

ಉಡುಪಿ ಕುತ್ಪಾಡಿಯ ಶ್ರೀ ಸದಾಶಿವ ಭಂಡಾರಿ ಮತ್ತು ಶ್ರೀಮತಿ ಶಕುಂತಲ ಸದಾಶಿವ ಭಂಡಾರಿ ದಂಪತಿಯು ತಮ್ಮ ವೈವಾಹಿಕ ಜೀವನದ ಮೂವತ್ತೆರಡನೇ ವರ್ಷದ ವಾರ್ಷಿಕೋತ್ಸವವನ್ನು ಮೇ 12 ರ ಶನಿವಾರ ಕುಟುಂಬದವರೊಂದಿಗೆ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ದಿವಂಗತ ಕುತ್ಪಾಡಿ ಶೀನ ಭಂಡಾರಿ ಮತ್ತು ಶ್ರೀಮತಿ ಶಾರದ ಶೀನ ಭಂಡಾರಿಯವರ ಪುತ್ರರಾದ ಶ್ರೀ ಸದಾಶಿವ ಭಂಡಾರಿ ಹಾಗೂ ದಿವಂಗತ ಬೈಲೂರು ವಾಸು ಭಂಡಾರಿ ಮತ್ತು ಬೈಲಕೆರೆ ಗುಲಾಬಿ ವಾಸು ಭಂಡಾರಿಯವರ ಪುತ್ರಿ ಶ್ರೀಮತಿ ಶಕುಂತಲ ಸದಾಶಿವ ಭಂಡಾರಿಯವರ ದಾಂಪತ್ಯ ಜೀವನಕ್ಕೀಗ ಮೂವತ್ತೆರಡು ವಸಂತಗಳು ಕಳೆದು ಮೂವತ್ತ್ಮೂರರ ಹರೆಯ.
ಈ ಶುಭ ಗಳಿಗೆಯಲ್ಲಿ ಅವರಿಗೆ ಮಕ್ಕಳಾದ ಶ್ರೀಮತಿ ವೀಣ ಅನಿಲ್ ಕೊಕ್ಕರ್ಣೆ, ಶ್ರೀಮತಿ ವಿದ್ಯಾ ರಾಘವೇಂದ್ರ ಬಾಣಿಗ, ಅಳಿಯಂದಿರಾದ ಶ್ರೀ ಅನಿಲ್ ಕೊಕ್ಕರ್ಣೆ, ಶ್ರೀ ರಾಘವೇಂದ್ರ ಬಾಣಿಗ, ಮೊಮ್ಮಗಳು ಆನ್ವಿ ಹಾಗೂ ಬಂಧು ಮಿತ್ರರು ಶುಭ ಹಾರೈಸಿದ್ದಾರೆ.
ದಾಂಪತ್ಯ ಜೀವನದ ಮೂವತ್ತೆರಡು ವಸಂತಗಳನ್ನು ಸಂತೃಪ್ತಿಯಾಗಿ ಪೂರೈಸಿ ಮೂವತ್ತ್ಮೂರಕ್ಕೆ ಕಾಲಿಟ್ಟ ಈ ಸಮುಹೂರ್ತದಲ್ಲಿ ಭಗವಂತನು ಹಿರಿಯ ದಂಪತಿಗೆ ಆಯುರಾರೋಗ್ಯವನ್ನು ನೀಡಿ, ಇನ್ನಷ್ಟು ವರ್ಷ ಲವಲವಿಕೆಯಿಂದ ಬಾಳುವಂತೆ ಹರಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಮನಃಪೂರ್ವಕ ಹಾರೈಕೆಗಳು.
“ಭಂಡಾರಿವಾರ್ತೆ.”