ಬಾಳೇಹೊನ್ನೂರಿನ ಶ್ರೀ ಸುನಿಲ್ ರಾಜ್ ಭಂಡಾರಿ ಮತ್ತು ಶ್ರೀಮತಿ ನಯನ ಸುನಿಲ್ ರಾಜ್ ಭಂಡಾರಿ ದಂಪತಿಯು ಅಕ್ಟೋಬರ್ 24, 2018 ರ ಬುಧವಾರ ತಮ್ಮ ವೈವಾಹಿಕ ಜೀವನದ ಐದನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಭಂಡಾರಿ ಸಮಾಜ ಸಂಘ ಬಾಳೇಹೊನ್ನೂರು ಘಟಕದ ಹಾಲಿ ಅಧ್ಯಕ್ಷರಾಗಿರುವ ಶ್ರೀ ಸುನಿಲ್ ರಾಜ್ ಭಂಡಾರಿಯವರದು ಕವಿಮನಸ್ಸಿನ ಸೃಜನಶೀಲ ವ್ಯಕ್ತಿತ್ವ. ನಾಗತೀಹಳ್ಳಿ ಚಂದ್ರಶೇಖರ್ ಸಾರಥ್ಯದ ಟೆಂಟ್ ಸಿನಿಮಾ ತರಬೇತಿ ಸಂಸ್ಥೆಯಲ್ಲಿ ಚಿತ್ರಕಥೆ ರಚನಾ ತರಬೇತಿ ಪಡೆದಿರುವ ಇವರು ಸಾವಿರಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಕಥೆ, ಕಾದಂಬರಿ, ಚಿತ್ರಕಥೆಯನ್ನು ರಚಿಸಿ ಒಂದು ಉತ್ತಮ ಅವಕಾಶಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಭಂಡಾರಿ ಸಮಾಜದ ಕ್ರಿಯಾಶೀಲ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
ಪುತ್ರ ಮಾಸ್ಟರ್ ಸದ್ವಿನ್ ಸೂರ್ಯ ರಾಜ್ ನೊಂದಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸುನಿಲ್ ರಾಜ್ ಮತ್ತು ನಯನ ದಂಪತಿಗೆ ಬಂಧುಮಿತ್ರರು, ಸ್ನೇಹಿತರು, ಆತ್ಮೀಯರು
ದಾಂಪತ್ಯ ಜೀವನದ ಐದು ವಸಂತಗಳನ್ನು ಪೂರೈಸಿ ಆರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಕಚ್ಚೂರು ಶ್ರೀ ನಾಗೇಶ್ವರನು ಸಂಪೂರ್ಣ ಅನುಗ್ರಹವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ : ಗಣೇಶ್ ಭಂಡಾರಿ ಬೇಲೂರು.