
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಸುಧಾಕರ ಭಂಡಾರಿ ಮತ್ತು ಗೀತಾ ಸುಧಾಕರ ಭಂಡಾರಿ ದಂಪತಿಯು ಡಿಸೆಂಬರ್ 3,2020 ರ ಗುರುವಾರ ತಮ್ಮ ಮದುವೆಯ ಹದಿನೇಳನೆಯ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಶಿರಾಳಕೊಪ್ಪದ ದಿವಂಗತ ರಾಜು ಭಂಡಾರಿ ಮತ್ತು ಪಾರ್ವತಮ್ಮ ರಾಜು ಭಂಡಾರಿ ದಂಪತಿಯ ದ್ವಿತೀಯ ಪುತ್ರರಾದ ಶ್ರೀ ಸುಧಾಕರ ಭಂಡಾರಿ ಮತ್ತು ಉಡುಪಿಯ ನಿಟ್ಟೂರು, ಕೋಡಂಕೂರು ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಲೀಲಾವತಿ ಕೃಷ್ಣ ಭಂಡಾರಿ ದಂಪತಿಯ ತೃತೀಯ ಪುತ್ರಿ ಶ್ರೀಮತಿ ಗೀತಾ ಸುಧಾಕರ ಭಂಡಾರಿ ದಂಪತಿಯು ಉಡುಪಿಯ ಶ್ರೀ ಲಕ್ಷ್ಮೀ ಸಭಾ ಭವನದಲ್ಲಿ ಡಿಸೆಂಬರ್ 3,2003 ರ ಬುಧವಾರ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ ಹದಿನೇಳು ವರ್ಷ. ವೈಷ್ಣವಿ ಮತ್ತು ಅದಿತಿ ಈ ದಂಪತಿಗಳ ಮುದ್ದಿನ ಮಕ್ಕಳು .

ಸುಧಾಕರ ಭಂಡಾರಿಯವರು ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು,ಇವರು MA in Education ಪದವಿ ಪೂರೈಸಿ ಶಿರಾಳಕೊಪ್ಪದಲ್ಲಿ MICE ಸಹಭಾಗಿತ್ವದಲ್ಲಿ “ಪುಷ್ಪಕ್ ಕಂಪ್ಯೂಟರ್ಸ್” ಹೆಸರಿನ ಸಂಸ್ಥೆಯೊಂದನ್ನು ನಡೆಸುತ್ತಿದ್ದು , ಪ್ರಸ್ತುತ ಬೆಂಗಳೂರಿನಲ್ಲಿ ಅಮೇರಿಕನ್ ಇಂಡಿಯಾ ಫೌಂಡೇಷನ್ ನಲ್ಲಿ “ರೀಜನಲ್ ಕೋಆರ್ಡಿನೇಟರ್” ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅನೇಕ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ.ಹವ್ಯಾಸಿ ಬರಹಗಾರರಾಗಿರುವ ಇವರು ಭಂಡಾರಿವಾರ್ತೆಗಾಗಿ ಹಲವು ಲೇಖನಗಳನ್ನು ಬರೆದಿದ್ದಾರೆ.

ಶ್ರೀಮತಿ ಗೀತಾ ಸುಧಾಕರ ಭಂಡಾರಿಯವರು ಪದವೀಧರರಾಗಿದ್ದು ಶಿರಾಳಕೊಪ್ಪದಲ್ಲಿ “ಪುಷ್ಪಕ್ ಕಂಪ್ಯೂಟರ್ಸ್” ನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ವೋದಯ ಪತ್ತಿನ ಸಹಕಾರ ಸಂಘದ ನಿರ್ದೇಶಕರಲ್ಲೊಬ್ಬರಾಗಿರುವ ಇವರು ಕವಿಯತ್ರಿಯೂ ಹೌದು.ಈಗಾಗಲೇ ಸುಮಾರು ಐದು ನೂರಕ್ಕೂ ಹೆಚ್ಚು ಕವನಗಳನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ.

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ ಅವರ ಪುತ್ರಿಯರು,ಅತ್ತೆ,ಮಾವ,ಸಹೋದರರು, ಸಹೋದರಿಯರು, ಸ್ನೇಹಿತರು, ಸಹೋದ್ಯೋಗಿಗಳು,ಆತ್ಮೀಯರು, ಶುಭ ಹಾರೈಸುತ್ತಿದ್ದಾರೆ.

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಸುಧಾಕರ ಭಂಡಾರಿ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”