January 18, 2025
Lakshman 1
ಮುಂಬಯಿಯ ಚೆಂಬೂರ್ ನಲ್ಲಿ ಶ್ರೀ ಲಕ್ಷ್ಮಣ್ ಭಂಡಾರಿ ಮತ್ತು ಶ್ರೀಮತಿ ಯಶೋಧ ಲಕ್ಷ್ಮಣ್ ಭಂಡಾರಿ ದಂಪತಿಗಳು ಏಪ್ರಿಲ್ 7 ರ ಶನಿವಾರ ತಮ್ಮ ವೈವಾಹಿಕ ಜೀವನದ ಹದಿನೈದನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.
 
ಪಕ್ಷಿಕೆರೆಯ ಶ್ರೀ ಓಬಯ್ಯ ಭಂಡಾರಿ ಮತ್ತು ಶ್ರೀಮತಿ ಕುಸುಮಾ ಓಬಯ್ಯ ಭಂಡಾರಿ ದಂಪತಿಗಳ ಪುತ್ರ ಶ್ರೀ ಲಕ್ಷ್ಮಣ್ ಭಂಡಾರಿಯವರು ಮುಂಬಯಿಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು ಚೆಂಬೂರ್ ನ ಶನಿಮಂದಿರದಲ್ಲಿ ಅರ್ಚಕರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.ಶ್ರೀಮತಿ ಯಶೋಧ ಲಕ್ಷ್ಮಣ್ ಭಂಡಾರಿಯವರು ಪಕ್ಷಿಕೆರೆಯ ದಿವಂಗತ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಆಶಾ ನಾರಾಯಣ ಭಂಡಾರಿ ದಂಪತಿ ಪುತ್ರಿ.
 
ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ ಅವರ ಮಕ್ಕಳಾದ ಮಾಸ್ಟರ್ ಪ್ರಣೀತ್ ಭಂಡಾರಿ, ಮಾಸ್ಟರ್ ವೇದಿತ್ ಭಂಡಾರಿ ಮತ್ತು ಕುಟುಂಬಸ್ಥರು ಹಿತೈಷಿಗಳು ಶುಭ ಹಾರೈಸಿದ್ದಾರೆ.
 
ಈ ಶುಭ ಸಂದರ್ಭದಲ್ಲಿ ಶ್ರೀ ಲಕ್ಷ್ಮಣ್ ಭಂಡಾರಿ ಮತ್ತು ಶ್ರೀಮತಿ ಯಶೋಧ ಲಕ್ಷ್ಮಣ್ ಭಂಡಾರಿ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ನೀಡಿ ಹರಸಿ ಆಶೀರ್ವದಿಸಲಿ ಎಂದು  “ಭಂಡಾರಿವಾರ್ತೆ” ಮನದುಂಬಿ ಹಾರೈಸುತ್ತದೆ.
-ಭಂಡಾರಿವಾರ್ತೆ

Leave a Reply

Your email address will not be published. Required fields are marked *