ಮತ್ತು ಶ್ರೀಮತಿ ವರಲಕ್ಷ್ಮಿ ನಾಗೇಶ್ ಭಂಡಾರಿ ದಂಪತಿಯು ಸೆಪ್ಟೆಂಬರ್ 7, 2019 ರ ಶನಿವಾರ ತಮ್ಮ ವೈವಾಹಿಕ ಜೀವನದ ಇಪ್ಪತ್ತೈದನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಶ್ರೀ ನಾಗೇಶ್ ಭಂಡಾರಿಯವರು ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ನಲ್ಲಿ ಸೀನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾಗಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಮಂಗಳೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶನ ಸದಸ್ಯರಾಗಿ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿ ಕೊಂಡಿರುವ ಇವರು ಹಲವಾರು ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಮತಿ ವರಲಕ್ಷ್ಮಿ ನಾಗೇಶ್ ಭಂಡಾರಿಯವರು ಮಂಗಳೂರು ಭಂಡಾರಿ ಸ್ವಯಂ ಸೇವಕ ಸಂಘದ ಅಧ್ಯಕ್ಷೆಯಾಗಿದ್ದರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಪತಿಯಂತೆ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಬೆಳ್ಳಿಹಬ್ಬದ ಸುಸಂದರ್ಭದಲ್ಲಿ ಅವರಿಗೆ ಅವರ ಮಕ್ಕಳಾದ ಕುಮಾರಿ ಎಂ.ಪ್ರಜ್ಞಾ ಭಂಡಾರಿ ಮತ್ತು ಕುಮಾರಿ ಎಂ.ಪೂಜಾ ಭಂಡಾರಿ, ಕುಟುಂಬ ವರ್ಗದವರು, ಸ್ನೇಹಿತರು, ಆತ್ಮೀಯರು ಶುಭ ಕೋರುತ್ತಿದ್ದಾರೆ.

ನಾಗೇಶ್ ಭಂಡಾರಿ ದಂಪತಿಯು ತಮ್ಮ ದಾಂಪತ್ಯ ಜೀವನದ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಈ ಶುಭ ಗಳಿಗೆಯಲ್ಲಿ ಶ್ರೀ ದೇವರು ಅವರಿಗೆ ಆಯುರಾರೋಗ್ಯ,ಐಶ್ವರ್ಯಗಳನ್ನು ನೀಡಿ, ಸುಖ-ಶಾಂತಿ ನೆಮ್ಮದಿಯುತ ಜೀವನವನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ.”