

ಉಡುಪಿಯ ಪರ್ಕಳದಲ್ಲಿ ಶ್ರೀ ರಾಘವೇಂದ್ರ ಭಂಡಾರಿ ಮತ್ತು ಶ್ರೀಮತಿ ಅಕ್ಷತಾ ರಾಘವೇಂದ್ರ ಭಂಡಾರಿ ದಂಪತಿಯು ಜೂನ್ 22 ರ ಶುಕ್ರವಾರ ತಮ್ಮ ವೈವಾಹಿಕ ಜೀವನದ ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ರಾಘವೇಂದ್ರರ ತಾಯಿ ಸರೋಜಾ ಶಂಭ ಭಂಡಾರಿ,ಅಕ್ಷತಾರ ತಾಯಿ ಸುಶೀಲಾ ತನಿಯಪ್ಪ ಭಂಡಾರಿ,ಅಕ್ಷತಾರ ಸಹೋದರಿಯರಾದ ಶ್ರೀಮತಿ ಲತಾ ಅನಿಲ್ ಭಂಡಾರಿ.ಮರಸಣಿಗೆ,ಶ್ರೀಮತಿ ಪೂರ್ಣಿಮಾ ನವೀನ್ ಭಂಡಾರಿ.ಬಾಳೆಹೊನ್ನೂರು ಮತ್ತು ಕುಟುಂಬಸ್ಥರು,ಆತ್ಮೀಯರು,ಸಹೋದ್ಯೋಗಿ ಗಳು ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ದಾಂಪತ್ಯ ಜೀವನದ ನಾಲ್ಕು ವಸಂತಗಳನ್ನು ಪೂರೈಸಿ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶ್ರೀ ದೇವರು ದಂಪತಿಗೆ ಸಕಲಷ್ಠೈಶ್ವರ್ಯಗಳನ್ನೂ ದಯಪಾಲಿಸಿ ಆಶೀರ್ವದಿಸಲಿ,ಅವರ ಜೀವನ ಹಾಲು ಜೇನಿನಂತೆ ಸಿಹಿಯಾಗಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
-ಭಂಡಾರಿವಾರ್ತೆ