

ಉಜಿರೆಯ ರಾಧಾಕೃಷ್ಣ ಭಂಡಾರಿ ಮತ್ತು ತಾರಾ ಕೃಷ್ಣ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಇಪ್ಪತ್ತನೇ ವರ್ಷದ ವಾರ್ಷಿಕೋತ್ಸವವನ್ನು ಜೂನ್ 14 ರ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಅವರಿಗೆ ಮಗಳು ತೇಜಸ್ವಿನಿ , ಮಗ ಪವನ್ ರಾಜ್ ಮತ್ತು ಮಿತ್ರರು , ಹಿತೈಷಿಗಳು, ಕುಟುಂಬ ವರ್ಗದವರು ಶುಭ ಕೋರಿದ್ದಾರೆ.
ದಾಂಪತ್ಯ ಜೀವನದ ಹತ್ತೊಂಬತ್ತು ವರ್ಷಗಳನ್ನು ಪೂರೈಸಿ ಇಪ್ಪತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹಾರ್ದಿಕವಾಗಿ ಶುಭ ಹಾರೈಸುತ್ತದೆ.


ವರದಿ : ದಿವ್ಯಾ ಭಂಡಾರಿ ಉಜಿರೆ