
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಶ್ರೀ ನಾಗರಾಜ ಭಂಡಾರಿ ಮತ್ತು ಶ್ರೀಮತಿ ರಾಧಿಕಾ ನಾಗರಾಜ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಹದಿನಾರನೆಯ ವರ್ಷದ ವಾರ್ಷಿಕೋತ್ಸವವನ್ನು ಏಪ್ರಿಲ್ 17 ರ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಶಿರಾಳಕೊಪ್ಪದ ಶ್ರೀ ನಾಗು ಭಂಡಾರಿ ಮತ್ತು ಶ್ರೀಮತಿ ಪಾರ್ವತಮ್ಮ ನಾಗು ಭಂಡಾರಿ ದಂಪತಿಯ ಪುತ್ರ ಶ್ರೀ ನಾಗರಾಜ ಭಂಡಾರಿ ಹಾಗೂ ಕುಂದಾಪುರ ಬಸ್ರೂರು ಶ್ರೀ ಮಹಾಲಿಂಗ ಭಂಡಾರಿ ಮತ್ತು ಶ್ರೀಮತಿ ವಸಂತಮ್ಮ ಮಹಾಲಿಂಗ ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ರಾಧಿಕಾ ನಾಗರಾಜ ಭಂಡಾರಿಯವರು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿ ಹದಿನಾರು ವಸಂತಗಳನ್ನು ಪೂರೈಸಿ ಹದಿನೇಳನೇ ವರ್ಷಕ್ಕೆ ಕಾಲಿಟ್ಟ ಈ ಶುಭ ಗಳಿಗೆಯಲ್ಲಿ ಅವರಿಗೆ ಅವರ ತಂದೆ ತಾಯಿ, ಅತ್ತೆ ಮಾವ,ಮಕ್ಕಳಾದ ಮಾಸ್ಟರ್ ಕಾರ್ತಿಕ್ ಭಂಡಾರಿ, ಮಾಸ್ಟರ್ ಕೌಶಿಕ್ ಭಂಡಾರಿ ಮತ್ತು ಬಂಧು ಬಳಗದವರು ಶುಭ ಹಾರೈಸಿದ್ದಾರೆ.
ವಿವಾಹ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿರುವ ದಂಪತಿಗೆ ಭಗವಂತನು ಸಕಲ ಸಂಪತ್ತನ್ನು ನೀಡಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ