

ಉಡುಪಿ ಚಿಟ್ಪಾಡಿಯ ಶ್ರೀ ರಾಘವ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ರಾಘವ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಮೂವತ್ತೆರಡನೇ ವರ್ಷದ ವಾರ್ಷಿಕೋತ್ಸವವನ್ನು ಮೇ 12 ರ ಶನಿವಾರ ಕುಟುಂಬದವರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ದಿವಂಗತ ಬೈಲೂರು ವಾಸು ಭಂಡಾರಿ ಮತ್ತು ಬೈಲಕೆರೆ ಗುಲಾಬಿ ವಾಸು ಭಂಡಾರಿಯವರ ಪುತ್ರರಾದ ಶ್ರೀ ರಾಘವ ಭಂಡಾರಿ ಹಾಗೂ ದಿವಂಗತ ಕುಂಟಾಡಿ ವಾಮನ ಭಂಡಾರಿ ಮತ್ತು ಪಾರ್ವತಿ ವಾಮನ ಭಂಡಾರಿಯವರ ಪುತ್ರಿ ಶ್ರೀಮತಿ ಮೋಹಿನಿ ರಾಘವ ಭಂಡಾರಿಯವರ ದಾಂಪತ್ಯ ಜೀವನಕ್ಕೀಗ ಮೂವತ್ತೆರಡು ವಸಂತಗಳು ಕಳೆದು ಮೂವತ್ತ್ಮೂರರ ಹರೆಯ.
ಈ ಶುಭ ಗಳಿಗೆಯಲ್ಲಿ ಅವರಿಗೆ ಮಗ ಶ್ರೀ ಕಿರಣ್ ಕುಮಾರ್ ಚಿಟ್ಪಾಡಿ,ಮಗಳು ಶ್ರೀಮತಿ ವಾಣಿ ಮನೋಹರ ಭಂಡಾರಿ,ಅಳಿಯ ಶ್ರೀ ಮನೋಹರ ಭಂಡಾರಿ, ತೊಕೂರು,ಮೊಮ್ಮಗ ಶುಭಾಂಗ್ ಹಾಗೂ ಬಂಧು ಮಿತ್ರರು ಶುಭ ಹಾರೈಸಿದ್ದಾರೆ.
ದಾಂಪತ್ಯ ಜೀವನದ ಮೂವತ್ತೆರಡು ವಸಂತಗಳನ್ನು ಸಂತೃಪ್ತಿಯಾಗಿ ಪೂರೈಸಿ ಮೂವತ್ತ್ಮೂರಕ್ಕೆ ಕಾಲಿಟ್ಟ ಈ ಸಮುಹೂರ್ತದಲ್ಲಿ ಭಗವಂತನು ಹಿರಿಯ ದಂಪತಿಗೆ ಆಯುರಾರೋಗ್ಯವನ್ನು ನೀಡಿ,ಇನ್ನಷ್ಟು ವರ್ಷ ಲವಲವಿಕೆಯಿಂದ ಬಾಳುವಂತೆ ಹರಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಮನಃಪೂರ್ವಕ ಹಾರೈಕೆಗಳು.
“ಭಂಡಾರಿವಾರ್ತೆ.”