
ಶಿವಮೊಗ್ಗ ಜಿಲ್ಲೆ ಸೊರಬದ ಶ್ರೀ ಪ್ರವೀಣ್ ಭಂಡಾರಿ ಮತ್ತು ಶ್ರೀಮತಿ ಭಾರತಿ ಪ್ರವೀಣ್ ಭಂಡಾರಿ ದಂಪತಿಗಳು ಮೇ 12,2019 ರ ಭಾನುವಾರ ತಮ್ಮ ಮದುವೆಯ ಹದಿಮೂರನೆಯ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಅದೇ ದಿನ ಶ್ರೀ ಪ್ರವೀಣ್ ಭಂಡಾರಿಯವರು ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಳ್ಳುತ್ತಿರುವುದು ವಿಶೇಷ.

ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಲಕ್ಷ್ಮೀ ನಾರಾಯಣ ಭಂಡಾರಿ ದಂಪತಿಗಳ ಪುತ್ರ…
ಶ್ರೀ ಪ್ರವೀಣ್ ಭಂಡಾರಿ
ಮತ್ತು
ಶ್ರೀಮತಿ ಭಾರತಿ ಪ್ರವೀಣ್ ಭಂಡಾರಿ.
ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಶ್ರೀ ಬಾಲಚಂದ್ರ ಭಂಡಾರಿ ಮತ್ತು ಶ್ರೀಮತಿ ನಾಗರತ್ನ ಬಾಲಚಂದ್ರ ಭಂಡಾರಿ ದಂಪತಿಗಳ ಪುತ್ರಿ. ಇವರು ದಾಂಪತ್ಯ ಜೀವನಕ್ಕೆ ಅಡಿಯಿಟ್ಟು ಇಂದಿಗೆ ಹದಿಮೂರು ವರ್ಷಗಳನ್ನು ಪೂರೈಸಿ ಹದಿನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ದೃಷ್ಟಿ ವಿಶೇಷ ಚೇತನರಾದ ಶ್ರೀ ಪ್ರವೀಣ್ ಭಂಡಾರಿಯವರು ಸೊರಬದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಮತ್ತು ಶ್ರೀಮತಿ ಭಾರತಿ ಪ್ರವೀಣ್ ಭಂಡಾರಿಯವರು ಪ್ರಭಾ ಬ್ಯೂಟಿ ಪಾರ್ಲರ್ ಹೆಸರಿನ ಉದ್ದಿಮೆಯನ್ನು ನಡೆಸುತ್ತಿದ್ದಾರೆ.ಇವರಿಗೆ ಅಭಿಲಾಷ್ ಮತ್ತು ಪ್ರಣವ್ ಎಂಬಿಬ್ಬರು ಗಂಡು ಮಕ್ಕಳು.



ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ತಂದೆ, ತಾಯಿ, ಅತ್ತೆ, ಮಾವ, ಅಣ್ಣಂದಿರು, ಸಹೋದರ ಸಹೋದರಿಯರು, ಬಂಧು ಬಳಗದವರು, ಸಹೋದ್ಯೋಗಿಗಳು ಮತ್ತು ಮಕ್ಕಳಾದ ಅಭಿಲಾಷ್ ಮತ್ತು ಪ್ರಣವ್ ಶುಭ ಹಾರೈಸಿದ್ದಾರೆ.


ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಹಾಗೂ ಹುಟ್ಟು ಹಬ್ಬದ ಸಡಗರದಲ್ಲಿರುವ ಶ್ರೀ ಪ್ರವೀಣ್ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”